•  

ಭ್ರಷ್ಟರ ವಿರುದ್ಧ ಉಪವಾಸ ಸತ್ಯಾಗ್ರಹ :ರವಿಕೃಷ್ಣರೆಡ್ಡಿ

ಶನಿವಾರ, ಏಪ್ರಿಲ್ 26, 2008, 18:06 [IST]
Ravi redy's 'moulyagraha' dharna ಬೆಂಗಳೂರು, ಏ. 26: ಭ್ರಷ್ಟ ರಾಜಕಾರಣಿಗಳಿಂದ ಇಂದು ರಾಜಕಾರಣ ತನ್ನ ಮೌಲ್ಯವನ್ನು ಕಳೆದುಕೊಳ್ಳತೊಡಗಿದೆ. ಸ್ವಾರ್ಥ,ದ್ವೇಷ, ಅಸೂಯೆ ಮನೆ ಮಾಡಿದೆ, ಮಹಾತ್ಮ ಗಾಂಧಿ ಕಂಡ ರಾಮರಾಜ್ಯದ ಕನಸು ಕೇವಲ ಕನಸಾಗೆ ಉಳಿದಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಪಣತೊಟ್ಟು ಅಮೇರಿಕದಲ್ಲಿ ಸಾಫ್ಟ್ ವೇರ್ ಇಂಜನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ರವಿಕೃಷ್ಣರೆಡ್ಡಿ ಎನ್ನುವ ಪ್ರಜ್ಞಾವಂತ ಯುವಕ ಮೂರು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ಏ. 23 ರಂದು ಜಯನಗರ ಕ್ಷೇತ್ರದ ಅಭ್ಯರ್ಥಿಯಾಗಿ ಇವರು ಸಲ್ಲಿಸಿದ ನಾಮಪತ್ರ ಪುರಸ್ಕೃತಗೊಂಡಿದೆ. ನಗಾರಿ ಲಾಂಛನದಡಿಯಲ್ಲಿ ಈ ಸಲದ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆಯನ್ನು ರವಿ ಅವರು ವ್ಯಕ್ತಪಡಿಸಿದ್ದಾರೆ. ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆ ಬಳಿ ಉಪವಾಸ ಇಂದು ಬೆಳಗ್ಗೆ 10 ಕ್ಕೆ ಆರಂಭಿಸಿದ ರವಿಕೃಷ್ಣರೆಡ್ಡಿ ಅವರಿಗೆ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅನೇಕ ಮಿತ್ರರು ಹಾಗೂ ಆಸಕ್ತ ನಾಗರೀಕರು ಕೈಜೋಡಿಸಿದ್ದಾರೆ. 'ಮೌಲ್ಯಾಗ್ರಹ 'ಎಂಬ ಹೆಸರಿನಲ್ಲಿ ನಡೆಯಲಿರುವ ಈ ಉಪವಾಸ ಸತ್ಯಾಗ್ರಹ ಏ. 28ರಂದು ಕೊನೆಗೊಳ್ಳಲಿದೆ.

ಚಿಂತಕರು, ಮೌಲ್ಯಾಧಾರಿತ ರಾಜಕಾರಣ ಮಾಡುವವರ ಕೈಯಿಂದ ಕರ್ನಾಟಕ ಇಂದು ಕೈತಪ್ಪಿ ಹೋಗುತ್ತಿದೆ. ಅವರ ಸ್ಥಾನಗಳಲ್ಲಿ ಇವತ್ತು ಭೂಗಳ್ಳರು, ಮಣ್ಣನ್ನೇ ಅಗೆದು ಮಾರಿಕೊಳ್ಳುತ್ತಿರುವ ಗಣಿ ಕುಳಗಳು ಬಂದು ಕೂರುತ್ತಿದ್ದಾರೆ. ಸಮಸ್ಯೆಗಳ ಮೇಲೆ ಸವಾರಿ ಮಾಡುವ ಈಗಿನ ರಾಜಕಾರಣಿಗಳಿಗೆ ಸಮಸ್ಯೆ ಬಗೆ ಹರಿಯುವುದು ಬೇಕಿಲ್ಲ. ಅವರು ಸಮಸ್ಯೆಗಳನ್ನು ಉದ್ಬವಿಸುತ್ತಲೇ ಇರುತ್ತಾರೆ, ಅಲ್ಲೊಬ್ಬ ಇಲ್ಲೊಬ್ಬ ಸಜ್ಜನ ಸಂಘ ಸೇವಾ ಸಂಸ್ಥೆಗಳು ಸದ್ದಿಲ್ಲದೆ ಅವುಗಳಿಗೆ ತೇಪೆ ಹಾಕುತ್ತಲೇ ಇರುತ್ತವೆ. ನಮ್ಮಂತ ಕೆಲವರು ತೇಪೆ ಹಾಕುವ ಬಗ್ಗೆಯೇ ಬರೆಯುತ್ತಾ ಬೆರಳಿಗೆ ವ್ಯಾಯಾಮ ಮಾಡಿಸುತ್ತಿರುತ್ತೇವೆ ಎಂದು ರವಿಕೃಷ್ಣರೆಡ್ಡಿ ಈ ಸಂದರ್ಭದಲ್ಲಿ ದಟ್ಸ್ ಕನ್ನಡಕ್ಕೆ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ಚುನಾವಣಾ ಕೊಳದಲ್ಲಿ ಐಟಿ ಹುಡುಗ
User Comments
Dalit 15 May 2008 06:47 pm
There is no reason for this reddy to contest in election on 2 reasons. 1.His Works ? 2.His presence will help either BJP or Congress(u wil know this after election).
Ram 30 Apr 2008 07:32 am
Dj and Narayana, I think this is the main problem with us kannadigas. Our uneducated corrupt polititians are ruining our state and when an educated person like Ravi Reddy is trying to do his aLilu sEve, we should all be encouraging him, and not finding fault. When he is willing to quit his job in USA as a software engineer, that really shows his love for our state and language. Good job Ravi!!!! We are all proud of you. Good luck and hope you will get elected... Ram
[ ಅಭಿಪ್ರಾಯ ಬರೆಯಿರಿ ]
IPL, Feroz Shah Kotla, Delhi
Delhi Daredevils decided to field
1st Test , Lord's Cricket Ground, St John's Wood
West Indies: 120 / 4, 47.4 Overs
IPL, Himachal Pradesh Cricket Association Stadium, Dharmasala
Kings XI Punjab won by 6 wickets
Follow Oneindia Kannada on Twitter
Oneindia Kannada Facebook fan page
Write Comments on this Article