ದೊಡ್ಡಬಳ್ಳಾಪುರ, ಡಿ.24: ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಅಸಾಧ್ಯ. ಆ ತರಹದ ಕನಸು ಕಾಣುತ್ತಿದ್ದರೆ ನಿರಾಶೆ ಖಂಡಿತ. ಒಂದು ವೇಳೆ ಬಿಜೆಪಿ ಏನಾದರೂ ಎಲ್ಲೆಡೆ ಗೆಲುವು ಸಾಧಿಸಿದರೆ ನಾನು ನನ್ನ ಅರ್ಧ ಮೀಸೆ ಬೋಳಿಸಿಕೊಳ್ಳುತ್ತೇನೆ ಹಾಗೂ ಸಿಎಂ ಮನೆ ವಾಚ್ ಮನ್ ಆಗುತ್ತೇನೆ ಎಂದು ಬೆಂಗಳೂರು ಚಾಮರಾಜಪೇಟೆ ಶಾಸಕ, ಜೆಡಿಎಸ್ ನ ಮುಖಂಡ ಜಮೀರ್ ಅಹಮದ್ ಸವಾಲು ಹಾಕಿದ್ದಾರೆ.
ದೇವದುರ್ಗದಲ್ಲಿ ಅಭ್ಯರ್ಥಿ ಸಿ ರಘು ಪರ ಪ್ರಚಾರ ಕಾರ್ಯ ಮುಗಿಸಿ, ಹೆಚ್ ಡಿ ಕುಮಾರಸ್ವಾಮಿ ಅವರೊಡನೆ ದೊಡ್ಡಬಳ್ಳಾಪುರಕ್ಕೆ ಆಗಮಿಸಿದ ಜಮೀರ್ ಅವರು ಆವೇಷಭರಿತರಾಗಿ ಭಾಷಣ ಮಾಡಿ, ಸಿಎಂಗೆ ಸವಾಲು ಹಾಕಿದ್ದಾರೆ. ಅಪರೇಷನ್ ಕಮಲ ಮಾಡಿ ಪಕ್ಷಾಂತರಿಗಳನ್ನು ಗಳಿಸಿದಂತೆ ಚುನಾವಣೆಯಲ್ಲಿ ಓಟು ಗಳಿಸಿ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿ ತಮ್ಮ ಅರ್ಧ ಮೀಸೆಯನ್ನು ಪಣಕ್ಕಿಟ್ಟಿದ್ದಾರೆ.
ದೊಡ್ಡಬಳ್ಳಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ ಮುನೇಗೌಡ ಅವರ ಪರ ಪ್ರಚಾರಕ್ಕೆಂದು ಜಮೀರ್ ಆಗಮಿಸಿದ್ದಾರೆ. ಮಾಜಿ ಸಂಸದ ಆರ್ ಎಲ್ ಜಾಲಪ್ಪ ಅವರ ಪುತ್ರ ಬಿಜೆಪಿಯ ನರಸಿಂಹಸ್ವಾಮಿ ಜೆಡಿಎಸ್ ಗೆ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಕಾಂಗ್ರೆಸ್ ನ ಆರ್ ಜಿ ವೆಂಕಟಾಚಲಯ್ಯ ಅಲ್ಲದೆ ಇನ್ನಿಬ್ಬರು ಪಕ್ಷೇತರರು ಕಣದಲ್ಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮತದಾರ ಬಂಧುಗಳಿಗೆ ಅಲ್ಲಲ್ಲಿ ಬಾಡೂಟ
ಡಮ್ಮಿ ಅಭ್ಯರ್ಥಿಗಳ ವಿರುದ್ಧ ಬಿಗಿ ಕ್ರಮ:ಆಯೋಗ