•  

41 ವರ್ಷದ ಬಳಿಕ ಭಾರತಕ್ಕೆ ಐತಿಹಾಸಿಕ ಸರಣಿ

ಮಂಗಳವಾರ, ಏಪ್ರಿಲ್ 7, 2009, 12:03 [IST]
India register historic series victory against New Zealand
ವೆಲ್ಲಿಂಗ್ಟನ್, ಏ. 7 : ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಮೂರನೆಯ ಕ್ರಿಕೆಟ್ ಟೆಸ್ಟ್ ಮಳೆಯ ಅಡಚಣೆಯಿಂದ ಡ್ರಾಗೊಳ್ಳುವ ಮೂಲಕ ಸರಣಿಯನ್ನು 1-0 ಯಿಂದ ಗೆದ್ದುಕೊಂಡು, ಭಾರತ 41 ವರ್ಷಗಳ ಬಳಿಕ ನ್ಯೂಜಿಲ್ಯಾಂಡ್ ನೆಲದಲ್ಲಿ ಐತಿಹಾಸಿಕ ಸರಣಿ ಜಯ ಸಂಪಾದಿಸಿತು. 41 ವರ್ಷಗಳ ಹಿಂದೆ ಮನ್ಸೂರ್ ಆಲಿ ಖಾನ್ ಪಟೌಡಿ ಮಾಡಿದ್ದ ಸಾಧನೆಯ ನಂತರ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ತಂಡ ಜಯಭೇರಿ ಮೊಳಗಿಸಿದೆ.

ಎರಡನೇ ಟೆಸ್ಟ್ ನ ಕೊನೆ ದಿನವಾದ ಇಂದು ನ್ಯೂಜಿಲೆಂಡ್ ಎಂಟು ವಿಕೆಟ್ ಗೆ 281 ರನ್ ಗಳಿಸಿ ಇನ್ನೇನು ಸೋಲುವ ಹಂತದಲ್ಲಿದ್ದಾಗ ಮಳೆಯ ಅಡಚಣೆಯಿಂದ ಪಂದ್ಯ ಡ್ರಾ ಎಂದು ಘೋಷಿಸಲಾಯಿತು.

ಸಂಕ್ಷಿಪ್ತ ಸ್ಕೋರ್: ಭಾರತ ಮೊದಲ ಇನಿಂಗ್ಸ್ 379 ರನ್ ಗಳು
ಭಾರತ ಎರಡನೇ ಇನಿಂಗ್ಸ್ ; 434/7 ಡಿಕ್ಲೇರ್
ನ್ಯೂಜಿಲ್ಯಾಂಡ್ ಮೊದಲ ಇನಿಂಗ್ಸ್ 197 ರನ್ ಗಳು
ಎರಡನೇ ಇನಿಂಗ್ಸ್ : 281 ಕ್ಕೆ ಎಂಟು ವಿಕೆಟ್ ನಷ್ಟ
ಪಂದ್ಯ ಪುರುಷ ಮತ್ತು ಸರಣಿ ಪುರುಷೋತ್ತಮ ; ಗೌತಮ್ ಗಂಭೀರ್
  Read:  In English 
ದ್ರಾವಿಡ್ ದಾಖಲೆ

ಟೆಸ್ಟ್ ಕ್ರಿಕೆಟ್ ನಲ್ಲಿ ಮಾರ್ಕ್ ವಾ ಹೆಸರಿನಲ್ಲಿದ್ದ ಅತಿ ಹೆಚ್ಚು ಕ್ಯಾಚ್ ಪಡೆದ ದಾಖಲೆಯನ್ನು ರಾಹುಲ್ ದ್ರಾವಿಡ್ ಈ ಟೆಸ್ಟ್ ನಲ್ಲಿ ಮುರಿದು ನೂತನ ದಾಖಲೆ ನಿರ್ಮಿಸಿದ್ದಾರೆ. ತನ್ನ 134ನೇ ಟೆಸ್ಟ್ ನಲ್ಲಿ 182ನೇ ಕ್ಯಾಚ್ ಪಡೆದ ದ್ರಾವಿಡ್ ಈ ಹಿಂದೆ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಮಾರ್ಕ್ ವಾ 128 ಟೆಸ್ಟ್‌ಗಳಿಂದ 181 ಕ್ಯಾಚ್ ಪಡೆದಿದ್ದ ದಾಖಲೆಯನ್ನು ಹಿಂದಕ್ಕೆ ಹಾಕಿದರು.

(ದಟ್ಸ್ ಕನ್ನಡ ವಾರ್ತೆ)

&13;
User Comments
Anil 07 Apr 2009 02:02 pm
We should have won 3rd match also but Am not sure what was there in Dhoni's mind yesterday he should not have batted for 20 odd overs yesterday this makes them to Draw the test.
ಮಹೇಶ 07 Apr 2009 01:33 pm
ಅಭಿನಂದನೆ ಟಿಮ್ ಇಂಡಿಯಾ
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article