ಮಣ್ಣಿನ ಮಕ್ಕಳಿಗೆ ನಕಲಿಗೊಬ್ಬರ ತಿನ್ನಿಸೋ ಯತ್ನ ವಿಫಲ!
ಕುಶಾಲ ನಗರ ಪೊಲೀಸರ ಕಾರ್ಯಾಚರಣೆ, 240 ಮೂಟೆ ನಕಲಿ ಗೊಬ್ಬರ ವಶ
ಮಡಿಕೇರಿ : ರೈತರನ್ನು ಮಳೆರಾಯನಿಂದ ಹಿಡಿದು, ಪ್ರತಿಯಾಬ್ಬರೂ ವಂಚಿಸುತ್ತಾರೆ. ಅಲ್ಲೋ ಇಲ್ಲೋ ವಿರಳ ಸಂಖ್ಯೆಯಲ್ಲಿ ವಂಚನೆ ತಪ್ಪಿಸುವ ಪ್ರಯತ್ನಗಳೂ ನಡೆಯುತ್ತಿರುತ್ತವೆ. ಅಂತಹ ಪ್ರಯತ್ನವೊಂದು ಬುಧವಾರ ವರದಿಯಾಗಿದೆ.
240 ಮೂಟೆ ನಕಲಿ ಗೊಬ್ಬರ ಸಾಗಿಸುತ್ತಿದ್ದ ಲಾರಿಯಾಂದನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ. ಕುಶಾಲನಗರದ ಕೆಲವು ಏಜೆಂಟರು ರೈತರಿಗೆ ನಕಲಿ ಗೊಬ್ಬರ ವಿತರಿಸುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ, ಲಾರಿ ಅಡ್ಡಗಟ್ಟಿ ತಪಾಸಣೆ ಮಾಡಲಾಯಿತು. ಆಗ 240 ಮೂಟೆ ನಕಲಿ ಗೊಬ್ಬರ ಪತ್ತೆಯಾಗಿದೆ.
ತೋಟಗಾರಿಕೆ ಇಲಾಖೆ ಈ ಗೊಬ್ಬರ ನಕಲಿ ಎಂದು ದೃಢಪಡಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ಲಾರಿ ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠ ರಾಮಚಂದ್ರರಾವ್ ಭೇಟಿ ನೀಡಿದ್ದು, ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಲಾಗುವುದು ಎಂದು ಹೇಳಿದರು.
(ಯುಎನ್‌ಐ)
ಮುಖಪುಟ / ವಾರ್ತೆಗಳು