•  

ನನ್ನನ್ನು ಪಿಎಂ ಅಭ್ಯರ್ಥಿ ಎಂದು ಘೋಷಿಸಿ: ಮಾಯಾ

ಶುಕ್ರವಾರ, ಮಾರ್ಚ್ 13, 2009, 12:20 [IST]
BSP leader Mayawati
ನವದೆಹಲಿ, ಮಾ. 12 : ಭಾರಿ ಉತ್ಸಾಹದ ಅಲೆಯಲ್ಲಿ ತೇಲುತ್ತಿರುವ ತೃತೀಯ ರಂಗ ಮುಖಂಡರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಸರಿಯಾದ ಗುದ್ದು ನೀಡಿದ್ದಾರೆ. ತೃತೀಯ ರಂಗದ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ತಮ್ಮನ್ನು ಘೋಷಿಸಬೇಕು ಎಂದು ಪಟ್ಟುಹಿಡಿದಿರುವ ಅವರು, ಮಾರ್ಚ್ 15 ಅಂತಿಮ ಗಡುವು ನೀಡಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಗುರುವಾರವಷ್ಟೇ ತೃತೀಯ ರಂಗದ ಒಂಬತ್ತು ಮಂದಿ ಘಟಾನುಘಟಿ ನಾಯಕರು ಕರ್ನಾಟಕದಿಂದ ಅಧಿಕೃತವಾಗಿ ತೃತೀಯ ರಂಗಕ್ಕೆ ಚಾಲನೆ ನೀಡಿದ್ದರು. ತೃತೀಯ ರಂಗ ಸಮಾವೇಶಕ್ಕೆ ಬೆಂಬಲವಾಗಿ ಮಾಯಾವತಿ ತಮ್ಮ ಆಪ್ತರು ಎನ್ನಲಾದ ಸತೀಶ್ ಮಿಶ್ರಾ ಅವರನ್ನು ಕಳುಹಿಸಿಕೊಟ್ಟಿದ್ದರು. ಆದರೆ ಇಂದು ಸಭೆ ಸೇರಿ ಏಕಾಏಕಿ ತೃತೀಯ ರಂಗದ ಮುಖಂಡರ ಮೇಲೆ ಬಾಂಬ್ ಎಸೆದಿರುವ ನುಂಗಲಾರದ ತುತ್ತಾಗಿದೆ.
  Read:  In English 
ಪ್ರಧಾನಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಮಾಯಾವತಿ ಇಂದು ಪಕ್ಷ ಹಿರಿಯರೊಂದಿಗೆ ಮಹತ್ವದ ಸಭೆ ನಡೆಸಿ ತಮ್ಮನ್ನು ತೃತೀಯ ರಂಗದ ಪ್ರಧಾನಮಂತ್ರಿ ಹುದ್ದೆಯ ಅಭ್ಯರ್ಥಿ ಎಂದು ಘೋಷಸಿಬೇಕು ಎಂಬ ನಿರ್ಣಾಯಕ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಭಾರಿ ಉತ್ಸಾಹದಿಂದ ತೃತೀಯ ರಂಗದ ಸಮಾವೇಶವನ್ನು ಆಯೋಜಿಸಿದ್ದ ಎಚ್ ಡಿ ದೇವೇಗೌಡರು ಕೂಡ ಪ್ರಧಾನಮಂತ್ರಿ ಹುದ್ದೆಯ ಅಭ್ಯರ್ಥಿಯಾಗಿದ್ದಾರೆ.

ತೃತೀಯ ರಂಗದಲ್ಲಿ ಹಿರಿಯ ನಾಯಕರಾಗಿರುವ ಗೌಡರು, ಈಗಾಗಲೇ ಈ ಹುದ್ದೆ ಅನುಭವಿಸಿದ್ದು, ಪಿಎಂ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಾರೆ ಎಂಬ ಭರವಸೆ ಇದೆ. ಈ ವಿಷಯದಲ್ಲಿ ಎಡಪಕ್ಷಗಳು ಹಾಗೂ ಟಿಡಿಪಿ ಸಹಮತವಿದೆ ಎನ್ನಲಾಗಿದೆ. ಆದರೆ, ಮಾಯಾವತಿ ಪಿಎಂ ಅಭ್ಯರ್ಥಿ ಘೋಷಿಸಿ ಎಂದು ತೃತೀಯ ರಂಗದ ಮುಖಂಡರಿಗೆ ದುಂಬಾಲು ಬಿದ್ದಿರುವುದು ತೃತೀಯ ರಂಗದ ಭವಿಷ್ಯ ನಿರ್ಣಾಯಕಘಟ್ಟ ತಲುಪಿದಂತಾಗಿದೆ.

(ದಟ್ಸ್ ಕನ್ನಡ ವಾರ್ತೆ)
ಬಿಜೆಪಿ ಸೋಲಿಸಲು ಪ್ರಕಾಶ್ ಕಾರಟ್ ಮನವಿ
ಬಿಜೆಪಿ ಕಿತ್ತೊಗೆಯಲು ತೃತೀಯ ರಂಗದ ಸಮಾವೇಶ

&13;&13;&13;
User Comments
ಧಿಗ್ಗಜ 23 Jun 2010 05:04 pm
ಈ ದೇಶದ ಸಮಸ್ತ ಜನರ ಉದ್ದಾರ ಆಗುವುದಿದ್ದರೆ ಅದು ಮಾಯಾವತಿ ಅಂತ ನೋವು ಅನುಭವಿಸಿದ ವರ್ಗದಿಂದ ಬಂದವರು ಪ್ರಧಾನಿಯಾದಾಗ ಮಾತ್ರ.ಆದ್ದರಿಂದ ಮಾಯಾವತಿಯವರನ್ನು ಬೆಂಬಲಿಸಿ ಈ ದೇಶವನ್ನು ಉಳಿಸಿ.
ದೇವೇಗೌಡ 14 Mar 2009 05:07 pm
ಮಾಯವತಿನ ಪಿ ಎಂ ಸೀಟಿನಿಂದಾ ಕೆಳಗೆ ಇಳಿಸೋದು ಎಷ್ಟೊತ್ತು
[ ಅಭಿಪ್ರಾಯ ಬರೆಯಿರಿ ]
IPL, Himachal Pradesh Cricket Association Stadium, Dharmasala
Chennai Super Kings: 95 / 5, 17.2 Overs
1st Test , Lord's Cricket Ground, St John's Wood
West Indies: 75 / 2, 25.3 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article