•  

2009-10ರ ಮಧ್ಯಂತರ ಬಜೆಟ್ ಮುಖ್ಯಾಂಶಗಳು

ಸೋಮವಾರ, ಫೆಬ್ರವರಿ 16, 2009, 11:59 [IST]
ನವದೆಹಲಿ, ಫೆ. 16 : ಹಣಕಾಸು ಸಚಿವರು ಆಗಿದ್ದ ಪ್ರಧಾನಮಂತ್ರಿ ಡಾ ಮನಮೋಹನ್ ಸಿಂಗ್ ಅವರಿಗೆ ಹೃದಯದ ಚಿಕಿತ್ಸೆ ಆಗಿ ವಿಶ್ರಾಂತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಇಂದು ಸಂಸತ್ತಿನಲ್ಲಿ 2009-10ರ ಮಧ್ಯಂತರ ಬಜೆಟ್ ಮಂಡಿಸಿದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಯಶಸ್ವಿ 6ನೇ ಬಜೆಟ್ ಇದಾಗಿದೆ. ಸಂಸದರೊಬ್ಬರು ಸಂಸತ್ತಿನಲ್ಲಿ ತೀವ್ರ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಬಜೆಟ್ ಮಂಡನೆಯನ್ನು 19 ನಿಮಿಷಗಳಿಗೆ ಲೋಕಸಭಾಧ್ಯಕ್ಷ ಸೋಮನಾಥ್  ಚಟರ್ಜಿ ಮುಂದೂಡಿದರು.
  Read:  In English 
2009-10 ರ ಮಧ್ಯಂತರ ಬಜೆಟ್ ಮುಖ್ಯಾಂಶಗಳು

