ಕಿರುತೆರೆಯಲ್ಲಿ ಸೃಜನಶೀಲ ನಿರ್ದೇಶಕ ಎಂದೇ ಗುರುತಿಸಿಕೊಂಡಿರುವ ರವಿಕಿರಣ್ ಈಗ ಮತ್ತೊಂದು ಮೆಗಾ ಧಾರಾವಾಹಿಯೊಂದಿಗೆ ಆಗಮಿಸಿದ್ದಾರೆ. ಧಾರಾವಾಹಿ ಹೆಸರು 'ನನ್ನ ಜೀವ ನೀನು'. ಈಟಿವಿ ಕನ್ನಡದಲ್ಲಿ ಈ ಧಾರಾವಾಹಿ ಫೆ.13ರಿಂದ ಆರಂಭವಾಗಿದೆ.
ಸಂಜೆ 6ಕ್ಕೆ ಪ್ರಸಾರವಾಗುತ್ತಿದ್ದ ಅನುವಾದ ಧಾರಾವಾಹಿ ಜಾಗಕ್ಕೆ ನನ್ನ ಜೀವ ನೀನು ಬದಲಾಗಿದೆ. ನಿರ್ದೇಶನ ಹಾಗೂ ಚಿತ್ರಕಥೆ ಜವಾಬ್ದಾರಿಯನ್ನು ರವಿಕಿರಣ್ ಅವರೇ ಹೊತ್ತಿದ್ದಾರೆ. ಈ ಹಿಂದೆ ರವಿಕಿರಣ್ ಬದುಕು ಎಂಬ ಧಾರಾವಾಹಿ ಮಾಡಿದ್ದರು.
ಇದು ಮೂವರು ಹುಡುಗಿಯರ ಕಥೆ. ಈ ಧಾರಾವಾಹಿಯಲ್ಲಿ ಅನುಶ್ರೀ, ಸೃಷ್ಟಿ, ಮಾನಸ, ಮಧು ಸಾಗರ್ ಹಾಗೂ ಸಿದ್ಧಾರ್ಥ್ ಪ್ರಮುಖ ಕಲಾವಿದರು. ಸೋಮವಾರದಿಂದ ಶುಕ್ರವಾರದವರೆಗೆ ಈ ಧಾರಾವಾಹಿಯನ್ನು ನೋಡಬಹುದು. (ಏಜೆನ್ಸೀಸ್)