•  

‘ಕಥನ’ದಿಂದ ರಾಜ್ಯಮಟ್ಟದ ‘ಯುಗಾದಿ ಕಥಾ ಸ್ಪರ್ಧೆ’

ಗುರುವಾರ, ಅಕ್ಟೋಬರ್ 27, 2005, 23:53 [IST]
‘ಕಥನ’ದಿಂದ ರಾಜ್ಯಮಟ್ಟದ ‘ಯುಗಾದಿ ಕಥಾ ಸ್ಪರ್ಧೆ’
ಜ.15ರೊಳಗೆ ಕಥೆ ಕಳುಹಿಸಿ, ಆಕರ್ಷಕ ಬಹುಮಾನ ಮತ್ತು ಕೀರ್ತಿಯನ್ನು ನಿಮ್ಮದಾಗಿಸಿಕೊಳ್ಳಿ!

ಬೆಂಗಳೂರು : ‘ಕಥನ’ ಜಾಗತಿಕ ಕನ್ನಡಿಗರ ಕೂಟ ಮತ್ತು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶ್ರೀ ರಾಘವೇಂದ್ರ ಪ್ರಕಾಶನ ಅಂಬಾರಕೊಡ್ಲ ಸಂಸ್ಥೆಗಳು ಜಂಟಿಯಾಗಿ ರಾಜ್ಯಮಟ್ಟದ ‘ಯುಗಾದಿ ಕಥಾ ಸ್ಪರ್ಧೆ’ಯನ್ನು ಏರ್ಪಡಿಸಿದೆ. ಅತ್ಯುತ್ತಮವೆಂದು ಪರಿಗಣಿಸಲ್ಪಟ್ಟ ಕತೆಗಳಿಗೆ ಕ್ರಮವಾಗಿ 5000ರೂಪಾಯಿ, 3000 ರೂಪಾಯಿ ಹಾಗೂ 2000 ರೂಪಾಯಿ ಬಹುಮಾನವನ್ನು ನಿಗದಿಪಡಿಸಲಾಗಿದೆ ಎಂದು ಸ್ಪರ್ಧೆಯ ಆಯೋಜಕರಾದ ವಿಷ್ಣುನಾಯ್ಕ ತಿಳಿಸಿದ್ದಾರೆ.

