•  

ತೃತೀಯ ರಂಗಕ್ಕೆ ಅಸ್ತಿತ್ವ ಇಲ್ಲ : ಎಲ್ ಕೆ ಅಡ್ವಾಣಿ

ಮಂಗಳವಾರ, ಮಾರ್ಚ್ 31, 2009, 18:15 [IST]
There is no 'third front': Advani
ನವದೆಹಲಿ, ಮಾ. 31:"ಹಲವು ಸಣ್ಣ ಪುಟ್ಟ ಪಕ್ಷಗಳು ಸೇರಿ ಮಾಡಿರುವ ತೃತೀಯ ರಂಗಕ್ಕೆ ಅಸ್ತಿತ್ವವಿಲ್ಲ. ಎನ್ ಡಿಎ ಅಧಿಕಾರಿಕ್ಕೆ ಬಂದರೆ, ಸರ್ಕಾರ ರಚನೆಗೆ ಇದೇ ಸಣ್ಣ ಪಕ್ಷಗಳು ಸಹಾಯ ಮಾಡಲಿವೆ " ಎಂದು ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಎಲ್ ಕೆ ಅಡ್ವಾಣಿ ಹೇಳಿದ್ದಾರೆ.

ದೇಶದ ಎರಡು ಪ್ರಮುಖ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಅನ್ನು ಹೊರತು ಪಡಿಸಿ ಉಳಿದ ರಾಜಕೀಯ ಪಕ್ಷಗಳು ಒಂದೆಡೆ ಸೇರಿ ತೃತೀಯ ರಂಗ ರಚನೆ, ಅಧಿಕಾರದ ಕನಸು ಕಾಣುತ್ತಿದ್ದಾರೆ. ಇದು ಸಾಧ್ಯವಿಲ್ಲ ಎಂದು ಅಡ್ವಾಣಿ ಹೇಳಿದರು.

ಮುಸ್ಲಿಂ ಮತಗಳನ್ನು ಪಡೆಯಲು ಪ್ರಾದೇಶಿಕ ಪಕ್ಷಗಳು ಅನೇಕ ತಂತ್ರಗಳನ್ನು ಹೂಡಿವೆ. ಆದರೆ ಚುನಾವಣೆ ನಂತರ ಆ ಪಕ್ಷಗಳು ಎನ್ ಡಿಎಯೊಂದಿಗೆ ವಿಲೀನವಾಗುವುದು ಖಂಡಿತಾ. ಕಾಂಗ್ರೆಸ್ ಪಕ್ಷದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಬಿಜೆಪಿ ಉದಯವಾಯಿತು. ಆಗಿನಿಂದಲೂ ರಾಷ್ಟ್ರೀಯ ಮಟ್ಟದಲ್ಲಿ ಈ ಎರಡು ಪಕ್ಷಗಳೇ ಪ್ರಮುಖ ಪಾತ್ರ ವಹಿಸಿವೇ ಹೊರತು ಇತರ ಪಕ್ಷಗಳಲ್ಲ. ಅವಕಾಶವಾದಿಗಳೆಲ್ಲ ಒಂದೆಡೆ ಸೇರಿದ ತಕ್ಷಣ ಅಧಿಕಾರ ಸಿಕ್ಕ ಹಾಗೆ ಎಂದೆನಿಸುವುದು ತಪ್ಪು ಎಂದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಛಿದ್ರಗೊಳ್ಳುತ್ತಿದ್ದು, ಆರ್ ಜೆಡಿ, ಎಲ್ ಜೆಪಿ ಹಾಗೂ ಎಸ್ ಪಿ ಉತ್ತರಪ್ರದೇಶದಲ್ಲಿ ಕೈ ಜೋಡಿಸಿರುವುದು ಮುಂಬರುವ ಚುನಾವಣಾ ದೃಷ್ಟಿಯಿಂದ ಯುಪಿಎಗೆ ಶುಭಸೂಚನೆ ಅಲ್ಲ ಎಂದು ಅಡ್ವಾಣಿ ನುಡಿದರು.

(ಏಜೆನ್ಸೀಸ್)
ಆಡ್ವಾಣಿ ಪ್ರಧಾನಿಯಾದರೆ ಲಾಲೂ ನಿವೃತ್ತಿ

&13;
User Comments
ಹಮೀದ್ ಕೋಡಿ 01 Apr 2009 06:26 pm
ತ್ರತೀಯ ರಂಗ ಮುಂದಿನ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ರಾಷ್ಟ್ರೀಯ ಪಕ್ಷಗಳಿಂದ ನಾಡಿಗೆ ದ್ರೋಹವಾಗಿದೆ. ರಾಷ್ಟ್ರೀಯ ಪಕ್ಷಗಳ ಸ್ಥಿತಿ ಈಗ ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತದೆ.
ಸರ್ವಿಸ್ ತಿಮ್ಮ 01 Apr 2009 04:26 am
ಅದ್ವಾನಿಯವರೇ, ತೃತೀಯ ರಂಗ ಸಾಲದೆಂದು ಯುಪಿ ಬಿಹಾರದ ಯದುಕುಲ ತಿ(ರು)ಲಕರೆಲ್ಲ ಸೇರಿ ಚತುರ್ಥ ರಂಗ ಮಾಡಿದ್ದಾರೆ. ಅದರ ಬಗ್ಗೆ ತಮ್ಮ ಅಭಿಪ್ರಾಯವೇನು?
[ ಅಭಿಪ್ರಾಯ ಬರೆಯಿರಿ ]
IPL, Himachal Pradesh Cricket Association Stadium, Dharmasala
Chennai Super Kings: 101 / 5, 18 Overs
1st Test , Lord's Cricket Ground, St John's Wood
West Indies: 75 / 2, 25.5 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article