•  

ಚುನಾವಣೆ ಸ್ಪರ್ಧೆ ನನ್ನ ವಯಸ್ಸಿಗೆ ಮೀರಿದ್ದು: ಇನ್ಫಿ ಮೂರ್ತಿ

ಶನಿವಾರ, ಮಾರ್ಚ್ 28, 2009, 14:56 [IST]
 I am too old to contest elections: Narayana Murthy
ಬೆಂಗಳೂರು, ಮಾ. 28: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತ ಬುದ್ಧಿಜೀವಿಗಳು, ಶಿಕ್ಷಣತಜ್ಞರು, ಅನಿವಾಸಿ ಕನ್ನಡಿಗರು ಅಖಾಡಕ್ಕೆ ಇಳಿಯುತ್ತಿರುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇನ್ಫೋಸಿಸ್ ಟೆಕ್ನಾಲಜೀಸ್ ನ ಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರನ್ನು 'ನೀವು ಈ ಬಾರಿ ಸ್ಪರ್ಧಿಸುತ್ತೀರಾ?' ಎಂದು ಕೇಳಿದಾಗ, "ನನಗೀಗ 62 ವರ್ಷ, ಚುನಾವಣೆಯಲ್ಲಿ ಸ್ಪರ್ಧಿಸುವ ವಯೋಮಿತಿ ಮೀರಿದ್ದೀನಿ. ನನಗೆ ಸ್ಪರ್ಧಿಸುವ ಮನಸ್ಸಿಲ್ಲ. ಆದರೆ ಖಂಡಿತಾ ಮತದಾನ ಮಾಡುತ್ತೇನೆ" ಎಂದು ಉತ್ತರಿಸಿದ್ದಾರೆ.

ನಮ್ಮ ದೇಶದ ಪ್ರಜಾಪ್ರಬುತ್ವ ಇನ್ನೂ ಶೈಶವದಲ್ಲಿದೆ ಕಾಲಕಳೆದಂತೆ ಪ್ರಬುದ್ಧತೆ ಪಡೆಯುತ್ತದೆ ಎಂದ ಇನ್ಫಿ ಮೂರ್ತಿ, ಜಾಗತಿಕ ಆರ್ಥಿಕ ಕುಸಿತದಿಂದ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಹಿನ್ನೆಡೆ ಉಂಟಾಗಿರುವುದು ನಿಜ. ಆದರೆ ಅದು ಶಾಶ್ವತವಲ್ಲ. ಸಂಘಟಿತ ಕಾರ್ಯ ಯೋಜನೆಯಿಂದಏಳಿಗೆ ಸಾಧ್ಯವಿದೆ. ಈಗಷ್ಟೇ ವೃತ್ತಿಗೆ ಸೇರಿರುವ ಕಿರಿಯ ಉದ್ಯೋಗಿಗಳಿಗೆ ಇದು ಪಾಠ ಕಲಿಯುವ ಕಾಲ. ಸಹನೆ ಮುಖ್ಯ ಎಂದರು.

(ದಟ್ಸ್ ಕನ್ನಡ ವಾರ್ತೆ)
ಕನಸುಕಂಗಳ 'ರಾಜಕಾರಣಿ' ರಾಜೀವ್ ಗೌಡ
ಬ್ಯಾಂಕರ್ ಮೀರಾ ಸನ್ಯಾಲ್ ಮುಂಬೈದಿಂದ ಕಣಕ್ಕೆ
User Comments
ನಾಗರಾಜ ರಾವ್ ಟೊರೋ೦ಟೊ 18 Jan 2010 06:29 am
ಶ್ರೀಯುತ ನಾರಾಯಣ ಮೂರ್ತಿ ಅವರು ರಾಜಕೀಯಕ್ಕೆ ಪ್ರವೇಶಿಸುವುದು ಒಳ್ಳೆಯದಲ್ಲ.ಬ೦ದ ಹೊಸದರಲ್ಲಿ ಇ೦ದ್ರ ಚ೦ದ್ರ ದೇವೇ೦ದ್ರ ಅ೦ತ ಹೊಗಳಿ, ಇವರ ಹತ್ತಿರ ದುಡ್ಡು ಕೀಳುವವರೇ ಹೆಚ್ಚು.ಕೊಟ್ಟರೆ ವಾಪಸ್ಸು ಬರುವುದಿಲ್ಲ, ಕೊಡದೇ ಇದ್ದರೆ ಇವರ ತಲೆ ಒಡಿಸುವುದಕ್ಕೂ ಹೇಸುವರಲ್ಲ.ಇವರು ದೇಶದ ಅಭ್ಯುದಿಯ ಕಾರ್ಯಕ್ಕೆ ಶುರು ಮಾಡಿದರೆ ಇಲ್ಲದ ತೊ೦ದರೆ ಕೊಟ್ಟು ಇವರನ್ನು ಮೂಲೆ ಗು೦ಪು ಮಾಡುವರೇ ಹೆಚ್ಚು.ಶ್ರೀ ಮೂರ್ತಿ ಅವರು ರಾಜಕೀಯ ಮುತ್ಸದ್ದಿಗಳ ಕಾಟದಿ೦ದ ಪಾರಾಗಿ ಹೋದರೆ ಸಾಕು ಎ೦ಬುವ೦ತೆ ಮಾಡುತ್ತಾರೆ.ಕ೦ಪನಿ ಆಡಳಿತದಲ್ಲಿ ಇವರದೇ ಮೇಲುಗೈ.ರಾಜಕೀಯದಲ್ಲಿ ಹೆಸರಿಗೆ ಮಾತ್ರ ನಾಯಕ, ವಾಸ್ತವವಾಗಿ ಮುತ್ಸದ್ದಿಗಳ ಜವಾನ.
indian 30 Mar 2009 09:45 am
ನಾರಾಯಣ ಮೂರ್ತಿ ಅವರೇ ನೀವು ೬೨ ವರ್ಷಕ್ಕೆ ನನ್ನ ವಯಸ್ಸು ಜಾಸ್ತಿ ಆಯಿತು ಅಂದ್ರಲ್ಲ , ನಮ್ಮ ಮುಧಿ ರಾಜಕಾರಣಿಗಳನ್ನ ನೋಡಿ , ಎಷ್ಟು ವಯಸ್ಸಾದರೂ ಅವರಿಗೆ ಅಧಿಕಾರದ ರಣ ಹಸಿವು.
[ ಅಭಿಪ್ರಾಯ ಬರೆಯಿರಿ ]
IPL, Himachal Pradesh Cricket Association Stadium, Dharmasala
Chennai Super Kings: 101 / 5, 18 Overs
1st Test , Lord's Cricket Ground, St John's Wood
West Indies: 75 / 2, 25.5 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article