ಸ್ಪರ್ಧೆಗೆ ಕಥೆ ಕಳುಹಿಸುವವರ ಗಮನಕ್ಕೆ :
  • ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ವಯೋಮಿತಿಯ ನಿರ್ಬಂಧ ಇರುವುದಿಲ್ಲ. ಆದರೆ ಎರಡು ಪುಸ್ತಕಗಳಿಗಿಂತ ಹೆಚ್ಚು ಕೃತಿಯನ್ನು ಹೊರತಂದವರು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.
  • ಕತೆಗಳು ಸ್ವತಂತ್ರ ರಚನೆಗಳಾಗಿರಬೇಕು. ಇದುವರೆಗೆ ಯಾವುದೇ ಪತ್ರಿಕೆಯಲ್ಲಾಗಲಿ, ಸಂಕಲದಲ್ಲಾಗಲಿ ಪ್ರಕಟವಾಗಿರಕೂಡದು. ಅನುವಾದಿತ ಕತೆಗಳಿಗೂ ಅವಕಾಶವಿಲ್ಲ.
  • ಸ್ಪರ್ಧೆಯಲ್ಲಿ ಭಾಗವಹಿಸುವವರು ಒಂದಕ್ಕಿಂತ ಹೆಚ್ಚು ಕತೆಗಳನ್ನು ಕಳಿಸಿಕೊಡುವಂತಿಲ್ಲ.
  • ಕತೆ ಕಳಿಸುವುದಕ್ಕೆ ಪ್ರವೇಶ ಧನ ಇರುವುದಿಲ್ಲ.
  • ಕತೆಯನ್ನು ಕಳಿಸುವವರು ತಮ್ಮ ಹೆಸರು ಮತ್ತು ಪೂರ್ಣವಿಳಾಸವನ್ನು ಪ್ರತ್ಯೇಕ ಕಾಗದದಲ್ಲಿ ಬರೆದು, ಪಾಸ್‌ಫೋರ್ಟ್‌ ಸೈಜಿನ ತಮ್ಮ ಒಂದು (ಇತ್ತೀಚಿನ) ಭಾವಚಿತ್ರವನ್ನೂ ಅದರೊಂದಿಗೆ ಇಡಬೇಕು.
  • ಕತೆಯನ್ನು ಬೆರಳಚ್ಚು ಮಾಡಿಸಿ ಇಲ್ಲವೆ ಡಿಟಿಪಿ ಮಾಡಿಸಿ ಕಳಿಸುವುದು ಅಪೇಕ್ಷಣೀಯ.
  • ಪ್ರಥಮ ಬಹುಮಾನ (5000 ರೂಪಾಯಿ) ದ್ವಿತೀಯ ಬಹುಮಾನ (3000) ತೃತೀಯ ಬಹುಮಾನ (2000 ರೂಪಾಯಿ) ಹೊರತಾಗಿ ತೀರ್ಪುಗಾರರ ಮೆಚ್ಚುಗೆ ಪಡೆದ ಇನ್ನೂ ಐದು ಕತೆಗಳಿಗೆ ತಲಾ 500 ರೂಪಾಯಿಗಳಂತೆ ಸಮಾಧಾನಕರ ಬಹುಮಾನ ನೀಡಲಾಗುವುದು.
  • ಬಹುಮಾನಿತ ಮೂರು ಕತೆಗಳೊಂದಿಗೆ ಮೆಚ್ಚುಗೆ ಪಡೆದ ಐದು ಕತೆಗಳನ್ನೂ ಸೇರಿಸಿ ಪ್ರತ್ಯೇಕ ಕಥಾ ಸಂಕಲನವೊಂದನ್ನು ಪ್ರಕಟಿಸಲಾಗುವುದು. ಸಂಕಲನ ರೂಪದಲ್ಲಿ ಪ್ರಕಟಿಸಿದಾಗ, ಸದರಿ ಕತೆಗಾರರಿಗೆ ಪ್ರತ್ಯೇಕ ಗೌರವ ಸಂಭಾವನೆ ಇರುವುದಿಲ್ಲ.
  • ಅಂಚೆಯ ಮೂಲಕ ಕಥೆಯನ್ನು ಕಳಿಸುವಾಗ ತೂಕಮಾಡಿಸಿ, ಅಗತ್ಯವಿರುವಷ್ಟು ಅಂಚೆ ಚೀಟಿ ಅಂಟಿಸಲು ಮರೆಯಬಾರದು, ಆಯ್ಕೆಯಾಗದೇ ಇರುವ ಕತೆ ಮರಳಿಸಬೇಕಾದರೇ ಅಷ್ಟೇ ಮೊತ್ತದ ಅಂಚೆ ಚೀಟಿ ಅಂಟಿಸಿದ ಸ್ವವಿಳಾಸವಿರುವ ಕವರನ್ನು ಜೊತೆಗೆ ಇಡಬೇಕು.
  • ಸ್ಪರ್ಧೆಯ ತೀರ್ಪುಗಾರರು ನೀಡಿದ ನಿರ್ಣಯವೇ ಅಂತಿಮವಾಗಿರುತ್ತದೆ.
  • ಕತೆಯನ್ನು ಕಳಿಸುವುದಕ್ಕೆ ಕೊನೆಯ ದಿನಾಂಕ 15- 01-2006.
  • ಕತೆಯನ್ನು ಕಳಿಸಬೇಕಾದ ವಿಳಾಸ : ಪ್ರಧಾನ ಸಂಚಾಲಕರು, ಶ್ರೀ ರಾಘವೇಂದ್ರ ಪ್ರಕಾಶನ (ಕಥಾ ಸ್ಪರ್ಧೆ ವಿಭಾಗ) ಅಂಬಾರಕೊಡ್ಲ, ಅಂಕೋಲಾ-581314(ಉತ್ತರ ಕನ್ನಡ ಜಿಲ್ಲೆ).
  • ಸ್ಪರ್ಧೆಗೆ ಸಂಬಂಧಪಟ್ಟಂತೆ ಹೆಚ್ಚಿನ ವಿವರಬೇಕಾದಲ್ಲಿ ಅಂಚೆ ಚೀಟಿ ಅಂಟಿಸಿದ ಸ್ವವಿಳಾಸ ಇರುವ ಲಕೋಟೆಯನ್ನು ಕಳುಹಿಸಿ.
(ಇನ್ಫೋ ವಾರ್ತೆ)


ಮುಖಪುಟ / ವಾರ್ತೆಗಳು

User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
1st Test , Lord's Cricket Ground, St John's Wood
West Indies: 115 / 4, 43.3 Overs
IPL, Himachal Pradesh Cricket Association Stadium, Dharmasala
Kings XI Punjab won by 6 wickets
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article