ಅಂಬಾರಕೊಡ್ಲದಲ್ಲಿ ‘ವಸಂತ ಸಾಹಿತ್ಯೋತ್ಸವ’ದ ಕಂಪು
ಯುಗಾದಿ ಕಥಾಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
ಅಂಕೋಲ : ಕಥನ (ಜಾಗತಿಕ ಕನ್ನಡಿಗರ ಕೂಟ) ಹಾಗೂ ಅಂಕೋಲದ ರಾಘವೇಂದ್ರ ಪ್ರಕಾಶನ ಜಂಟಿಯಾಗಿ ‘ವಸಂತ ಸಾಹಿತ್ಯೋತ್ಸವ’ವನ್ನು ಭಾನುವಾರ(ಏ.16) ಸಂಘಟಿಸಿವೆ.
ಅಂಬಾರಕೊಡ್ಲ(ಅಂಕೋಲ, ಉತ್ತರ ಕನ್ನಡ ಜಿಲ್ಲೆ)ದ ಸದಾನಂದ ವೇದಿಕೆಯಲ್ಲಿ ಭಾನುವಾರ ಬೆಳಗ್ಗೆ 10ಗಂಟೆಗೆ ವಸಂತ ಸಾಹಿತ್ಯೋತ್ಸವದ ಉದ್ಘಾಟನೆಯನ್ನು ಡಾ.ಪುಭುಶಂಕರ ನೆರವೇರಿಸುವುರು. ಪ್ರೊ.ಜಿ.ಎಚ್.ನಾಯಕ ಸಮಾರಂಭದ ಅಧ್ಯಕ್ಷತೆವಹಿಸುವರು.
ಸಾಹಿತ್ಯೋತ್ಸವದ ವಿವರ :
ಕಥನ : ಯುಗಾದಿ ಕಥಾ ಸ್ಪರ್ಧೆ-06ರ ಫಲಿತಾಂಶ ಪ್ರಕಟ
ಮುಖಪುಟ / ವಾರ್ತೆಗಳು
ಯುಗಾದಿ ಕಥಾಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
ಅಂಬಾರಕೊಡ್ಲ(ಅಂಕೋಲ, ಉತ್ತರ ಕನ್ನಡ ಜಿಲ್ಲೆ)ದ ಸದಾನಂದ ವೇದಿಕೆಯಲ್ಲಿ ಭಾನುವಾರ ಬೆಳಗ್ಗೆ 10ಗಂಟೆಗೆ ವಸಂತ ಸಾಹಿತ್ಯೋತ್ಸವದ ಉದ್ಘಾಟನೆಯನ್ನು ಡಾ.ಪುಭುಶಂಕರ ನೆರವೇರಿಸುವುರು. ಪ್ರೊ.ಜಿ.ಎಚ್.ನಾಯಕ ಸಮಾರಂಭದ ಅಧ್ಯಕ್ಷತೆವಹಿಸುವರು.
ಸಾಹಿತ್ಯೋತ್ಸವದ ವಿವರ :
- ಮಧ್ಯಾಹ್ನ 12ಗಂಟೆಗೆ ಕಥಾವಾಚನ ಗೋಷ್ಠಿ ಹಮ್ಮಿಕೊಂಡಿದ್ದು, ಡಾ.ರಾಮಕೃಷ್ಣ ಗುಂದಿ ಗೋಷ್ಠಿಯ ಅಧ್ಯಕ್ಷತೆವಹಿಸುವರು.
- ಅಪರಾಹ್ನ 2.30 ನಿಮಿಷಕ್ಕೆ ಡಾ.ಬಿ.ಎ.ಸನದಿ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು, ಹೆಸರಾಂತ ಕವಿಗಳು ಕವನಗಳನ್ನು ವಾಚಿಸುವರು.
- ಸಂಜೆ 4.30ಕ್ಕೆ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿದ್ದು, ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರೋಹಿದಾಸ ನಾಯಕ ಅಧ್ಯಕ್ಷತೆವಹಿಸುವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಆರ್.ವಿ. ಭಂಡಾರಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
- ಕತೆಗಾರ ಕು.ವೀರಭದ್ರಪ್ಪ ಅವರು ಸಮಾರೋಪ ಭಾಷಣವನ್ನು ಮಾಡುವರು. ಯುಗಾದಿ ಕಥಾ ಸ್ಪರ್ಧೆಯ ಬಹುಮಾನ ವಿತರಣೆ, ಬಹುಮಾನಿತ ಕಥೆಗಳ ಪುಸ್ತಕ ಬಿಡುಗಡೆ ಸಮಾರಂಭದ ಇನ್ನಿತರ ಕಾರ್ಯಕ್ರಮಗಳು.
ಕಥನ : ಯುಗಾದಿ ಕಥಾ ಸ್ಪರ್ಧೆ-06ರ ಫಲಿತಾಂಶ ಪ್ರಕಟ
ಮುಖಪುಟ / ವಾರ್ತೆಗಳು