twitter
For Quick Alerts
ALLOW NOTIFICATIONS
For Daily Alerts

ರವಿಚಂದ್ರನ್ ಬಾಳಿನ ಶಾಂತಿ ಕದಡಿದ 'ಶಾಂತಿಕ್ರಾಂತಿ'

By Rajendra

Next »

« Previous

ಆದರೆ ನಾನು ಅದನ್ನು ಬಿಟ್ಟು ಮುಂದೆ ಹೋಗುತ್ತಿದ್ದೇನೆ, ಓಡುತ್ತಿದ್ದೇನೆ. ಪ್ರತಿ ಬಾರಿ ಯಾರಾದರೂ ನಾನು ಸೋತೆ ಎಂದರೆ. ಅಯ್ಯೋ ನಾನು ಇನ್ನೂ ಓಡ್ತಾ ಇದ್ದೀನಿ. ಆಗಲೇ ಹೆಂಗೆ ಸೋತೆ ಎಂದು ಡಿಸೈಡ್ ಮಾಡ್ತೀರಾ. ನಾನು ಯಾರನ್ನೂ ಕಾಂಪಿಟೇಟರ್ಸ್ ಎಂದುಕೊಂಡಿಲ್ಲ. ಇದುವರೆಗೂ ನಾನು ದುಡ್ಡೇ ಮಾಡಿಲ್ಲ ಎಂತಲೂ ಅನ್ನಿಸಿಲ್ಲ. ದುಡ್ಡು ಬರುತ್ತದೆ ಬಿಡು. ನನಗೆ ದುಡ್ಡು ಬೇಕಾಗಿರುವುದು ಕೇವಲ ಸಿನಿಮಾ ಮಾಡಲು ಅಷ್ಟೇ ಎಂದರು.

ಎರಡನೇ ನಿರ್ದೇಶನದ ಚಿತ್ರ ರಣಧೀರ ಆ ಹೊತ್ತಿಗೆ ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿಯಲ್ಲಿ ರು.2 ಕೋಟಿ ದುಡ್ಡು ಮಾಡಿತು ಎಂಬುದು. ಈ ಹೊತ್ತಿಗೆ ಅದು ರು.20 ಕೋಟಿ ಎಂದುಕೊಳ್ಳಬಹುದು. ಇದು ಕೇವಲ ಒಂದು ಏರಿಯಾದ ಲೆಕ್ಕಾಚಾರ.

ಇಂದಿಗೆ ಒಂದು ಚಿತ್ರ ಇಪ್ಪತ್ತು ಕೋಟಿ ದುಡ್ಡು ಮಾಡ್ತು ಎಂದರೆ ದೊಡ್ಡ ಪಾರ್ಟಿ ಮಾಡ್ತಾರೆ. ಆ ಹೊತ್ತಿಗೆ ನಿಮಗೆ ಇಷ್ಟು ದುಡ್ಡು ಆಯ್ತು ಎಂಬ ಅರಿವಿತ್ತಾ? ಎಂದಾಗ, ಆಗಿನ ಕಾಲದಲ್ಲಿ ಯಾರೂ ವ್ಯವಹಾರದ ಗುಟ್ಟನ್ನು ಬಿಟ್ಟು ಕೊಡುತ್ತಿರಲಿಲ್ಲ. ಯಾವ ವಿತರಕನೂ ಬಂದು ನನಗೆ ಎರಡು ಕೋಟಿ ಬಂತು ಎಂದು ಹೇಳಿದಿಲ್ಲ. ಯಾರಿಗೂ ಗೊತ್ತೇ ಇರಲಿಲ್ಲ ಕನ್ನಡ ಚಿತ್ರೋದ್ಯಮದಲ್ಲಿ ಇಷ್ಟೆಲ್ಲಾ ವ್ಯಾಪಾರ ಆಗುತ್ತದೆ ಎಂದು. ಅವರವರು ತೆಗೆದುಕೊಂಡು ಹೋಗಿ ಸೈಲೆಂಟಾಗಿ ಓಡಿಸಿಕೊಳ್ಳೋರು.

