ಲಂಡನ್, ಮಾ. 5 : ಕಳೆದ ಮಂಗಳವಾರ ಪಾಕಿಸ್ತಾನದ ಲಾಹೋರ್ ನಲ್ಲಿ ಶ್ರೀಲಂಕಾ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ತಮ್ಮ ಕೈವಾಡವಿಲ್ಲ ಎಂದು ಎಲ್ ಟಿಟಿಇ ಸಂಘಟನೆ ಗುರುವಾರ ಸ್ಪಷ್ಟಪಡಿಸಿದೆ.
ಘಟನೆ ನಂತರ ಶ್ರೀಲಂಕಾ ಸರ್ಕಾರ ಎಲ್ ಟಿಟಿಇ ಕೈವಾಡವಿರಬಹುದು ಎಂದು ಶಂಕೆ ವ್ಯಕ್ತಪಡಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಎಲ್ ಟಿಟಿಇ ವಕ್ತಾರ ಥಿಲೀಪನ್, ಲಂಕಾ ಕ್ರಿಕೆಟ್ ಅಟಗಾರರ ಮೇಲೆ ನಡೆದ ದಾಳಿಯಲ್ಲಿ ಕೈವಾಡವಿಲ್ಲ. ಶ್ರೀಲಂಕಾ ಸರ್ಕಾರ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಶ್ರೀಲಂಕಾ ಆಟಗಾರರ ಮೇಲೆ ನಡೆದ ಗುಂಡಿನ ದಾಳಿ ಖಂಡನೀಯ. ಆಟಗಾರರ ಮೇಲೆ ನಾವು ದಾಳಿ ನಡೆಸಿಲ್ಲ. ಇಷ್ಟನ್ನು ಬಿಟ್ಟು ಹೆಚ್ಚು ಹೇಳಲು ಸಾಧ್ಯವಿಲ್ಲ ಎಂದು ಥಿಲೀಪನ್ ಹೇಳಿದರು. ಎಲ್ ಟಿಟಿಇ ಶರಣಾಗಲಿದೆ ಎಂದು ಲಂಕಾ ಸರ್ಕಾರ ಕನಸು ಕಾಣುತ್ತಿದ್ದರೆ, ಅವರಿಗೆ ನಿರಾಶೆ ಕಾದಿದೆ. ತಮಿಳು ಟೈಗರ್ಸ್ ಸೋಲನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಪಾಕ್ ಆಟಗಾರರು, ಕಲಾವಿದರಿಗೆ ಬಹಿಷ್ಕಾರ