ಹೈದರಾಬಾದ್, ಫೆ 13: ಆಂಧ್ರದ ಖಾಸಗಿ ಟಿವಿ ಚಾನೆಲಿನ ನ್ಯೂಸ್ ರೀಡರ್ ಸವ್ಯಸಾಚಿ ಪಟ್ನಾಯಿಕ್ (27) ನೇಣುಬಿಗಿದುಕೊಂಡು ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 10 ತಿಂಗಳ ಚಾನೆಲ್ ಸೇರಿದ್ದ ಸವ್ಯಸಾಚಿ ಕೆಲಸದ ಒತ್ತಡದಿಂದ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.
ವಸಂತಾಲಿಪುರಂನ ದ್ವಾರಕಮಯಿ ನಗರದಲ್ಲಿ ಸಹೋದ್ಯೋಗಿ ಜೀನುಕುಮಾರ್ ಜತೆ ವಾಸವಾಗಿದ್ದರು. ಶನಿವಾರ ಸಂಜೆ 5 ಗಂಟೆಗೆ ರೂಮಿಗೆ ವಾಪಸಾದ ಸವ್ಯಸಾಚಿ ಫ್ಯಾನಿಗೆ ನೇಣು ಹಾಕಿಕೊಂಡು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಒರಿಯಾ ಭಾಷೆಯಲ್ಲಿ ಆತ್ಮಹತ್ಯೆ ಪತ್ರದಲ್ಲಿ ಸವ್ಯಸಾಚಿ, 'ಡಬ್ಬಿಂಗ್ ಸಮಯದಲ್ಲಿ ನಾನು ಚೆನ್ನಾಗಿ ಮಾಡಲಿಲ್ಲ. ಮತ್ತಷ್ಟು ಪ್ರಾಕ್ಟೀಸ್ ಮಾಡುವಂತೆ ಸೂಚಿಸಿದರು. ಖಂಡಿತ ಚೆನ್ನಾಗಿ ಪ್ರಾಕ್ಟೀಸ್ ಮಾಡುವೆ' ಎಂದು ಬರೆದಿದ್ದಾರೆ.
ಕುಟುಂಬದ ಮೂಲಗಳ ಪ್ರಕಾರ ಸವ್ಯಸಾಚಿ ತಂದೆ ಇತ್ತೀಚೆಗೆ ಸಾವಿಗೀಡಾಗಿದ್ದರು. ತಮ್ಮ ಮತ್ತು ತಂಗಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದರು. ಕೌಟುಂಬಿಕ ಸಮಸ್ಯೆಯೂ ಅವರ ಸಾವಿಗೆ ಕಾರಣವಾಗಿರಬಹುದು ಎನ್ನಲಾಗಿದೆ. ಸವ್ಯಸಾಚಿ, ಒರಿಸ್ಸಾದ ಗಂಜಾ ಜಿಲ್ಲೆಯ ಸಿದ್ದೇಶ್ವರ ಮೂಲದವರು.