•  

ಕ್ಯಾಂಪಸ್ ಆಯ್ಕೆ ವಿದ್ಯಾರ್ಥಿಗಳಿಗೆ ಉದ್ಯೋಗ:ಇನ್ಫಿ

ಸೋಮವಾರ, ಮಾರ್ಚ್ 9, 2009, 15:29 [IST]
NAndini Gurjar
ಬೆಂಗಳೂರು, ಮಾ. 9 : ಜಾಗತಿಕ ಆರ್ಥಿಕ ಕುಸಿತದಿಂದ ಭಾರಿ ಹೊಡೆತದ ಮೂಲಕ ಆಘಾತ ಅನುಭವಿಸಿರುವ ಕ್ಷೇತ್ರವೆಂದರೆ ಸಾಫ್ಟವೇರ್ ಉದ್ಯಮ. ಈ ಹಿನ್ನೆಲೆಯಲ್ಲಿ ದೇಶ ಸೇರಿದಂತೆ ಜಗತ್ತಿನಲ್ಲಿ ಘಟಾನುಘಟಿ ಐಟಿ ಕಂಪನಿಗಳು 'ನೋ ವೆಕೆನ್ಸಿ' ಫಲಕ ಹಾಕಿರುವುದು ಕಂಡು ಬರುವ ದೃಶ್ಯವಾಗಿದೆ. ಇಂತಹ ಸಂಕಷ್ಟ ಸಮಯದಲ್ಲಿಯೂ ಮಾತಿಗೆ ತಪ್ಪದ ಇನ್ ಫೋಸಿಸ್ ಕಂಪನಿಯೂ ಕ್ಯಾಂಪಸ್ ಸಂದರ್ಶನದಲ್ಲಿ ಆಫರ್ ಲೆಟರ್ ನೀಡಿದ್ದ ಸುಮಾರು 20 ಸಾವಿರ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಿ ಗರಿಮೆ ಮೆರೆದಿದೆ.
  Read:  In English 
ಜಾಗತಿಕ ಆರ್ಥಿಕ ಕುಸಿಕ ಬಲವಾದ ಏಟಿನಿಂದ ಐಟಿ ಉದ್ಯಮ ಸಂಪೂರ್ಣವಾಗಿ ನೆಲೆಕಚ್ಚಿರುವುದು ಗೊತ್ತಿರುವ ಸಂಗತಿ. ಇದಕ್ಕೂ ಮುಂಚಿತವಾಗಿ ಕ್ಯಾಂಪಸ್ ಸಂದರ್ಶನದಲ್ಲಿ ರಾಜ್ಯ ಸೇರಿ ವಿವಿಧ ರಾಜ್ಯಗಳ ಸುಮಾರು 20 ಸಾವಿರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಮೈಸೂರು ಕೇಂದ್ರದಲ್ಲಿ ಕಳೆದ ವರ್ಷ ಜೂನ್ ತಿಂಗಳಿಂದ ಫೆಬ್ರುವರಿ ಕೊನೆಯವರೆಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಈ ತಿಂಗಳ ಅವರನ್ನು ಅಧಿಕೃತ ಉದ್ಯೋಗಿಗಳನ್ನಾಗಿ ಮಾಡಿಕೊಳ್ಳಲಾಗಿದೆ ಎಂದು ಇನ್ ಫೋಸಿಸ್ ಕಂಪನಿ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಉಪಾಧ್ಯಕ್ಷೆ ನಂದಿನಿ ಗುರ್ಜಾರ್ ತಿಳಿಸಿದ್ದಾರೆ.

