twitter
    For Quick Alerts
    ALLOW NOTIFICATIONS  
    For Daily Alerts

    ಬಿಗ್ ಬಾಸ್ ಮನೆಯೊಳಗೆ 'ಟ್ರಬಲ್ ಸ್ಟಾರ್' ಎಂಟ್ರಿ!

    By Prasad
    |

    ಮೇಷ್ಟ್ರು ಹೇಳುವ ಪಾಠವನ್ನು ತದೇಕಚಿತ್ತದಿಂದ ಕೇಳಿಸಿ, ಮನೆಪಾಠ ಹೇಳಿದ್ದನ್ನು ಶ್ರದ್ಧೆಯಿಂದ ಮುಗಿಸಿ ಒಪ್ಪಿಸುವ ವಿದ್ಯಾರ್ಥಿಗಳ ನಡುವೆ 'ರೆಬೆಲ್ (ಟ್ರಬಲ್) ಸ್ಟಾರ್' ಒಬ್ಬರು ಎಂಟ್ರಿ ತೆಗೆದುಕೊಂಡಿದ್ದಾರೆ. ಅವರೇ ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರ, ಆಲ್-ಇನ್-ಒನ್ ಆಗಿರುವ 'ಮಠ' ಖ್ಯಾತಿಯ ಗುರುಪ್ರಸಾದ್.

    ಈ ಬಾರಿ ಅಷ್ಟೊಂದು ಗತ್ತು ಕೂಡ ಇಲ್ಲದ ಬಿಗ್ ಬಾಸ್ ಅನ್ನು ಪ್ರಶ್ನಿಸುವ, ಅವರು ನೀಡುವ ಟಾಸ್ಕ್ ಪ್ರತಿರೋಧಿಸುವ, ಇದು ಸರಿಯಲ್ಲ ಎಂದು ಗಟ್ಟಿ ದನಿಯಲ್ಲಿ ಹೇಳುವ ಒಬ್ಬೇ ಒಬ್ಬ ಸ್ಪರ್ಧಿ ಇಲ್ಲಿಯವರೆಗೆ ಮನೆಯಲ್ಲಿರಲಿಲ್ಲ. ಬಿಗ್ ಬಾಸ್ ಅನ್ನೇ ಪ್ರಶ್ನಿಸ್ತೀನಿ ಎಂದು ಹೇಳುತ್ತಿರುವ ಗುರುಪ್ರಸಾದ್ ಎಷ್ಟು ದಿನ ಮನೆಯಲ್ಲಿರ್ತಾರೋ ಬಿಡ್ತಾರೋ ಗೊತ್ತಿಲ್ಲ, ಅಂತೂ ಗಟ್ಟಿದನಿಯಲ್ಲಿ 'ಯಾರಯ್ಯ ಬಿಗ್ ಬಾಸ್' ಎಂದು ಕೇಳಿದ್ದಾರೆ.

    ಬಿಗ್ ಬಾಸ್ ಮೊದಲ ಅವತರಣಿಕೆಯಲ್ಲಿ ಗುರೂಜಿ ನರೇಂದ್ರ ಬಾಬು ಶರ್ಮಾ ಈ ಬಗೆಯ ಎದೆಗಾರಿಕೆ ತೋರಿಸಿ, ಬಿಗ್ ಬಾಸ್ ನಿರ್ದೇಶನಗಳನ್ನು ಧಿಕ್ಕರಿಸಿ, ಶಿಕ್ಷೆಗೂ ಗುರಿಯಾಗಿ, ನನಗೆ ನಾನೇ ಬಿಗ್ ಬಾಸ್, ಬೇಕಾದ್ರೆ ಈಗ್ಲೇ ಮನೆ ಬಿಟ್ಟು ಹೋಗ್ತೀನಿ ಎಂದಿದ್ದರು. ಕಡೆಗೆ ಫೈನಲ್ ವರೆಗೂ ಉಳಿದುಕೊಂಡಿದ್ದರು. [ಬಿಗ್ ಬಾಸಿಗೇ ಧಮ್ಕಿ ಹಾಕಿದ 'ಬ್ರಹ್ಮಾಂಡ' ಗುರೂಜಿ!]

