•  

ಶ್.....ಮಹಿಳಾ ಫಿದಾಯಿನ್ ಗಳು ಎಂಟ್ರಿ

ಗುರುವಾರ, ಏಪ್ರಿಲ್ 2, 2009, 13:02 [IST]
ನವದೆಹಲಿ, ಏ. 2 : ಅತ್ಯಂತ ಗಂಭೀರವಾದ ಮತ್ತು ಆಘಾತಕಾರಿ ಮಾಹಿತಿಯೊ೦ದನ್ನು ಗುಪ್ತಚರ ಇಲಾಖೆ ಕೇಂದ್ರ ಗೃಹ ಮತ್ತು ರಕ್ಷಣಾ ಸಚಿವಾಲಯಕ್ಕೆ ರವಾನಿಸಿದೆ. 'ಮಿಷನ್ ಟೆರರ್' ಮೂಲಕ ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ನುರಿತ ಏಳರಿಂದ ಎಂಟು ಪೈಲಟ್ ಗಳು ಮತ್ತು ಸುಮಾರು ಹನ್ನೆರಡು ಮಹಿಳಾ ಫಿದಾಯಿನ್ ಗಳು ದೇಶದೊಳಗೆ ಪ್ರವೇಶಿಸಿದ್ದಾರೆಂದು ಗುಪ್ತಚರ ಇಲಾಖೆ ಮಾಹಿತಿ ರವಾನಿಸಿದ್ದು, ಭಾರಿ ಕಟ್ಟೆಚ್ಚರದಲ್ಲಿರುವ೦ತೆ ವಹಿಸುವಂತೆ ಎಚ್ಚರಿಕೆ ನೀಡಿದೆ.
  Read:  In English 
ಮುಂಬೈ ಪೊಲೀಸರಿಗೆ ಈ ಸಂಬಂಧ ಒಂದು ವಾರದ ಹಿಂದೆ ಇಮೇಲ್ ಬೆದರಿಕೆ ಬಂದಿದ್ದು , ಅಲ್ಲದೇ ಮುಂಬೈ ತಾಜ್ ಮಹಲ್ ಮತ್ತು ಚೆನ್ನೈ ತಾಜ್ ಪ್ರಾಪರ್ಟಿ ಹೋಟೆಲ್ ಗಳಿಗೆ ಕೂಡ ಇಮೇಲ್ ಬಂದಿರುವುದನ್ನು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸುಮಾರು 20 ಮಂದಿಯ ತಂಡವೊಂದು ಭಯೋತ್ಪಾದನಾ ಕೃತ್ಯಗಳು ನಡೆಸುವುದು ಮತ್ತು ವಿಮಾನ ಅಪಹರಣ ನಡೆಸಲು ದೇಶದೊಳಗೆ ನುಸುಳಿದ್ದಾರೆ. ಇವರೆಲ್ಲಾ ಪಾಕಿಸ್ತಾನಿ ಪ್ರಜೆಗಳಾಗಿರಬಹುದು ಎಂದು ಇಲಾಖೆ ಎಚ್ಚರಿಸಿದೆ. ಇದುವರೆಗಿನ ಬೆದರಿಕೆಗಳಲ್ಲಿ ಇದು ಅತ್ಯಂತ ಗಂಭೀರವಾದುದಾಗಿದೆ ಎಂದು ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ ಬಿಜೆಪಿ ಮುಖಂಡರಾದ ಆಡ್ವಾಣಿ, ನರೇಂದ್ರ ಮೋದಿ, ರಾಜನಾಥ್ ಸಿಂಗ್, ವರುಣ್ ಗಾಂಧಿ ಮತ್ತು ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಉಗ್ರರ ಪಟ್ಟಿಯಲ್ಲಿರುವ ಹಿನ್ನಲೆಯಲ್ಲಿ ಕೇಂದ್ರ ಗೃಹಸಚಿವ ಚಿದಂಬರಂ ಈ ಎಲ್ಲಾ ಮುಖಂಡರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ 'ರೋಡ್ ಶೋ ' ನಡೆಸದಂತೆ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

(ದಟ್ಸ್ ಕನ್ನಡ ವಾರ್ತೆ)
ಡಿ ಗ್ಯಾಂಗ್ ನ ಛೋಟಾ ಶಕೀಲ್ ನಿಂದ ಬೆದರಿಕೆ ಕರೆ

&13;
User Comments
ಸ್ಟೀವೆನ್ ಕ್ವಾದ್ರಸ ಹಾಸನ 02 Apr 2009 06:44 pm
ಮಹಿಳಾ ಪಿಧಯಿನ್ ಗಳೇ ಬಹಳ ಸಂತೋಷ ! ಪುರುಷ ಪಿಧಯಿನ್ ಗಳಿಗೆ ಸ್ವರ್ಗದಲ್ಲಿ ೭೩ ಕನ್ಯೆಯರು ಸಿಗುತಾರೆ ಇವರಿಗೆ ಏನು ಸಿಗುತೆ ?
ಮುಗ್ದ ನಾಗರಿಕ್ 02 Apr 2009 05:25 pm
ಈ ಚುನಾವಣೆ ಸಮಯದಲ್ಲಿ ಏಕೇ...........ಇದರ ಹಿಂದೆ ರಾಜಕಿಯ್ ಕೈವಾಡವೇ............
[ ಅಭಿಪ್ರಾಯ ಬರೆಯಿರಿ ]
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article