ನವದೆಹಲಿ, ಮೇ. 11 : ಐದನೇ ಹಾಗೂ ಅಂತಿಮ ಹಂತದ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ 5 ಗಂಟೆಗೆ ತೆರೆಬೀಳಲಿದೆ. ಮೇ 13 ರಂದು ಮತದಾನ ನಡೆಯಲಿದ್ದು, ಮತದಾರರ ಮನವೊಲಿಸಲು ರಾಜಕೀಯ ಪಕ್ಷಗಳ ಮುಖಂಡರು ಕೊನೆಯ ಕಸರತ್ತು ನಡೆಸಿದ್ದಾರೆ.
ಮೇ 13 ರಂದು ನಡೆಯಲಿರುವ ಮತದಾನದಲ್ಲಿ ಕೇಂದ್ರದ ಗೃಹ ಸಚಿವ ಪಿ ಚಿದಂಬರಂ, ದಯಾನಿಧಿ ಮಾರನ್, ಟಿ ಆರ್ ಬಾಲು, ಎ ರಾಜಾ, ಎಂಡಿಎಂಕೆ ವೈಕೋ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಬಿಜೆಪಿಯ ಪೋಸ್ಟರ್ ಬಾಯ್ ವರುಣ್ ಗಾಂಧಿ, ಕ್ರಿಕೆಟಿಗ ಮೊಹ್ಮದ್ ಅಜರುದ್ದೀನ್, ಜಯಪ್ರದಾ ಅವರು ಅಗ್ನಿಪರೀಕ್ಷೆ ನಡೆಸಲಿದ್ದಾರೆ.
(ಏಜನ್ಸೀಸ್)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

Read: In English
ಅಂತಿಮ ಹಂತದ ಚುನಾವಣೆಯಲ್ಲಿ 86 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ತಮಿಳುನಾಡು-39, ಉತ್ತರ ಪ್ರದೇಶ-14, ಪಶ್ಚಿಮ ಬಂಗಾಲ-11, ಪಂಜಾಬ-11, ಉತ್ತರಖಂಡ-5, ಹಿಮಾಚಲ ಪ್ರದೇಶ-4, ಜಮ್ಮು ಕಾಶ್ಮೀರ-2 ಮತ್ತು ಚಂಡೀಗಢ ಮತ್ತು ಪಾಂಡಿಚೇರಿ ರಾಜ್ಯಗಳಲ್ಲಿ ತಲಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. (ಏಜನ್ಸೀಸ್)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು