•  

ಕರೀಂ ಲಾಲ್ ತೆಲಗಿಗೆ ಏಳು ವರ್ಷ ಕಾರಾಗೃಹ ಶಿಕ್ಷೆ

ಗುರುವಾರ, ಮಾರ್ಚ್ 19, 2009, 14:48 [IST]
Karimlal Telgi
ಅಹಮದಾಬಾದ್, ಮಾ. 19 : ಬಹುಕೋಟಿ ರುಪಾಯಿಗಳ ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ರೂವಾರಿ ಕರೀಂ ಲಾಲ್ ತೆಲಗಿ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ. ಹಾಗೂ ಆತನ ಇಬ್ಬರು ಸಹಚರರಾದ ಸಾಧಿಕ್ ಇಬ್ರಾಹಿಂ ಉಂದಲಿ ಅಲಿಯಾಸ್ ಸಾಧಿಕ್ ನಿಗೆ ಏಳು ವರ್ಷ, ಹಾಗೂ ಸಿದ್ದಾರ್ಥ ಫರ್ನಾಂಡಿಸ್ ಅಲಿಯಾಸ್ ಸಿದ್ಧು ಅಲಿಯಾಸ್ ಪೀಟರ್ ರೂಜೈಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಗುಜರಾತ್ ನಲ್ಲಿ ನಕಲಿ ಛಾಪಾ ಕಾಗದದ ದಂಧೆ ನಡೆಸುತ್ತಿರುವ ಆರೋಪದ ಮೇಲೆ ತೆಲಗಿ ಹಾಗೂ ಆತನ ಸಹಚರರನನ್ನು ಸಿಬಿಐ ಪೊಲೀಸರು ಬಂಧಿಸಿದ್ದರು. ಅಹಮದಾಬಾದ್ ನಗರದ ದೆಹಲಿ ದರವಾಜ್ ಪ್ರದೇಶದಲ್ಲಿ ಅಕ್ರಮವಾಗಿ ನಕಲಿ ಛಾಪಾ ಕಾಗದ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸು. ಆರೋಪಿಗಳಿಂದ ಅಪಾರ ಪ್ರಮಾಣದ ನಕಲಿ ಚಾಪಾ ಕಾಗದ, ಷೇರ್ ಟ್ರಾನ್ಸ್ ಫರ್ ಟಿಕೆಟ್ ಮತ್ತು 3 ಕೋಟಿ ರುಪಾಯಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ತೆಲಗಿಯನ್ನು ತೀವ್ರ ವಿಚಾರಣೆ ಒಳಪಡಿಸಿದ ಪೊಲೀಸರು, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಈ ದಂಧೆ ನಡೆಸಿರುವುದು ಬೆಳಕಿಗೆ ಬಂದಿತ್ತು. ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ತೆಲಗಿಯನ್ನು ನ್ಯಾಯಾಲಯದ ಅನುಮತಿಗೆ ಮೇರೆಗೆ ಇಂದು ಅಹಮದಾಬಾದ್ ನ್ಯಾಯಾಲಯಕ್ಕೆ ಸಿಬಿಐ ಪೊಲೀಸರು ಹಾಜರುಪಡಿಸಲಾಗಿತ್ತು. ಅಹಮದಾಬಾದ್ ನ ಸಬರ್ ಮತಿ ಜೈಲಿನಲ್ಲಿ ತೆಲಗಿಯನ್ನು ಇರಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)
User Comments
prema 20 Nov 2009 03:22 pm
ಗುಡ್ ಪುನಿಷ್ಮೆಂತ್
ಕುಂದಾಪುರ ನಾಗೇಶ್ ಪೈ 20 Mar 2009 10:12 am
ಸತ್ಯ ಮೇವ ಜಯತೆ : ಧರ್ಮ ಸತ್ಯ ನ್ಯಾಯ ಕ್ಕೆ ಜಯ ವಾಗಿದೆ . ಇಲ್ಲಿ ಹೆಣ್ಣು /ಗಂಡು ,ಜಾತಿ ಮತ್ತು ಪಕ್ಷ ರಾಜಕೀಯ ಭೇಧ ವಿಲ್ಲದ ತಿರ್ಮಾನ ಸ್ವಾಗತಾರ್ಹ . ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
[ ಅಭಿಪ್ರಾಯ ಬರೆಯಿರಿ ]
IPL, Himachal Pradesh Cricket Association Stadium, Dharmasala
Chennai Super Kings: 95 / 5, 17.2 Overs
1st Test , Lord's Cricket Ground, St John's Wood
West Indies: 75 / 2, 25.3 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article