ಜೈಪುರ್, ಮೇ. 11 : ರ‌್ಯಾಗಿಂಗ್ ಗೆ ಸಂಬಂಧಿಸಿದಂತೆ ಇತ್ತೀಚೆಗೆ ಸುಪ್ರಿಂಕೋರ್ಟ್ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿ ಇದರ ವಿರುದ್ಧ ಕಠಣ ಕ್ರಮಕೈಗೊಳ್ಳುವಂತೆ ಆದೇಶ ನೀಡಿರುವ ಬೆನ್ನಲ್ಲೇ ಜೈಪುರದ ಸಮೀಪ ಇರುವ ಉದಯ್ ಪುರ್ ವೈದ್ಯಕೀಯ ಕಾಲೇಜುನಲ್ಲಿ ರ್ಯಾಗಿಂಗ್ ನಡೆದಿರುವ ವರದಿಯಾಗಿದೆ. ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಇಬ್ಬರು ಕಿರಿಯ ವಿದ್ಯಾರ್ಥಿಗಳನ್ನು ಥಳಿಸಿದ ಘಟನೆ ನಡೆದಿದ್ದು, ಹಿರಿಯ ವಿದ್ಯಾರ್ಥಿಗಳನ್ನು ಪೊಲೀಸ್ ಬಂಧಿಸಿದ್ದಾರೆ.
ಪ್ರಥಮ ವರ್ಷದ ಎಂಬಿಬಿಎಸ್ ನಲ್ಲಿ ವಿದ್ಯಾಬ್ಯಾಸ ಮಾಡುತ್ತಿರುವ ಹನುಮಂತಗಢದ ಸುನೀಲ್ ಕುಮಾರ್ ಬಾತಿ ಹಾಗೂ ಬಿಲವಾಲ್ ದ ಗೌರವ್ ಲೋಧ ಹೊಡೆತ ತಿಂದವರಾಗಿದ್ದಾರೆ . ಈ ಇಬ್ಬರು ಪ್ರಥಮ ಎಂಬಿಬಿಎಸ್ ನಲ್ಲಿ ಫೇಲ್ ಆಗಿದ್ದರು ಎನ್ನಲಾಗಿದೆ. ಭಾನುವಾರ ಈ ಇಬ್ಬರು ಲೈಬ್ರರಿಯಿಂದ ತಮ್ಮ ಕೊಠಡಿಗೆ ವಾಪಾಸ್ ತೆರಳುತ್ತಿದ್ದಾಗ ಎಂಬಿಬಿಸ್ ಅಂತಿಮ ವರ್ಷದ ವಿದ್ಯಾರ್ಥಿಗಳಾದ ವಿನೋದ್ ಸಿಂಗ್ ಹಾಗೂ ಅಮರ್ ಸಿಂಗ್ ಎಂಬಿಬ್ಬರು ಕಿರಿಯ ವಿದ್ಯಾರ್ಥಿಗಳು ಪ್ರಥಮ ವರ್ಷದಲ್ಲಿ ಫೇಲ್ ಆಗಿದ್ದಕ್ಕೆ ಥಳಿಸಿದರು ಎನ್ನಲಾಗಿದೆ.
(ಏಜನ್ಸೀಸ್)
ರ‌್ಯಾಗಿಂಗ್ ತಡೆಯಲು ಸುಪ್ರಿಂಕೋರ್ಟ್ ಆದೇಶ
ರ‌್ಯಾಗಿಂಗ್, ಆಂಧ್ರ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

Read: In English
ಕಿರಿಯ ವಿದ್ಯಾರ್ಥಿಗಳು ಹಾತಿಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಹಿರಿಯ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಕಾಲೇಜು ಆಡಳಿತ ಮಂಡಲಿ ಹಿರಿಯ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಿದ್ದಾರೆ ಎಂದು ವರದಿಯಾಗಿದೆ. (ಏಜನ್ಸೀಸ್)
ರ‌್ಯಾಗಿಂಗ್ ತಡೆಯಲು ಸುಪ್ರಿಂಕೋರ್ಟ್ ಆದೇಶ
ರ‌್ಯಾಗಿಂಗ್, ಆಂಧ್ರ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