To check Oneindia Kannada on your Mobile
go to:   http://m.oneindia.in/kannada/
  •  

ಶ್ರೀಕೃಷ್ಣ ಗಾರುಡಿಯಲ್ಲ ಇದು ‘ಗಾರುಡಿ-2003’

ಬೆಂಗಳೂರು : ಇದೇ ಮೊದಲ ಬಾರಿಗೆ ನೂರಾರು ಜಾದೂಗಾರರು ಭಾಗವಹಿಸುವ ‘ಗಾರುಡಿ-2003’ ಹೆಸರಿನ ಅಖಿಲ ಕರ್ನಾಟಕ ಜಾದೂಗಾರರ ಸಮ್ಮೇಳನ ನಗರದಲ್ಲಿ ನಡೆಯಲಿದೆ.

ಜಾದೂ ಕಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮಾದ್ರಿ ಜಾದೂ ಸಂಘಟನೆ ಏರ್ಪಡಿಸಿರುವ ಗಾರುಡಿ-2003 ಸಮ್ಮೇಳನ ರಾಜ್ಯ ಸರ್ಕಾರದ ಆಶ್ರಯದಲ್ಲಿ ಜ. 18 ಹಾಗೂ 19 ರಂದು ನಡೆಯಲಿದೆ. ಪುರಭವನದಲ್ಲಿ ನಡೆಯುವ ಈ ಸಮ್ಮೇಳನದ ನೇತೃತ್ವವನ್ನು ಪ್ರಸಿದ್ಧ ಜಾದೂಗಾರ ಪ್ರಹ್ಲಾದ ಆಚಾರ್ಯ ವಹಿಸುವರು.

ರಾಜ್ಯದ ನೂರಾರು ಹಿರಿಯ, ಕಿರಿಯ ಹಾಗೂ ಉದಯೋನ್ಮುಖ ಜಾದೂಗಾರರು ಈ ಸಮ್ಮೇಳನದಲ್ಲಿ ಭಾಗವಹಿಸುವರು. ಹಿರಿಯರ ವಿಭಾಗ ಹಾಗೂ ಕಿರಿಯರ ವಿಭಾಗದಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಅತ್ಯುತ್ತಮ ಪ್ರದರ್ಶನ ನೀಡುವ ಜಾದೂಗಾರರಿಗೆ ವರ್ಷದ ಗಾರುಡಿಗ ಪ್ರಶಸ್ತಿ ನೀಡಲಾಗುವುದು.

ಜಾದೂ ಸಮ್ಮೇಳನದ ವಿವರಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 9844115234.

(ಇನ್ಫೋ ವಾರ್ತೆ)

Click here to go to top
ಮುಖಪುಟ / ಇವತ್ತು... ಈ ಹೊತ್ತು...


ಜನವರಿ 17, 2003 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 
Robin Sharma Live in Bangalore
3rd Twenty20 , Eden Park, Auckland
South Africa won by 3 runs

ರೋಗಿಗಳ ನೋವಿಳಿಸಿದ ನರಸಿಂಹಮೂರ್ತಿಗೆ ಥ್ಯಾಂಕ್ಸ್‌

ಆಸ್ಪತ್ರೆಯಲ್ಲಿ ವೈದ್ಯರ ಸೂಜಿ ನೋಡಿದರೆ, ಏನೋ ದಿಗಿಲು! ರಕ್ತ ಪರೀಕ್ಷೆ ಮತ್ತಿತರ ಕಾರಣಗಳಿಗಾಗಿ ಪದೇಪದೇ ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಇನ್ನೂ ಕಷ್ಟ! ಇಂತಹ ಕಷ್ಟಗಳಿಗೆ ಪೂರ್ಣ ವಿರಾಮ ಹಾಕಿದವರು; ನಮ್ಮವರು. ಬೆಂಗಳೂರು ಮೂಲದ ಡಾ. ನರಸಿಂಹಮೂರ್ತಿ ಅವರ ಹೊಸ ಸಂಶೋಧನೆ, ಅನೇಕ ರೋಗಿಗಳಿಗೆ ವರದಾನ! * ದಟ್ಸ್‌ ಕನ್ನಡ ನ್ಯೂಸ್‌ ಡೆಸ್ಕ್‌ ಕ್ಯಾನ್ಸರ್‌, ಏಡ್ಸ್‌ ಮೊದಲಾದ ಮಾರಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಬಹಳ.....
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
Oneindia  Oneindia Login
Follow Oneindia Kannada on Twitter
Oneindia Kannada Facebook fan page
Write Comments on this Article