•  

ಸಪ್ತ ವರ್ಷಗಳ ಸಂಭ್ರಮದಲ್ಲಿ ಕನ್ನಡಿಗರ ಕಣ್ಮಣಿ ಜೀ ಕನ್ನಡ

ಶನಿವಾರ, ಫೆಬ್ರವರಿ 25, 2012, 15:32 [IST]
Zee Kannada
ಕನ್ನಡಿಗರ ಕಣ್ಮಣಿ ಜೀ ಕನ್ನಡ ವಾಹಿನಿ ಕರ್ನಾಟಕಕ್ಕೆ ಅಡಿಯಿಟ್ಟು ಏಳು ವರ್ಷಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಿಭಿನ್ನ ರೀತಿಯ ಪ್ರಶಸ್ತಿ ಸಮಾರಂಭವನ್ನು ಆಯೋಜಿಸಿದೆ. 'ಕುಟುಂಬ ಅವಾರ್ಡ್ಸ್ 2011' ಎಂಬ ಕಾನ್ಸೆಪ್ಟ್‌ನೊಂದಿಗೆ ಪ್ರಶಸ್ತಿಗಳನ್ನು ನೀಡುತ್ತಿದೆ.

ಜೀ ವಾಹಿನಿಯ ಕುಟುಂಬ ಪ್ರಶಸ್ತಿಗಳಿವು. ಇಲ್ಲಿನ ಧಾರಾವಾಹಿಗಳಲ್ಲಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಎಲ್ಲರೂ ಕುಟುಂಬದ ಸದಸ್ಯರು. ಈ ಬಾರಿ ಕೌಟುಂಬಿಕ ಸಂಬಂಧಗಳನ್ನೇ ಪ್ರಶಸ್ತಿಗಳಿಗೆ ಹೆಸರಿಸಿರುವುದಾಗಿ ಜೀ ಕನ್ನಡ ತಿಳಿಸಿದೆ.

ಒಟ್ಟು 12 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಅತ್ಯುತ್ತಮ ಅಪ್ಪ-ಅಮ್ಮ, ಅಪ್ಪ-ಮಗ, ಅಮ್ಮ-ಮಗಳು, ಅಜ್ಜಿ-ಮೊಮ್ಮಗಳು, ನಿರೂಪಣೆ, ಕಾಮಿಡಿ ಜೋಡಿ, ಕೇಡಿ-ಜೋಡಿ, ಅತ್ತೆ-ಸೊಸೆ, ಹೆಂಡತಿ-ಪ್ರೇಯಸಿ, ಪತಿ-ಪತ್ನಿ, ಉತ್ತಮ ಕುಟುಂಬ ಹೀಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

ವೀಕ್ಷಕರ ಆಯ್ಕೆ ಆಧರಿಸಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 5ರಂದು ಸಂಜೆ 5.30ಕ್ಕೆ ಬೆಂಗಳೂರು ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಈ ಅದ್ದೂರಿ ಕಾರ್ಯಕ್ರಮಕ್ಕೆ ಹಲವಾರು ಸಿನಿ ತಾರೆಯರೂ ಸಾಕ್ಷಿಯಾಗಲಿದ್ದಾರೆ. (ಒನ್‌ಇಂಡಿಯಾ ಕನ್ನಡ)

User Comments
chakrapani 25 Feb 2012 03:52 pm
ಕನ್ನಡಿಗರ ಅಶೋತ್ತರಗಳಿಗೆ ಇನ್ನು ಹೆಚ್ಹಾಗಿ ಸ್ಪಂದಿಸಲಿ
[ ಅಭಿಪ್ರಾಯ ಬರೆಯಿರಿ ]
   
    Upcoming Matches
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
SL Vs PAK - 1st ODI at R Premadasa Stadium Thu 7th Jun ODI
Follow Oneindia Kannada on Twitter
Oneindia Kannada Facebook fan page
Write Comments on this Article