•  

ರಾಜನಾಥ್ ವಿರುದ್ಧ ಜೈಟ್ಲಿ ಮುನಿಸು, ಸಭೆಗೆ ಗೈರು

ಶುಕ್ರವಾರ, ಮಾರ್ಚ್ 13, 2009, 14:49 [IST]
Arun Jaitley skips BJP election meeting
ನವದೆಹಲಿ, ಮಾ. 13 : ಚುನಾವಣೆ ಸಮೀಪಿಸುತ್ತಿರುವ ಈ ಗಳಿಗೆಯಲ್ಲಿ ಶಿಸ್ತಿನ ಪಕ್ಷ ಎಂದು ಹೆಗ್ಗಳಿಕೆ ಹೊಂದಿರುವ ಭಾರತೀಯ ಜನತಾ ಪಕ್ಷದಲ್ಲಿ ಆಂತರಿಕ ವೈಮನಸ್ಸು ಸ್ಫೋಟಗೊಂಡಿದೆ. ಬಿಜೆಪಿ ಪಕ್ಷದ ಕೇಂದ್ರ ಚುನಾವಣೆ ಸಮಿತಿ ಇಂದು ಕರೆದಿದ್ದ ಮಹತ್ವದ ಸಭೆಗೆ ಹಿರಿಯ ನಾಯಕ ಅರುಣ್ ಜೈಟ್ಲಿ ಗೈರಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
  Read:  In English 
ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ದೆಹಲಿ, ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗಾಗಿ ಸಭೆಯನ್ನು ಕರೆಯಲಾಗಿತ್ತು. ಆದರೆ, ಈಶಾನ್ಯ ಭಾಗದ ಚುನಾವಣೆ ಪ್ರಚಾರದ ನೇತೃತ್ವ ವಹಿಸಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ರಾಜನಾಥ್ ಸಿಂಗ್ ಅವರೊಂದಿಗೆ ಉಂಟಾಗಿರುವ ಮನಸ್ತಾಪವೇ ಜೈಟ್ಲಿ ಗೈರು ಹಾಜರಾಗಲು ಕಾರಣವಾಗಿದೆ. ಈಶಾನ್ಯ ಭಾಗದ ಪಕ್ಷ ಪ್ರಚಾರ ಸಮಿತಿಗೆ ಸುದಾಂಶು ಮಿತ್ತಲ್ ಅವರನ್ನು ನೇಮಕರ ಮಾಡಿರುವುದು ಜೈಟ್ಲಿ ಮುನಿಸಿಕೊಂಡಿದ್ದಾರೆ. ಸುದಾಂಶು ಅವರು ರಾಜನಾಥ್ ಸಿಂಗ್ ಅವರ ಆಪ್ತರು ಎಂದು ಮೂಲಗಳು ಹೇಳಿವೆ.

ಜೈಟ್ಲಿ ಗೈರು ಸಭೆಯಲ್ಲಿ ನೂರೆಂಟು ಪ್ರಶ್ನೆಗಳಿಗೆ ಕಾರಣವಾಯಿತು. ಲೋಕಸಭೆ ಚುನಾವಣೆಯ ಸೂಕ್ಷ್ಮ ಗಳಿಗೆಯಲ್ಲಿ ಈ ರೀತಿಯ ವರ್ತಿನೆ ಪಕ್ಷದ ಭಾರಿ ಪರಿಣಾಮ ಬೀರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಬಿಹಾರದಲ್ಲಿರುವ 40 ಲೋಕಸಭೆ ಕ್ಷೇತ್ರದಲ್ಲಿ ಜೆಡಿಯು 24 ಕ್ಷೇತ್ರ ಹಾಗೂ ಉಳಿದ 16 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಇದೇ ಸಂದರ್ಭದಲ್ಲಿ ಆಂಧ್ರಪ್ರದೇಶದ, ಒರಿಸ್ಸಾ ವಿಧಾನಸಭೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಸಭೆಯಲ್ಲಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಎಲ್ ಕೆ ಅಡ್ವಾಣಿ, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು ಸೇರಿ ಅನೇಕ ಮುಖಂಡರು ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ವಾರ್ತೆ)
User Comments
ಕುಡ್ಲ 13 Mar 2009 11:16 pm
ಇದು ಕೇವಲ ಸ್ನಾಕ್ಸ್ ಮುಂದೆ ಮುಂದೆ ನೋಡುತ್ತಾ ಇರಿ ...........ಬ ಜಾ ಪಾ ದ ಹಣೆ ಬರಹ.
ಬಿಜೆಪಿ ಕಾರ್ಯಕರ್ತ 13 Mar 2009 04:06 pm
ಇಲ್ಲಿ ಎಡ್ಡಿಯ ಆಸೆಬುರುಕತನದಿಂದ ಪಕ್ಷ ಹಾಳಾಗುತ್ತಿದೆ. ಅಲ್ಲಿ ರಾಜನಾಥನಿಂದ ಪಕ್ಷ ಹಾಳಾಗುತ್ತಿದೆ. ಎಲ್ಲಿದ್ದೀರಾ ಅಡ್ವಾಣಿ, ಮೋದಿಯವರೇ.
[ ಅಭಿಪ್ರಾಯ ಬರೆಯಿರಿ ]
IPL, Himachal Pradesh Cricket Association Stadium, Dharmasala
Chennai Super Kings: 95 / 5, 17.2 Overs
1st Test , Lord's Cricket Ground, St John's Wood
West Indies: 75 / 2, 25.3 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article