ಕಾಂಗ್ರಾ (ಹಿಮಾಚಲ ಪ್ರದೇಶ), ಮಾ. 10 : ರ್ರ್ಯ್ಯಾಗಿಂಗ್ ಗೆ ಸಂಬಂಧಿಸಿದಂತೆ ಕಾಲೇಜ್ ಅದರಲ್ಲಿ ವೃತ್ತಪರ ಕಾಲೇಜುಗಳಲ್ಲಿ ಈ ಪಿಡುಗು ಅವ್ಯಾಹತವಾಗಿ ಮುಂದುವರಿದಿದೆ. ರ್ರ್ಯ್ಯಾಗಿಂಗ್ ಹಿನ್ನೆಲೆಯಲ್ಲಿ ಹಿರಿಯ ವಿಧ್ಯಾರ್ಥಿಗಳಿಂದ ತೀವ್ರ ಹೊಡೆತ ತಿಂದಿದ್ದ ಕಿರಿಯ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ದಾರುಣ ಘಟನೆ ಇಲ್ಲಿನ ರಾಜೇಂದ್ರ ಪ್ರಸಾದ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದಿದೆ.
ದೆಹಲಿ ಮೂಲದ ಅಮನ್ ಖಚ್ರೋ ಮೃತಪಟ್ಟಿರುವ ದುರ್ದೈವಿಯಾಗಿದ್ದಾನೆ. ತನ್ನ ಮೇಲೆ ರ್ಯಾಗಿಂಗ್ ನಡೆಯುತ್ತಿದೆ ಎಂದು ಅಮನ್ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದೆ ಘಟನೆಗೆ ಕಾರಣ ಎನ್ನಲಾಗಿದೆ. ಮೂರನೇ ವರ್ಷದ ಹಿರಿಯ ವಿದ್ಯಾರ್ಥಿಗಳು ಕುಡಿದ ಮತ್ತಿನಲ್ಲಿ ಅಮನ್ ಮೇಲೆ ರ್ರ್ಯ್ಯಾಗಿಂಗ್ ನಡೆಸಿದ್ದಲ್ಲದೆ, ಮನಬಂದಂತೆ ಬಡಿದಿದ್ದರಿಂದ ಅಮನ್ ಸಾವನ್ನಪ್ಪಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)