    ಹಿಂದಿನದೇನೇ ಇರಲಿ, ಗುರುಪ್ರಸಾದ್ ಪ್ರವೇಶದಿಂದ ಅತ್ಯಂತ ನೀರಸವಾಗಿರುತ್ತಿದ್ದ ಎಪಿಸೋಡುಗಳಿಗೆ ಸ್ವಲ್ಪವಾದರೂ ಜೀವಂತಿಕೆ ಬರುವ ಲಕ್ಷಣಗಳು ಕಂಡಿವೆ. ಪೂರ್ವನಿರ್ಧಾರಿತ ನಿರ್ದೇಶನದಂತೆ ಗುರುಪ್ರಸಾದ್ ಹೀಗೆ ಮಾಡುತ್ತಿದ್ದಾರೋ ಅಥವಾ ಅವರು ಇರುವುದೇ ಹೀಗೆಯೋ ತಿಳಿದಿಲ್ಲ. ಹಿರಿಯರಾಗಿರುವ ಅವರು ಉಳಿದ ಸ್ಪರ್ಧಿಗಳಿಗಿಂತ ವಿಭಿನ್ನವಾಗಿದ್ದಾರೆ ಎಂಬುದಂತೂ ಸತ್ಯ.

    ವಿಭಿನ್ನಬಗೆಯ ಟಾಸ್ಕ್ ನೀಡಿದ ಬಿಗ್ ಬಾಸ್

    ವಿಭಿನ್ನಬಗೆಯ ಟಾಸ್ಕ್ ನೀಡಿದ ಬಿಗ್ ಬಾಸ್

    ಸ್ಪರ್ಧಿಗಳನ್ನು ಎರಡು ತಂಡಗಳನ್ನಾಗಿ ವಿಂಗಡಿಸಲಾಗಿದ್ದು, ಒಂದು ತಂಡ ಗಾರ್ಡನ್ ಪ್ರದೇಶದಲ್ಲಿ ಇದ್ದ ಸಾಮಗ್ರಿಗಳನ್ನು ಬಳಸಿ ನೋಟುಗಳನ್ನು ಪ್ರಿಂಟ್ ಮಾಡಬೇಕು. ಅದನ್ನು ಬಳಸಿಯೇ ಮನೆಯಲ್ಲಿದ್ದ ಪ್ರತಿಯೊಂದು ವಸ್ತುವನ್ನು ಖರೀದಿಸಿ ಬಳಸಬೇಕು. ಮನೆಯೊಳಗಿರುವ ತಂಡ ವ್ಯಾಪಾರ ಮಾಡಿ, ಲೆಕ್ಕಾಚಾರ ಹಾಕಿ ದುಡ್ಡು ಇಸಿದುಕೊಂಡು ಆ ವಸ್ತುಗಳನ್ನು ನೀಡಬೇಕು.

    ಬಾತ್ ರೂಮ್ ಬಳಸಬಹುದು, ನೀರು ಬಳಸಂಗಿಲ್ಲ!

    ಬಾತ್ ರೂಮ್ ಬಳಸಬಹುದು, ನೀರು ಬಳಸಂಗಿಲ್ಲ!

    5 ಸಾವಿರಕ್ಕೆ ನೀರಿನ ಬಾಟಲ್, ಗ್ಯಾಸ್ 2 ಗಂಟೆಗೆ 50 ಸಾವಿರ, ಬಳಕೆಯ ನೀರು 4 ಗಂಟೆಗೆ 50 ಸಾವಿರ, ತಿಂಡಿಗೆ ಅಡುಗೆ ಸಾಮಾನು 20 ಸಾವಿರ, ಟೀಕಾಫಿ ತಯಾರಿಸಲು ಸಾಮಗ್ರಿಗೆ 10 ಸಾವಿರ.... ಉಚಿತವಾಗಿ ಬೇಕಾದ್ರೆ ಬಾತ್ ರೂಮ ಬಳಸಬಹುದು. ಆದರೆ, ನೀರು ಬಳಸಂಗಿಲ್ಲ! ಎಂಗೈತೆ?