* ನಮ್ಮ ಯಶಸ್ವಿಗೆ ರೈತರೇ ಕಾರಣ.
* ಜಿಡಿಪಿ ಶೇ, 6-7 ರಷ್ಟು ನಿರೀಕ್ಷೆ
* ತೆರಿಗೆ ಜಿಡಿಪಿ ಶೇ. 12 ರಷ್ಟು ಏರಿಕೆ
* ಬಂಡವಾಳ ಹೂಡಿಕೆ ಶೇ. 39 ರಷ್ಟು ಹೆಚ್ಚಿದೆ.
* 28.5 ಮಿಲಿಯನ್ ಟನ್ ಅಕ್ಕಿಯನ್ನು ಪಡಿತರ ಸೇವೆಗೆ ವಿನಿಯೋಗ.
* 2008ರ ವಿದೇಶಿ ವಹಿವಾಟಿನಲ್ಲಿ ಜಿಡಿಪಿ ಶೇ. 39 ರಷ್ಟು ಪ್ರಗತಿ ಹೆಚ್ಚಳ
* ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆರ್ಥಿಕತೆ ಭಾರಿ ಪೆಟ್ಟು ಬಿದ್ದಿದೆ.
* ಕಳೆದ ಒಂಬತ್ತು ತಿಂಗಳಿಂದ ರಫ್ತುನಲ್ಲಿ ಹಿನ್ನೆಡೆ
* ವಿತ್ತೀಯ ಕೊರತೆ ಇಳಿಮುಖ
* ಕೃಷಿ ಅಭಿವೃದ್ಧಿ ಅನುದಾನ ಶೇ. 11 ರಿಂದ 14ರ ವರೆಗೆ ಹೆಚ್ಚಳ
* 22.7 ಮಿಲಿಯನ್ ಗೋಧಿಯನ್ನು ಪಡಿತರ ಸೇವೆಗೆ ವಿತರಣೆ
* ತಲಾ ಆದಾಯ ಶೇ. 7.5 ಹೆಚ್ಚಳ
* ಯುಪಿಎ ನೀಡಿದ್ದ ಎಲ್ಲ ಭರವಸೆಗಳು ಈಡೇರಿವೆ.
* ಮರುಸಾಲಕ್ಕೆ ಐಐಎಫ್ ಸಿಎಲ್ ಒಪ್ಪಿಗೆ
* ಮೂಲ ಸೌಕರ್ಯಗಳಿಗೆ ಮರುಸಾಲ
* ಆದಾಯ ಕುಸಿತ 3.6 ರಿಂದ 14 ಕ್ಕೆ ಇಳಿಕೆ
* ಉದ್ಯೋಗ ಸೃಷ್ಟಿ ಕ್ರಮ
* 70 ಸಾವಿರ ಕೋಟಿ ರುಪಾಯಿಗಳ ಮೂಲ ಸೌಕರ್ಯ ಯೋಜನೆಗಳಿಗೆ ಹಸಿರು ನಿಶಾನೆ
* ಹಣದುಬ್ಬರ ನಿಯಂತ್ರಣದಲ್ಲಿ ಯಶಸ್ವಿ.
* ಕೃಷಿ ಯೋಜಿತ ನಿಧಿಗೆ ಷೇ 300 ರಷ್ಟು ಏರಿಕೆ
* ಆರ್ಥಿಕ ಬಿಕ್ಕಟ್ಟನ್ನು ಯುಪಿಎ ಸಮರ್ಥವಾಗಿ ನಿಭಾಯಿಸಿದೆ.
* ಶೇ. 3.2 ರಷ್ಟು ವಾರ್ಷಿಕ ಕೃಷಿ ಪ್ರಗತಿ
* ವಾಣಿಜ್ಯ ಬ್ಯಾಂಕ್ ಗಳಿಗೆ ಮರು ಸಾಲ
* ಉದ್ಯೋಗ ಖಾತ್ರಿ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಕ್ರಮ
* ಗ್ರಾಮೀಣಾಭಿವೃದ್ಧಿಗೆ ವಿಶೇಷ ಒತ್ತು.
* ಇಂದಿರಾ ಆವಾಸ ಯೋಜನೆಯಡಿಯಲ್ಲಿ 60.12 ಲಕ್ಷ ವಸತಿಗಳ ನಿರ್ಮಾಣ
* 15 ಕೇಂದ್ರೀಯ ವಿಶ್ವವಿದ್ಯಾಲಯ, 6 ಹೊಸ ಐಐಟಿ ಕಾಲೇಜುಗಳ ಸ್ಥಾಪನೆ
* ಮಧ್ಯಪ್ರದೇಶ ಹಬಾಗೂ ರಾಜಸ್ಥಾನದಲ್ಲಿ ಐಐಟಿ ಸ್ಥಾಪನೆ, 2009-10ರಲ್ಲಿ ಕಾಲೇಜು ಆರಂಭ
* ಕಳೆದ ಸೆಫ್ಟಂಬರ್ ನಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ 24,260 ಕೋಟಿ ಹೆಚ್ಚಳ
* 65,300 ಕೋಟಿ ರುಪಾಯಿಗಳ ಕೃಷಿ ಸಾಲ ಮನ್ನಾ ಮಾಡಿದ್ದೇವೆ
* ಗ್ರಾಮೀಣ ಬ್ಯಾಂಕ್ ಗಳ ಪ್ರಗತಿಗೆ 652 ಕೋಟಿ ರುಪಾಯಿ ನೀಡುವುದು.
* ರಾಷ್ಟ್ರೀಯ ಭದ್ರತಾ ನಿಧಿಯನ್ನು ಸಾರ್ವಜನಿಕ ಸೇವೆಗಳಿಗೆ ಬಳಸುವುದು.
* 6 ಐಐಎಂ ಕಾಲೇಜುಗಳ ಸ್ಥಾಪನೆಗೆ ಚಿಂತನೆ.

(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
2009-10ರ ಕೇಂದ್ರ ಬಜೆಟ್ ಗೆ ಮಿಶ್ರ ಪ್ರತಿಕ್ರಿಯೆ
ಪ್ರಣಬ್ ಮುಖರ್ಜಿ ಅವರಿಂದ ಬಜೆಟ್ ಮಂಡನೆ

ಬಜೆಟ್, ಕರ್ನಾಟಕ ಸೇರಿ ದಕ್ಷಿಣ ಭಾರತಕ್ಕೆ ಸುಣ್ಣ

&13;
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
IPL, Himachal Pradesh Cricket Association Stadium, Dharmasala
Chennai Super Kings: 78 / 5, 16 Overs
1st Test , Lord's Cricket Ground, St John's Wood
West Indies: 70 / 2, 24 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article