Ravichandran and Shanti Kranti failure Bigg Boss Kannada 2

ಚಿತ್ರವೊಂದು ಎರಡು ವರ್ಷ ಓಡುತ್ತಿತ್ತು. ಬೆಂಗಳೂರಿನಲ್ಲಿ ಕುಳಿತುಕೊಂಡ ನಮಗೆ ಅದು ಗೊತ್ತೇ ಆಗುತ್ತಿರಲಿಲ್ಲ. ಹತ್ತು ಲಕ್ಷದಲ್ಲಿ ಮಾಡಿರುವ ಸಿನಿಮಾ ಇಪ್ಪತ್ತುಲಕ್ಷ ಮಾಡಿದರೆ ಅದೇ ನಮ್ಮ ಪಾಲಿಗೆ ದೊಡ್ಡ ಸಂಗತಿಯಾಗಿತ್ತು.

ಎರಡು ಕೋಟಿ ಮಾಡಿದೆ ಎಂಬುದು ನಮಗೆ ಗೊತ್ತಾಗುತ್ತಿದ್ದದ್ದು ಹೋಗ್ತಾ ಹೋಗ್ತಾ ಅವರು ಇವರು ಮುಖಾಂತರ ಅಷ್ಟೆ. ಹುಬ್ಬಳ್ಳಿಯಲ್ಲಿ ಎರಡು ವರ್ಷ ಹೋಗಿದ್ದು ನನಗೇ ಗೊತ್ತಾಗಿರಲಿಲ್ಲ. ಯಾಕೆಂದರೆ ವಿತರಕರು ಬಂದು ಬಾಯೇ ಬಿಡ್ತಿರಲಿಲ್ಲ.

ಈ ಹೊತ್ತು ಮಲ್ಟಿಫ್ಲೆಕ್ಸ್ ಚಿತ್ರಮಂದಿಗಳು ಬಂದ ಮೇಲೆ ನಿಮಗಿಷ್ಟ ಬಂದ ರೇಟು ಇಟ್ಟುಕೊಳ್ಳಬಹುದು. ನಾನು ಪ್ರೇಮಲೋಕ ಮಾಡಿದಾಗ ಚೇಂಬರ್ ನಲ್ಲಿ ದೊಡ್ಡ ಗಲಾಟೆ ನಡೆದಿತ್ತು. ನಾನು ಒಂದೊಂದು ಸಿನಿಮಾಗೆ 2, 5 ಕೋಟಿ ಖರ್ಚು ಮಾಡಿಕೊಂಡು ಬರ್ತಿದ್ದೀನಿ. ಪಕ್ಕದಲ್ಲಿ ಯಾರೋ ಒಬ್ಬ 20 ಲಕ್ಷದಲ್ಲಿ ಸಿನಿಮಾ ಮಾಡಿರ್ತಾನೆ. ಅವನ ಚಿತ್ರಕ್ಕೂ ಹದಿನೈದು ರೂಪಾಯಿ ಟಿಕೆಟ್ ನನ್ನ ಸಿನಿಮಾಗೂ 15 ರುಪಾಯಿ ಟಿಕೆಟ್. ನಾನ್ಯಾಕೆ ನನ್ನ ಸಿನಿಮಾ ಟಿಕೆಟ್ ರೇಟು ಜಾಸ್ತಿ ಮಾಡಿಕೊಳ್ಳಬಾರದು ಎಂದು ಕೇಳಿದ್ದೆ. ಇಪ್ಪತ್ತೈದು ವರ್ಷಗಳ ಹಿಂದೆ ಕೇಳಿದ್ದ ಪ್ರಶ್ನೆ ಇದು.

'ಶಾಂತಿ ಕ್ರಾಂತಿ' ಕಳೆದಾಗ ಅದರ ಸಾಲ ತೀರಿಸಲು ನನಗೆ ಹದಿನೈದು ವರ್ಷ ಬೇಕಾಯಿತು. ಅದೇ ರಾಮಾಚಾರಿ, ಪುಟ್ನಂಜ ಬಂದಾಗ ಒಂದು ಟಿಕೆಟ್ ಗೆ ಎರಡು ರುಪಾಯಿ ಜಾಸ್ತಿ ಮಾಡಿದ್ದರೆ ನನ್ನ ಸಾಲ ಐದು ವರ್ಷಕ್ಕೆ ಮುಂಚೆ ತೀರಿಹೋಗುತ್ತಿತ್ತು. ಸಿನಿಮಾ ಚೆನ್ನಾಗಿದ್ದಾಗ ಎರಡು ರೂಪಾಯಿ ಜಾಸ್ತಿ ತೆಗೆದುಕೊಳ್ಳುವುದರಲ್ಲಿ ತಪ್ಪೇನು ಇಲ್ಲ. ಆಗಲೇ ನಾವು ಮುಂದಕ್ಕೆ ಹೋಗಲು ಸಾಧ್ಯವಾಗೋದು.

