•  

ಮೋಕಾ : ಉಗ್ರ ಸಾದಿಕ್ ಶೇಖ್ ಖುಲಾಸೆ

ಮಂಗಳವಾರ, ಮೇ 12, 2009, 11:00 [IST]
  Read:  In English 
ಮುಂಬೈ, ಮೇ. 12 : 2006 ರಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದಿದ್ದ ಸರಣಿ ರೈಲು ಸ್ಫೋಟಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಇಂಡಿಯನ್ ಮುಜಾಹೀದಿನ್ ಸಂಸ್ಥಾಪಕ ಎನ್ನಲಾದ ಸಾದಿಕ್ ಶೇಖ್ ನನ್ನು ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ (ಮೊಕಾ) ನ್ಯಾಯಾಲಯ ಖುಲಾಸೆಗೊಳಿಸಿದೆ.

2006ರ ನವೆಂಬರ್ 7 ರಂದು ದೆಹಲಿ, ಮುಂಬೈ, ವಾರಾಣಾಸಿ ರೈಲುಗಳಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಸುಮಾರು 180ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ಇಂಡಿಯನ್ ಮುಜಾಹೀದಿನ್ ಸಂಸ್ಥಾಪಕ ಸದಸ್ಯ ಸಾದಿಕ್ ಶೇಖ್ ನನ್ನು ಬಂಧಿಸಿದ್ದ ಮುಂಬೈ ಭಯೋತ್ಪಾದನೆ ನಿಗ್ರಹ ಪಡೆ ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಕಳೆದ ಎಂಟು ತಿಂಗಳನಿಂದ ನಡೆದ ತೀವ್ರ ವಿಚಾರಣೆಯಲ್ಲಿ ಘಟನೆಯಲ್ಲಿ ಆರೋಪಿ ಕೈವಾಡವಿರುವ ಬಗ್ಗೆ ಪೊಲೀಸರು ಸೂಕ್ತ ಸಾಕ್ಷಾಧಾರ ಒದಗಿಸುವಲ್ಲಿ ವಿಫಲವಾಗಿದ್ದರಿಂದ ಸಾದಿಕ್ ನನ್ನು ಮೊಕಾ ನ್ಯಾಯಾಲಯ ಖುಲಾಸೆಗೊಳಿಸಿದೆ.

(ಏಜನ್ಸೀಸ್)
User Comments
ಅಮೆರಿಕನ್ನಡಿಗ 12 May 2009 07:19 pm
ಹಿಂದುಸ್ತಾನದಲ್ಲಿ ಪೊಲೀಸರಿಗೆ ಲಂಚ ಕೊಟ್ಟರೆ ಅವರು ತಮ್ಮ ತಾಯಿ ತಂಗಿಯರ ಲಾಡಿಗೆ ಕೈ ಹಾಕುವ ಕಂತ್ರಿಗಳು. ಹಿಂದುಸ್ತಾನ ಕಾಪಾಡೋ ಭಗವಂತ..
chinnu 12 May 2009 01:54 pm
ಇದರಿಂದ ನಮ್ಮ ದೇಶದ ಕಾನೂನು ಎಷ್ಟು ಬಲಹಿನವಾಗಿದೆ ಎಂದು ಅರ್ಥವಾಗುತದೆ.ನಾಳೆ ಕಸಬ್ ಬಿಡುಗಡೆಯಾದರು ಆಶ್ಚರ್ಯವಿಲ್ಲ.ಒಂದು ಸಾವಿನ ನೋವು ಅರ್ಥವಾಗುವುದು ಕುಟುಂಬಕ್ಕೆ ಮಾತ್ರ .ಇಂತಹವರನ್ನು ಪೊಲೀಸರೆ ಎನ್ಕೌಂಟರ್ ಹೆಸರಿನಲ್ಲಿ ಸುಡಬೇಕು. ಬೇರೆ ದೇಶದಲ್ಲಿ ಅಪರದಿಗೆ ಬೇಗ ಶಿಕ್ಷೆಯಗುತದೆ. ಆದರೆ ನಮ್ಮ ದೇಶದಲ್ಲಿ ನೂರು ಅಪ್ರಡಿ ತಪ್ಪಿಸಿಕೊಂಡರು ಪರವಾಗಿಲ್ಲ ,ಆದರೆ ಒಬ್ಬ ನಿರಾಪರದಿಗೆ ಶಿಕ್ಹ್ಷೆಯಗಬರ್ದು ಎನ್ನುವಂಥಹ ಕಾನೂನು ಬದಲಗಬೇಕು.
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article