•  

ಮಂಗಳೂರು ಬೆಂಗಳೂರು ರೈಲಿಗೆ ಲಾಲು ಚಾಲನೆ

ಮಂಗಳವಾರ, ಡಿಸೆಂಬರ್ 4, 2007, 13:09 [IST]

ಮಂಗಳೂರು, ಡಿ.8 : ಕೇಂದ್ರ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಶನಿವಾರ(ಡಿ.8) ಬಹುನಿರೀಕ್ಷಿತ ಮಂಗಳೂರು ಮತ್ತು ಬೆಂಗಳೂರು ನಡುವಿನ ರೈಲಿಗೆ ಚಾಲನೆ ನೀಡಿದರು.

ಈ ಸಮಾರಂಭದಲ್ಲಿ ಮಾತನಾಡಿದ ಅವರು, ಹೊಸ ರೈಲಿನಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಅಲ್ಲದೇ ರಸ್ತೆ ಮುಖಾಂತರ ನಡೆಯುತ್ತಿದ್ದ ಶೇ.60ರಷ್ಟು ಸರಕು ಸಾಕಾಣೆಗೂ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಟಿಕೆಟ್ ದರ ರೂ. 850(ಮೊದಲ ದರ್ಜೆ ಎಸಿ), ರೂ.611(ಎರಡನೇ ದರ್ಜೆ ಎಸಿ), ರೂ.227(ಸುಖಾಸನ ಎರಡನೇ ದರ್ಜೆ ), ರೂ.119(ಸಾಮಾನ್ಯ ಎರಡನೇ ದರ್ಜೆ)ಆಗಿದ್ದು, ಮುಂದಿನ ಒಂದು ವಾರದ ಬುಕ್ಕಿಂಗ್ ಈಗಾಗಲೇ ಮುಗಿದಿದೆ.

6517 ಮತ್ತು 6518ಸಂಖ್ಯೆ ಟ್ರೇನುಗಳು ಯಶವಂತಪುರದಿಂದ ಮಂಗಳೂರಿಗೆ, ಮಂಗಳೂರಿನಿಂದ ಯಶವಂತಪುರಕ್ಕೆ ಸಂಚರಿಸಲಿವೆ. ಮಂಗಳೂರಿನಿಂದ ಹೊರಡುವ ರೈಲು ಕಬಕ, ಪುತ್ತೂರು, ಸುಬ್ರಹ್ಮಣ್ಯ ರಸ್ತೆ, ಸಕಲೇಶಪುರ ಮತ್ತು ಹಾಸನ ಮಾರ್ಗವಾಗಿ ಬೆಂಗಳೂರು ತಲುಪಲಿದೆ. ಬೆಂಗಳೂರು ಮತ್ತು ಮಂಗಳೂರು ರೈಲು ಸೇವೆಗಾಗಿ ಈ ಹಿಂದೆ ಅನೇಕ ಹೋರಾಟಗಳು ನಡೆದಿವೆ. ಮಂಗಳೂರಿಗರ ಕನಸು 11ವರ್ಷಗಳ ನಂತರ ಈಗ ನನಸಾಗುತ್ತಿದೆ. 679 ಸೇತುವೆಗಳು, 57ಸುರಂಗಗಳನ್ನು ಬಳಸಿಕೊಂಡು ಈ ರೈಲು ಹಸಿರು ಕಾನನದ ಮಧ್ಯೆ ಸಾಗುತ್ತದೆ. 1979ರಲ್ಲಿ ಆರಂಭವಾಗಿದ್ದ ರೈಲು ಸೇವೆ, ಗೇಜ್ ಪರಿವರ್ತನೆ ನೆಪದಲ್ಲಿ ಸ್ಥಗಿತಗೊಂಡಿತ್ತು.

(ದಟ್ಸ್ ಕನ್ನಡ ವಾರ್ತೆ)
User Comments
ರವಿ ಶಾಸ್ತ್ರಿ 09 Dec 2007 05:48 pm
ಮಾನ್ಯರೇ, ಹಾಸನ ಮ೦ಗಳೂರು ರೈಲು ಮೀಟರ್ ಗೇಜ್ ಇದ್ದಾಗ ೧೯೮೩-೮೫ ರಲ್ಲಿ ನಮ್ಮ ಊರಾದ ಸಕಲೀಶಪುರದಿ೦ದ ಕಬಕ ಪುತ್ತೂರಿಗೆ ಹೋಗಿ ಅಲ್ಲಿ೦ದ ಬಸ್ಸಿನಲ್ಲಿ ನಾನು ಕಲಿಯುತ್ತಿದ್ದ ಉಜಿರೆಗೆ ಹೊಗುತ್ತಿದ್ದ ನೆನೆಪಾಯಿತು. ನೇರ ಬಸ್ ಇದ್ದರೂ ಪ್ರಯಾಣದ ಅನುಭವಕ್ಕಾಗಿ ವರ್ಷದಲ್ಲಿ ೨ ಬಾರಿ ಇದು ನಡೆಯುತ್ತಿತ್ತು. ಈಗ ಬ್ರಾಡ್ ಗೇಜ್ ಆದ ಮೇಲೆ ಪ್ರತಿನಿತ್ಯ ಒ೦ದು ಹಗಲು ಹೊತ್ತಿನ ರೈಲು ನಡೆಸಿದರೆ ಒಳ್ಳೆಯದು. ಹೋರಾಡಿದ ಎಲ್ಲರಿಗೂ ಅನ೦ತ ವ೦ದನೆಗಳು.
hebbar 08 Dec 2007 09:05 pm
Connecting train from Mangalore to Udupi-Kundapur immediately this train reaches Mangalore is required; prefarably passenger train.
[ ಅಭಿಪ್ರಾಯ ಬರೆಯಿರಿ ]
IPL, Feroz Shah Kotla, Delhi
Delhi Daredevils decided to field
1st Test , Lord's Cricket Ground, St John's Wood
West Indies: 118 / 4, 47 Overs
IPL, Himachal Pradesh Cricket Association Stadium, Dharmasala
Kings XI Punjab won by 6 wickets
Follow Oneindia Kannada on Twitter
Oneindia Kannada Facebook fan page
Write Comments on this Article