Englishবাংলাગુજરાતીहिन्दीമലയാളംதமிழ்తెలుగు

ಐಬಿಎನ್ ನಲ್ಲಿ ನಾಳೆ ಪುನೀತ್ ಸಂದರ್ಶನ ಪ್ರಸಾರ

Posted by:
Updated: Friday, September 14, 2012, 15:37 [IST]
 

ಐಬಿಎನ್ ನಲ್ಲಿ ನಾಳೆ ಪುನೀತ್ ಸಂದರ್ಶನ ಪ್ರಸಾರ

ದಕ್ಷಿಣ ಭಾರತದ ಚಿತ್ರಗಳು ಇತ್ತೀಚಿಗೆ ಭಾರಿ ಸದ್ದು ಮಾಡುತ್ತಿವೆ. ಬರೀ ಬಾಲಿವುಡ್ ನತ್ತ ಮುಖ ಮಾಡುತ್ತಿದ್ದ ರಾಷ್ಟ್ರೀಯ ವಾಹಿನಿಗಳು ಈಗ ದಕ್ಷಿಣ ಭಾರತದ ಸೆಲೆಬ್ರಿಟಿಗಳ ಸಂದರ್ಶನ ಮುಂತಾದ ಕಾರ್ಯಕ್ರಮಗಳನ್ನು ಆರಂಭಿಸಿವೆ.

ಅದರಲ್ಲಿ ಪ್ರಮುಖವಾಗಿ ಕೇಳಿ ಬರುವುದು CNN-IBN ವಾಹಿನಿಯಲ್ಲಿ ಪ್ರಸಾರವಾಗುವ "ಸದರ್ನ್ ಸ್ಟಾರ್" ಕಾರ್ಯಕ್ರಮ.

ಈ ಕಾರ್ಯಕ್ರಮದ ನಾಲ್ಕನೇ ಅತಿಥಿಯಾಗಿ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಂದರ್ಶನವನ್ನು ವಾಹಿನಿ ಈಗಾಗಲೇ ನಡೆಸಿದೆ. ಇವರ ಸಂದರ್ಶನವನ್ನು ವಾಹಿನಿ ನಾಳೆ ಸೆಪ್ಟಂಬರ್ 15 ರಂದು ಮಧ್ಯಾಹ್ನ 12 ಗಂಟೆಗೆ ಮತ್ತು ರಾತ್ರಿ 8 ಗಂಟೆಗೆ ಪ್ರಸಾರ ಮಾಡಲಿದೆ.

ಭಾನುವಾರ (ಸೆ 16) ಮಧ್ಯಾಹ್ನ 1.30ಕ್ಕೆ ಮತ್ತು ರಾತ್ರಿ 10ಗಂಟೆಗೆ ಮತ್ತೆ ಈ ಕಾರ್ಯಕ್ರಮ ಮರುಪ್ರಸಾರಗೊಳ್ಳಲಿದೆ.

ವಾಹಿನಿಯ ವೀರ್ ರಾಘವ್ ಪುನೀತ್ ಸಂದರ್ಶನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಸದರ್ನ್ ಸ್ಟಾರ್ ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ ಪ್ರಕಾಶ್ ರೈ ಭಾಗವಹಿಸಿದ್ದರು. ನಂತರ ತಮಿಳು ನಟ ಧನುಶ್, ಗಾಯಕ ಯೇಸುದಾಸ್ ನಂತರ ನಮ್ಮ ಪುನೀತ್ ರಾಜಕುಮಾರ್ ಸರದಿ. ಕಿಚ್ಚ ಸುದೀಪ್ ಅವರ ಸಂದರ್ಶನ ಕೂಡ ಈ ವಾಹಿನಿಯಲ್ಲಿ ಮೂಡಿ ಬರಲಿದೆ. ಆದರೆ ದಿನಾಂಕ ನಿಗದಿಯಾಗಿಲ್ಲ ಎಂದು ತಿಳಿದು ಬಂದಿದೆ.

ತಂದೆಯವರ ಜೊತೆ ಬಾಲನಟನಾಗಿ ಕಾಣಿಸಿಕೊಂಡಿದ್ದ ನನಗೆ ಚಿತ್ರರಂಗದಲ್ಲಿ ಮುಂದುವರಿಯ ಬೇಕೆನ್ನುವ ಆಸೆ ಇರಲಿಲ್ಲ. ಗ್ರಾನೈಟ್ ಮತ್ತು ರಿಯಲ್ ಎಸ್ಟೇಟ್ ನಲ್ಲಿ ತೊಡಗಿಸಿಕೊಳ್ಳಬೇಕೆಂದು ಕೊಂಡಿದ್ದೆ.

ಆದರೆ ಕುಟುಂಬದ ಒತ್ತಾಯದ ಮೇರೆ ಚಿತ್ರರಂಗಕ್ಕೆ ಪುರಿ ಜಗನ್ನಾಥ್ ಅವರ ನಿರ್ದೇಶನದ ಚಿತ್ರದ ಮೂಲಕ ನಾಯಕನಾದೆ.

ನಾನು ಅಮೀರ್ ಖಾನ್ ಅವರ ಅಭಿಮಾನಿ. ಪೃಥ್ವಿ ಚಿತ್ರದಲ್ಲಿ IAS ಅಧಿಕಾರಿಯ ಪಾತ್ರ ಮಾಡುವುದು ಸವಾಲಾಗಿತ್ತು. ಅಮೀರ್ ಖಾನ್ ಅವರ ಸಾಕಷ್ಟು ಚಿತ್ರಗಳ ಪ್ರಭಾವದಿಂದ ಪಾತ್ರವನ್ನು ಸಲೀಸಾಗಿ ನನ್ನಿಂದ ಮಾಡಲಾಯಿತು ಎಂದು ಪುನೀತ್ ಸಂದರ್ಶನದಲ್ಲಿ ಹೇಳಿದ್ದಾರೆ.

ಪುನೀತ್ ಸಂದರ್ಶನದ ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ

Story first published:  Friday, September 14, 2012, 14:59 [IST]
English summary
Watch the special episode of Kannada actor Puneeth Rajkumar in Southern Stars programme on CNN-IBN on Saturday, 15th September, 2012 @ 12:00 PM, 8.00PM and repeat telecast on Sunday, 16th September, 2012 @ 1:30 PM and 10:00 PM.
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter
Coupons