    ಶುರುವಾಯ್ತು ನೋಡಿ ಜಿದ್ದಾಜಿದ್ದಿ ಕುಸ್ತಿ

    ಶುರುವಾಯ್ತು ನೋಡಿ ಜಿದ್ದಾಜಿದ್ದಿ ಕುಸ್ತಿ

    ನೋಟು ಛಾಪಿಸುವವರು ದುಡ್ಡುಕೊಟ್ಟೇ ಎಲ್ಲವನ್ನೂ ಪಡೆಯಬೇಕಾಗಿದ್ದಲ್ಲಿ, ಒಳಗಿರುವವರು ಯಾಕೆ ಬಿಟ್ಟಿ ಬಳಸುತ್ತಿದ್ದಾರೆ? ನೀರು, ಹಣ್ಣು, ಬೇಕಾದಹಾಗೆ ತಿನ್ನುತ್ತಿದ್ದಾರೆ ಎಂಬ ಜಗಳ ಆರಂಭಿಸಿದರು ಅಕುಲ್ ಬಾಲಾಜಿ. ಸಾಲದ್ದಕ್ಕೆ ಮನೆಯೊಳಗಿನವರ ಕ್ಯಾಪ್ಟನ್ ಆಗಿರುವ ದೀಪಿಕಾ ಕಾಮಯ್ಯ ಹೊರಗಿನವರ ಎಲ್ಲ ನೀರಿನ ಬಾಟಲಿಗಳನ್ನು ಇಸಿದುಕೊಂಡು ಹೋಗಿದ್ದರು.

    ಹೊರಗಡೆ ಇಷ್ಟೆಲ್ಲ ನಡೆಯುತ್ತಿರುವಾಗ...

    ಹೊರಗಡೆ ಇಷ್ಟೆಲ್ಲ ನಡೆಯುತ್ತಿರುವಾಗ...

    ಮನೆಯೊಳಗಿನವರು ಕೂಡ ಇಸಿದುಕೊಂಡಿರುವ ದುಡ್ಡು ಬಳಸದೆ ಏನನ್ನೂ ಉಪಯೋಗಿಸುವಂತಿಲ್ಲ ಎಂಬ ನಿಯಮ ಹಾಕಿದ್ದರೂ, ಅಲ್ಲೊಬ್ಬರಿದ್ದರು ಆ ನಿಮಯಗಳನ್ನು ಧಿಕ್ಕರಿಸಲು. ಉಳಿದವರೆಲ್ಲ ನಿಯಮಗಳಿಗೆ ಬದ್ಧರಾಗಿದ್ದರೆ ಗುರುಪ್ರಸಾದ್ ತಮಗಿಷ್ಟ ಬಂದ ಹಣ್ಣು ತಿಂದು ನೀರು ಕುಡಿದು ಡರ್ ಎಂದು ತೇಗುತ್ತಿದ್ದರು. ಜೊತೆಗೆ ರೋಹಿತ್ ಕೂಡ ಸಾಥ್ ನೀಡಿದ್ದರು.