Kranti failure Bigg Boss Kannada 2

ಆಗಿನ ಕಾಲಕ್ಕೆ ಪ್ರೇಮಲೋಕ ಓಡೋದೇ ಇಲ್ಲ ಎಂಬ ಸನ್ನಿವೇಶ ನಿರ್ಮಾಣವಾಗಿತ್ತು. ನೂರು ದಿನಕ್ಕೆ ಪಿಕಪ್ ಆದಂತಹ ಸಿನಿಮಾ ಅದು. ಸೆಕೆಂಡ್ ಫಿಲಂಗೆ ತಾವು ರೀಮೇಕ್ ಗೆ ಹೋದಿರಿ ಯಾಕೆ? ಎಂದಾಗ, ಆಗ ಕೆಸಿಎನ್ ಚಂದ್ರು ಸಿನಿಮಾ ಎಂದು ಬಂದಿದ್ದರು. ನನ್ನ ಎರಡೂ ಸಿನಿಮಾ ಡೈರೆಕ್ಟ್ ಮಾಡು ಎಂದು ಹೇಳಿದ್ದೇ ಅವರು. ಅವರಿಗಾಗಿ ಬರೆದದ್ದೇ ಫಸ್ಟ್ 'ಪ್ರೇಮಲೋಕ' ಸಬ್ಜೆಕ್ಟ್. ಬಡ್ಜೆಟ್ ಕೇಳಿಬಿಟ್ಟು ಬೇಡ ಎಂದು ಹೊರಟು ಹೋದರು. ಪ್ರೇಮಲೋಕ ಹಿಟ್ ಆದಮೇಲೆ ಬಂದು ನನಗೆ ಇದನ್ನು ಮಾಡಿಕೊಡು ಎಂದು ಬಂದವರು. ನಾನು ರೀಮೇಕ್ ಎಂದು ಯಾ ಹೊತ್ತು ಮಾಡೇ ಇಲ್ಲ.

ಯಾವುದೇ ಚಿತ್ರ ನಾನು ಒಮ್ಮೆ ನೋಡಿದ ಮೇಲೆ ಮತ್ತೆ ನೋಡೊಲ್ಲ. ನಾನು ಚಿತ್ರ ಮಾಡಬೇಕಾದರೆ ನನ್ನದೇ ಶೈಲಿಯಲ್ಲಿ ಹಾಡುಗಳನ್ನು ಹಾಕುತ್ತಿದ್ದೆ. ಅದನ್ನೊಂದು ರೀಮೇಕ್, ಹಂಗೆ ಅಚ್ಚುಕಟ್ಟಾಗಿ ಇಳಿಸಬೇಕು ಎಂದು ಮಾಡಿದವನಲ್ಲ. ಪ್ರತಿಯೊಂದನ್ನೂ ಚಾಲೆಂಜಿಂಗ್ ಆಗಿ ಮಾಡಿದ್ದೇನೆ. ಆಲ್ ರೆಡಿ ಒಬ್ಬ ಸಿನಿಮಾ ಮಾಡಿದ್ದಾನೆ. ಅದಕ್ಕಿಂತಲೂ ಚೆನ್ನಾಗಿ ಮಾಡಿ ತೋರಿಸುವ ಧೈರ್ಯ ಬೇಕಲ್ಲಾ ನನಗೆ. ಈ ಹೊತ್ತಿಗೂ 'ರಾಮಚಾರಿ' ಸಿನಿಮಾ ನೋಡಿದಾಗ ಇಳಯರಾಜಾ ಬಂದು ಬೈತಾರೆ. ಎಷ್ಟು ಧೈರ್ಯ ಇದ್ದರೆ ನೀವು ಹಾಡುಗಳು ಚೇಂಜ್ ಮಾಡಿ ಆ ರೀತಿ ಸಿನಿಮಾ ಮಾಡ್ತೀಯಾ ಎಂದು.

Next »

« Previous

English summary
Crazy Star, Dream Merchant of Sandalwood Ravichandran shares his golden moments with Kichcha Sudeep on Bigg Boss Kannada 2 stage. Ravichandran shares his painful moments, Shanti Kranti debacle, today's film industry many more. Here is the zero in on of 'Sakkat Sunday with Kichcha Sudeep'.
Tuesday, July 8, 2014, 15:34
IIFA

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X