ಕ್ಯಾಂಪಸ್ ಸಂದರ್ಶನದಲ್ಲಿ ಆಫರ್ ಲೆಟರ್ ನೀಡಿದ್ದ ಟಿಸಿಎಸ್ ಹಾಗೂ ವಿಪ್ರೋ ಕಂಪನಿಗಳು ಕೂಡ ತಲಾ 24 ಸಾವಿರ ಮತ್ತು 8 ಸಾವಿರ ಹೊಸ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಿ ಕೊಟ್ಟ ಮಾತನ್ನು ಉಳಿಸಿಕೊಂಡಿತ್ತು. ಇದೀಗ ಈ ಪಟ್ಟಿಗೆ ಇನ್ ಫೋಸಿಸ್ ಸಹ ಸೇರಿದೆ. ದೇಶದ ಮೊದಲು ಮೂರು ಪ್ರತಿಷ್ಠಿತ ಸಾಫ್ಟವೇರ್ ಕಂಪನಿಗಳು ಮಾತು ತಕ್ಕಂತೆ ನಡೆದುಕೊಳ್ಳುವ ಮೂಲಕ ಇನ್ನಷ್ಟು ವಿಶ್ವಾಸರ್ಹತೆಗೆ ಪಾತ್ರವಾಗಿವೆ.

(ದಟ್ಸ್ ಕನ್ನಡ ವಾರ್ತೆ)
ಹೊಸ ಹೊರಗುತ್ತಿಗೆ ಯೋಜನೆ ಸಿಗುತ್ತಿಲ್ಲ, ಇನ್ಫೋಸಿಸ್
ರಾಜ್ಯದ ಐಟಿ ರಫ್ತಿನಲ್ಲಿ ಶೇ. 5 ರಷ್ಟು ಕುಸಿತ, ಮನೋಳಿ
User Comments
ಗುಂಡ 10 Mar 2009 03:36 am
ಹಿಂದುಳಿದವರಿಗೆ, ಬಡವರಿಗೆ, ಅಂಗವಿಕಲರಿಗೆ, ಅನಾಥರಿಗೆ ... ಮೀಸಲಾತಿ ಕೊಡುವುದರಲ್ಲಿ ತಪ್ಪಿಲ್ಲ ... ಈ ಮೀಸಲಾತಿ ಕೆಳಗಿನವುಗಳ ಮೂಲಕ ಕೊಡಬೇಕು. ೧. ಒಳ್ಳೆಯ ಶಿಕ್ಷಣ ... ೭೦% ವಿಷಯ ಕಲಿಯುವವರೆಗೂ ಅದೇ ಶಾಲೆಯಲ್ಲಿ ಮುಂದುವರಿಸಿ ೨. ಒಳ್ಳೆಯ ಊಟ , ಬಟ್ಟೆ ಬಾರೆ ವ್ಯವಸ್ಥೆ ೩. ಮಾನಸಿಕ ಸಮತೋಲನ ... ೪. ಜೀವನದ ಧೆಯೋದ್ದೇಶಗಳ ಬಗ್ಗೆ ಅರಿವು ... ೫. ಸತ್ ಚರಿತ್ರೆ... ೬. ಹಣಕಾಸಿನ ಅಣು ಕೂಲ .. ಈ ಮೇಲಿನವುಗಳನ್ನು ಯಾರಿಗೆ ಸರಿಯಾಗಿ ಒದಗಿಸಿದರೂ .. ಆ ಜೀವಿ .. ಮಾನಿಕ್ಯವಾಗುತ್ತದೆ! ನೋಡಿ .. ಯೋಚಿಸಿ ..
mitra 09 Mar 2009 10:15 pm
ಈ ದೇಶದಲ್ಲಿ ಮೀಸಲಾತಿಯಿಂದ ಆದ ಅನಾಹುತ ಬೇರಾವುದೇ ವಿಷಯಗಳಿಂದ ಆಗಿಲ್ಲ.
[ ಅಭಿಪ್ರಾಯ ಬರೆಯಿರಿ ]
IPL, Himachal Pradesh Cricket Association Stadium, Dharmasala
Chennai Super Kings: 85 / 5, 16.2 Overs
1st Test , Lord's Cricket Ground, St John's Wood
West Indies: 74 / 2, 24.2 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article