    ಕೊಲೆ ಮಾಡಕಾಗಲ್ಲ, ನೇಣ್ ಹಾಕೋಕಾಗಲ್ಲ

    ಕೊಲೆ ಮಾಡಕಾಗಲ್ಲ, ನೇಣ್ ಹಾಕೋಕಾಗಲ್ಲ

    ಗುರುಪ್ರಸಾದ್ ಅವರು, ನೀವು ನೀರು ಗ್ಯಾಸ್ ಬಳಸೋಕಾಗಲ್ಲ ಅಂದ್ರೆ ನಾನು ಬಳಸ್ತೀನಿ. ನಿಯಮ ಉಲ್ಲಂಘಿಸಿದ್ರೆ ಕೊಲೆ ಮಾಡೋಕಾಗಲ್ಲ, ನೇಣ್ ಹಾಕೋಕಾಗಲ್ಲ. ಪ್ಯಾಥೆಟಿಕ್ ಪನಿಶ್ಮೆಂಟ್ ಕೊಡ್ತಾರಾ ಕೊಡ್ಲಿ. ಏನೂ ತಿನ್ದೆ ಅಸಿಡಿಟಿ ಮಾಡಿಕೊಂಡು, ಹೌ ಕ್ಯಾನ್ ಐ ಎಂಟರ್ಟೇನ್ ಯು, ಹೌ ಕ್ಯಾನ್ ಯು ಎಂಟರ್ಟೇನ್ ದಿ ವರ್ಲ್ಡ್? ಅಂತ ಲಾಜಿಕಲ್ಲಾಗಿ ಮಾತನಾಡಿದರು.

    ಆರೋಗ್ಯವೇ ಸಮಸ್ಯೆಯಾಗಿದೆ ಎಂದ ಗುರು

    ಆರೋಗ್ಯವೇ ಸಮಸ್ಯೆಯಾಗಿದೆ ಎಂದ ಗುರು

    ಆರೋಗ್ಯವೇ ಸಮಸ್ಯೆಯಾಗಿದೆ. ನೀವು ನನಗೆ ಮಿನಿಮಮ್ ಕೊಡಿ, ನಾನು ನಿಮಗೆ ಮ್ಯಾಕ್ಸಿಮಮ್ ಕೊಡ್ತೀನಿ ಅಂತ ಬಿಗ್ ಬಾಸ್ ಗೆ ಗುರುಪ್ರಸಾದ್ ಪ್ರಸ್ತಾಪಿಸಿದರು. ಆಪ್ಶನ್ ಬಿನಲ್ಲಿ ಇಡಲಾಗಿದ್ದ ತಿಂಡಿಯನ್ನು ಬಿಟ್ಟು, ನೋಟು ಛಾಪಿಸುವವರಿಗಾಗಿ ಮೀಸಲಾಗಿಟ್ಟಿದ್ದ ಹಣ್ಣುಗಳನ್ನೇ ಗುರು ಲಪಟಾಯಿಸಿ ಗುಳುಂ ಅನ್ನಿಸಿದರು.

    ಗುರುಗೆ ಟೀಮ್ ಸ್ಪಿರಿಟ್ ಇಲ್ಲ

    ಗುರುಗೆ ಟೀಮ್ ಸ್ಪಿರಿಟ್ ಇಲ್ಲ

    ಇಷ್ಟು ದಿನ ನಾವೆಲ್ಲ ಟೀಮ್ ಸ್ಪಿರಿಟ್ಟಿನಿಂದ ಆಟ ಆಡ್ತಾ ಇದ್ದೀವಿ. ಆದರೆ, ಇವರು ಮಾತ್ರ ಎಲ್ಲ ನಿಮಯಗಳನ್ನು ಗಾಳಿಗೆ ತೂರುತ್ತಿದ್ದಾರೆ. ಇದೇನು ಆಟವಾ? ನಾನು ಈ ಆಟದಿಂದ ಹೊರಗೆ ಹೋಗುತ್ತೇನೆ ಎಂದು ಸಂತೋಷ್ ರೇಗಾಡಿದರು. ಉಳಿದವರೆಲ್ಲ ಸಮಾಧಾನ ಹೇಳಿ ಅವರಿಗೆ ಮನವರಿಗೆ ಮಾಡಿಕೊಟ್ಟರು.

