ನವದೆಹಲಿ : ಸಚಿವ ಮತ್ತು ಸಂಸದ ಸ್ಥಾನಕ್ಕೆ ನಟ ಅಂಬರೀಷ್ ಸಲ್ಲಿಸಿದ್ದ ರಾಜೀನಾಮೆ ಅಂಗೀಕಾರವಾಗಿಲ್ಲ. ಈ ಮಧ್ಯೆ ರಾಜೀನಾಮೆ ವಾಪಸ್ ಪಡೆಯುವಂತೆ ಅಭಿಮಾನಿಗಳು ಗುರುವಾರ ಒತ್ತಡ ತರುತ್ತಿದ್ದಾರೆ.
ಫ್ಯಾಕ್ಸ್‌ನಲ್ಲಿ ಅಂಬರೀಷ್ ಕಳುಹಿಸಿರುವ ರಾಜೀನಾಮೆ ಪತ್ರ ನಿಗದಿತ ನಮೂನೆಯಲ್ಲಿ ಇಲ್ಲ. ಹೀಗಾಗಿ ರಾಜೀನಾಮೆ ಅಂಗೀಕಾರವಾಗಿಲ್ಲ ಎಂದು ಲೋಕಸಭಾಧ್ಯಕ್ಷರ ಕಾರ್ಯಾಲಯ ಸ್ಪಷ್ಪಪಡಿಸಿವೆ.
ಲೋಕಸಭಾ ಸ್ಪೀಕರ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಅಂಬರೀಷ್ ಬುಧವಾರ ಸಲ್ಲಿಸಿದ್ದರು.
ಅಂಬಿ ಪ್ರತಿಕ್ರಿಯೆ : ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಎಲ್ಲ ಸಂಸದರನ್ನು ಬಿಟ್ಟು ರಾಜೀನಾಮೆ ನೀಡುವಂತೆ ನನ್ನನ್ನೇ ಎಲ್ಲರೂ ಒತ್ತಾಯಿಸುತ್ತಾರೆ. ಅಂತಿಮವಾಗಿ ಅಭಿಮಾನಿಗಳ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದೇನೆ ಎಂದು ಅಂಬರೀಷ್ ಹೇಳಿದ್ದಾರೆ.
ಸಂಸದರ ಸಭೆ : ಕಾವೇರಿ ಹೋರಾಟದ ಮುಂದಿನ ರೂಪುರೇಷೆ ಚರ್ಚಿಸಲು ಮಾದೇಗೌಡರ ಅಧ್ಯಕ್ಷತೆಯಲ್ಲಿ ಗುರುವಾರ ಶಾಸಕರ ಭವನದಲ್ಲಿ ಸಂಸದರ ಸಭೆಯನ್ನು ಏರ್ಪಡಿಸಲಾಗಿದೆ.
(ಏಜನ್ಸೀಸ್)














