•  

ಪ್ರಭಾಕರನ್ ಕೂದಲು ಕೊಂಕಿದರೆ ರಕ್ತದೋಕುಳಿ

ಗುರುವಾರ, ಏಪ್ರಿಲ್ 9, 2009, 11:27 [IST]
Prabhakaran lives in the hearts of Tamils: Vaiko
ಚೆನ್ನೈ, ಏ. 9 : ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ ಗಾಂಧಿ ಹತ್ಯೆ ಮಾಡಿದ ನಿಷೇಧಿತ ಉಗ್ರಗಾಮಿ ಸಂಘಟನೆ ಎಲ್ ಟಿಟಿಇಗೆ ಮರುಮಲಾರ್ಚಿ ದ್ರಾವಿಡ ಮುನ್ನೆತ್ರ ಕಜಗಂ (ಎಂಡಿಎಂಕೆ) ನಾಯಕ ವೈಕೋ ಮತ್ತೊಮ್ಮೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ತಮಿಳರ ಆರಾಧ್ಯದೈವನಾಗಿರುವ ವೇಲುಪಿಲೈ ಪ್ರಭಾಕರನ್ ಅವರ ಕೂದಲು ಕೊಂಕಿದರೂ ಸಹ ತಮಿಳುನಾಡಿನಲ್ಲಿ ರಕ್ತದ ಓಕುಳಿ ಹರಿಯುವುದು ಖಚಿತ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
  Read:  In English 
ಪ್ರಭಾಕರನ್ ತಮಿಳರ ಹೃದಯದಲ್ಲಿ ಅತ್ಯುನ್ನತ ಸ್ಥಾನ ಪಡೆದುಕೊಂಡಿದ್ದಾನೆ. ಆತನನ್ನು ಅನೇಕ ತಮಿಳರು ದೇವರಿಗಿಂತ ಹೆಚ್ಚಾಗಿ ಪ್ರೀತಿಸಿ, ಪೂಜಿಸುತ್ತಾರೆ. ಇಂತಹ ಮನುಷ್ಯನಿಗೆ ಏನಾದರೂ ಆದಲ್ಲಿ ಭಾರಿ ಅನಾಹುತ ಕಾದಿದೆ ಎಂದು ವೈಕೋ ಹೇಳಿದ್ದಾರೆ. ಚುನಾವಣೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಲೋಕಸಭೆ ಚುನಾವಣೆಯಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ವೈಕೋ ತಮಿಳುನಾಡಿನ ನಾಲ್ಕು ಕ್ಷೇತ್ರಗಳಲ್ಲಿ ಎಡಿಎಂಕೆ ಕಣಕ್ಕಿಳಿಯಲಿದೆ. ಶ್ರೀಲಂಕಾ ಸರ್ಕಾರ ಎಲ್ ಟಿಟಿಇ ನಿರ್ನಾಮ ಮಾಡಬೇಕು ಎಂದು ಅನೇಕ ದಿನಗಳಿಂದ ದಾಳಿ ನಡೆಸಿದೆ. ಎಲ್ ಟಿಟಿಇ ಕೈಯಲ್ಲಿದ್ದ ಬಹುತೇಕ ಪ್ರದೇಶಗಳನ್ನು ಲಂಕಾ ಸರ್ಕಾರ ವಶಪಡಿಸಿಕೊಂಡಿದೆ. ಪ್ರಭಾಕರನ್ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿತ್ತು.

(ದಟ್ಸ್ ಕನ್ನಡ ವಾರ್ತೆ)
User Comments
ಇಂಡಿಯನ್ 10 Apr 2009 06:20 pm
ಅವನೇನು ಭಾರತದವನಾ? ಅವನಿಗೇಕೆ ಈ ಬಕೇಟು ಹಿಡಿಯುವ ಕೆಲಸ? ಈ ಥರದ ಹೊಲಸು ವೋಟು ಭಿಕ್ಷೆಗೆ ಧಿಕ್ಕಾರಾ.
raani 10 Apr 2009 06:26 am
if it goes like this one day whole world call tamilians are terrorists. they are the most dangerous people among indians.
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article