Englishবাংলাગુજરાતીहिन्दीമലയാളംதமிழ்తెలుగు
Filmibeat Kannada

ನೆಲಕ್ಕೆ ತಲೆ ಇಟ್ಟ ವಿದುರಾಶ್ವತ್ಥದ ದೊಡ್ಡಮರ, ವೃಕ್ಷರಾಜಾಯತೇ ನಮಃ !

Published: Thursday, May 24, 2001, 5:30 [IST]
 

ಕೋಲಾರ : ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ವಿದುರಾಶ್ವತ್ಥದ ಅಶ್ವತ್ಥನಾರಾಯಣ ಸ್ವಾಮಿ ದೇವಾಲಯದ ಎದುರು ನೂರಾರು ವರ್ಷಗಳಿಂದ ಕದಲದೇ ನಿಂತಿದ್ದ ಶತಮಾನಗಳಷ್ಟು ಹಳೆಯದಾದ ಬೃಹದಾಕಾರದ ಅಶ್ವತ್ಥವೃಕ್ಷ ನೆಲಕಚ್ಚಿದೆ. ಈ ವೃಕ್ಷದ ಕೆಳಭಾಗದಲ್ಲಿ ಸಾವಿರಾರು ಭಕ್ತಾದಿಗಳು ಪ್ರತಿಷ್ಠಾಪಿಸಿದ್ದ ಕೆಲವು ನಾಗರಕಲ್ಲು, ಪ್ರತಿಮೆಗಳಿಗೂ ಸಹ ಹಾನಿಯುಂಟಾಗಿದೆ ಎಂದು ವರದಿಗಳು ತಿಳಿಸಿವೆ.

ಮಹಾಭಾರತದ ವಿದುರನ ಉಲ್ಲೇಖವೂ ಇರುವ ಪುರಾಣ ಪ್ರಸಿದ್ಧ ಈ ಸ್ಥಳ, ಐತಿಹಾಸಿಕವಾಗಿಯೂ ಪ್ರಸಿದ್ಧಿ ಪಡೆದಿದೆ. ಅಶ್ವತ್ಥನಾರಾಯಣನ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ನೂರಾರು ವರ್ಷಗಳಿಂದ ನೆರಳಾಗಿ ನಿಂತಿದ್ದ ವೃಕ್ಷಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಪೂಜೆ ಸಲ್ಲಿಸುತ್ತಿದ್ದರು.

ಅಶ್ವತ್ಥವೃಕ್ಷದಲ್ಲಿ ಸೃಷ್ಟಿ, ಸ್ಥಿತಿ, ಲಯಕರ್ತರಾದ ತ್ರಿಮೂರ್ತಿಗಳಾದಿಯಾಗಿ ಮುಕ್ಕೋಟಿ ದೇವತೆಗಳೂ ನೆಲೆಸಿದ್ದಾರೆ. ಈ ವೃಕ್ಷಕ್ಕೆ ಮೂಲತೋ ಬ್ರಹ್ಮ ರೂಪಾಯ, ಮಧ್ಯತೋ ವಿಷ್ಣು ರುಪಿಣೆ, ಅಗ್ರತಃ ಶಿವರೂಪಾಯ ವೃಕ್ಷರಾಜಾಯತೇ ನಮಃ ಎಂಬ ಶ್ಲೋಕವನ್ನು ಪಠಿಸುತ್ತಾ ಪ್ರದಕ್ಷಿಣೆ ಹಾಕಿದರೆ ಬಂಜೆ ಎಂಬ ಪಟ್ಟಹೊತ್ತವರಿಗೂ ಮಕ್ಕಳಾಗುತ್ತದೆ ಎಂಬ ನಂಬಿಕೆ ಹಿಂದೂಗಳದು. ಇತಿಹಾಸ ಪರಂಪರೆಯ ಈ ಪುರಾತನ ವೃಕ್ಷವನ್ನು ಸಂರಕ್ಷಿಸಲು ಪ್ರಯತ್ನ ಮಾಡದ ದೇಗುಲದ ಆಡಳಿತ ಮಂಡಳಿಯನ್ನು ನಾಗರಿಕರು ಶಪಿಸುತ್ತಿದ್ದಾರೆ.

ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter
Videos You May Like