    ಇಂಥದೆಲ್ಲ ಅದೆಷ್ಟೋ ನೋಡಿಬಿಟ್ಟಿದ್ದೀನಿ

    ಇಂಥದೆಲ್ಲ ಅದೆಷ್ಟೋ ನೋಡಿಬಿಟ್ಟಿದ್ದೀನಿ

    ತಲೆ ಆಕ್ಟೀವ್ ಆಗಿರೋಕೆ ಇಂತಿಷ್ಟು ಅಂತ ಬೇಕೇಬೇಕು. ನನಗೆ ಮೃಷ್ಟಾನ್ನ ಭೋಜನ ಬೇಡ. ನಲವತ್ತೆರಡ ನಾನು ಅಸಿಡಿಟಿ ಮಾತ್ರೆ ತೆಗೆದುಕೊಳ್ಳುತ್ತಿರುವುದರಿಂದ ಏನಾದರೂ ತಿನ್ನಲೇಬೇಕು. ಇಲ್ಲದಿದ್ದರೆ ಆರೋಗ್ಯ ಸಮಸ್ಯೆ ಕಾಡತ್ತೆ. ನೀವು ಬಿಗ್ ಬಾಸ್ ಪ್ರಶ್ನಿಸಲಿಕ್ಕಿಲ್ಲ. ನಾನು ಪ್ರಶ್ನಿಸ್ತೀನಿ. ಇಂಥದೆಲ್ಲ ಅದೆಷ್ಟೋ ನೋಡಿಬಿಟ್ಟಿದ್ದೀನಿ.

    ಮುಂದೆ ಕರೆದುಕೊಂಡು ಹೋಗದಿದ್ದರೆ ಕತ್ತೆ ಬಾಲ!

    ಮುಂದೆ ಕರೆದುಕೊಂಡು ಹೋಗದಿದ್ದರೆ ಕತ್ತೆ ಬಾಲ!

    ಇಲ್ಲಿಯವರೆಗೆ ನಾನು ಪರ್ಫೆಕ್ಟ್ ನಿರ್ಧಾರ ತೆಗೆದುಕೊಂಡಿದ್ದೇನೆ. ಒಂದೇ ಒಂದು ತಪ್ಪು ನಿರ್ಧಾರ ತೆಗೆದುಕೊಂಡಿಲ್ಲ. ಕೋಟಿ ರು. ಸಂಬಳ ತಗೋತೀನಿ ನಾನು. ನನಗೆ ಗೌರವ ಕೊಡಿ, ನಾನು ನಿಮಗೆ ಗೌರವ ಕೊಡ್ತೀನಿ. ಅದರವೈಸ್ ಐ ಡೋಂಟ್ ಕೇರ್. ಯು ಕಾಂಟ್ ಕಿಲ್ ಮಿ. ಈ ಅಟಿಟ್ಯೂಟ್ ನನ್ನ ಇಲ್ಲಿಯತನಕ ಕರೆದುಕೊಂಡು ಬಂದಿದೆ. ಮುಂದೆ ಕರೆದುಕೊಂಡು ಹೋಗದಿದ್ದರೆ ಕತ್ತೆ ಬಾಲ!...

    ಗುರು ಮನೆಯಲ್ಲಿ ಉಳೀತಾರೆ ಅಂತೀರಾ?

    ಗುರು ಮನೆಯಲ್ಲಿ ಉಳೀತಾರೆ ಅಂತೀರಾ?

    ಬಿಗ್ ಬಾಸಿಗೇ ಗುಟುರು ಹಾಕಿರುವ ಗುರುಪ್ರಸಾದ್ ಮನೆಯಲ್ಲಿ ಉಳಿದುಕೊಳ್ಳುತ್ತಾರೆ ಅಂತೀರಾ? ಅಥವಾ ಬಿಗ್ ಬಾಸ್ ಮನೆಯಲ್ಲಿ ಸ್ವಲ್ಪವಾದರೂ ಜೀವಂತಿಕೆ ಇರಲಿ, ಇಂಥ ವಾಗ್ವಾದಗಳು ನಡೆಯಲಿ ಅಂತಾನೇ ಅವರನ್ನು ಬಿಗ್ ಬಾಸ್ ಮನೆಗೆ ಕರೆಯಿಸಿಕೊಂಡಿರುವುದಾ? ಹೇಳಿ.

    English summary
    Bigg Boss Kannada 2 Episode 30 : Wildcard entrant director Guruprasad challenges Bigg Boss by not following the rules. The reality show is becoming interesting after the entry of Guruprasad.
    Thursday, July 31, 2014, 11:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X