•  

ಫೆ.12ಕ್ಕೆ ಪಬ್ಲಿಕ್ ಟಿವಿ ಆರಂಭ, ರಂಗಣ್ಣ ಆಹ್ವಾನ

ಗುರುವಾರ, ಫೆಬ್ರವರಿ 2, 2012, 17:43 [IST]
HR Ranganath
ಇದು ಯಾರ ಆಸ್ತಿಯೂ ಅಲ್ಲ, ಇದು ನಿಮ್ಮ ಟಿವಿ ಎಂಬ ಘೋಷವಾಕ್ಯದೊಂದಿಗೆ ಪಬ್ಲಿಕ್ ಟಿವಿ ಗುರುವಾರ (ಜ.26) ರಿಪಬ್ಲಿಕ್ ಡೇ ದಿನ ಪರೀಕ್ಷಾರ್ಥ ಪ್ರಸಾರ ಆರಂಭಿಸಿರುವುದು, ರಾಜಕೀಯ ಧುರೀಣರು, ಸಾಹಿತಿಗಳು, ಸಿನಿಮಾ ತಾರೆಗಳು ಶುಭ ಹಾರೈಸಿರುವುದನ್ನು ನೋಡಿರುತ್ತೀರಿ..

ಜೊತೆಗೆ ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್ ಅವರ ಅರಿಕೆ, ಕಾರ್ಯಕ್ರಮಗಳ ಪ್ರೊಮೋಗಳನ್ನು ನೋಡಿರಬಹುದು. ಆದರೆ, ಪರೀಕ್ಷಾರ್ಥ ಪ್ರಸಾರ ಯಾವಾಗ ಮುಕ್ತಾಯ. ಪೂರ್ಣಪ್ರಮಾಣದ ಸುದ್ದಿ ಪ್ರಸಾರ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಬಗ್ಗೆ ಎಚ್ ಆರ್ ರಂಗನಾಥ್ ಅವರು ಫೇಸ್ ಬುಕ್ ಮೂಲಕ ನೀಡಿರುವ ಆಹ್ವಾನ ಈ ರೀತಿ ಇದೆ:

ನಮಸ್ಕಾರ, ಆತ್ಮೀಯರೇ,

ಜನರಿಗಾಗಿ, ಜನರಿಗೋಸ್ಕರ ಎಂಬ ಘೋಷವಾಕ್ಯದೊಂದಿಗೆ ಪಬ್ಲಿಕ್ ಟಿವಿ ಆರಂಭಗೊಳ್ಳುತ್ತಿದೆ. ಈ ಸಾಹಸದಲ್ಲಿ ಸದಾ ನೀವು ನಮ್ಮೊಂದಿಗೆ ಇದ್ದೀರಿ ಎಂಬ ವಿಶ್ವಾಸ, ನಂಬಿಕೆ ನಮಗಿದೆ. ಆದ್ದರಿಂದಲೇ, ತಾವು ದಯಮಾಡಿ ಫೆ.10, 2012ರಂದು ಸ್ವಲ್ಪ ಪುರುಸೊತ್ತು ಮಾಡಿಕೊಳ್ಳಿ.(ನಂತರ ಫೆ.12ಕ್ಕೆ ಬದಲಾಯಿತು)

ನಮ್ಮ ಕಚೇರಿಗೆ ಬನ್ನಿ, ಕಾರ್ಯಕ್ರಮ, ಟೇಪ್ ಕಟ್ಟಿಂಗ್ ಯಾವುದೂ ಇಲ್ಲ, ಹಾಗಾಗಿ ಬೆಳಿಗ್ಗೆ 10 ರಿಂದ ರಾತ್ರಿ 10 ರ ವರೆಗೆ ಯಾವಾಗಲಾದರೂ 10 ನಿಮಿಷ ಬಂದರೆ ನಿಮ್ಮ ಆಗಮನವೇ ನಮಗೆ ಆನೆಯ ಬಲ ತರುತ್ತದೆ.

ದಯಮಾಡಿ ಮರೆಯಬೇಡಿ-ಫೆ.10, 2012
- ಎಚ್ ಆರ್ ರಂಗನಾಥ್, ಮುಖ್ಯಸ್ಥರು , ಆಡಳಿತ ನಿರ್ದೇಶಕರು, ಪಬ್ಲಿಕ್ ಟಿವಿ

ಪಬ್ಲಿಕ್ ಟಿವಿ ವಿಳಾಸ: Writmen Media Private Limited
TTMC, BMTC building, Yeshwanthpur Circle, Bangalore-560 022
ದೂ: +91 80 2357 4041

User Comments
Dinesh 10 Feb 2012 02:47 pm
Ranganth Ji All the best for New Venture In Digital Media, As off Public we are all with u 2 Support ur New Channel Named Public News.................... God Bless U My Dear Friend Dinesh
Lakshmikanth Mn 08 Feb 2012 05:52 pm
ಆತ್ಮಿಯ ರಂಗನಾಥ್ ರವರೆ ನಿಮ್ಮ ನೇರ ,ನಿಖರ ,ನಿಷ್ಟುರ,ಮಾತುಗಳಿಂದ ನಿಮಗೆ ನಾವು ಮಾರುಹೋಗಿದ್ದೆವು,ನಿಮ್ಮನ್ನು ಕಾಣದೆ ಕಂಗಾಲಗಿದ್ದೆವು,ಈಗ ನಮಗೆ ಭರವಸೆಯ ಬೆಳಕನ್ನು ಕಾಣುವಂತಾಗಿದೆ , ಕನೂನು,ನೀತಿ,ಮಾನ,ಮರ್ಯಾದೆ,ಎಲ್ಲವನ್ನು ಗಾಳಿಗೆ ತೂರಿ, ತಿಪ್ಪೆಯ ಹುಳುಗಳಂತೆ ಬದುಕಿ ವಾಮಮರ್ಗದಲ್ಲಿ ಅಧಿಕಾರ ಹಿಡಿದು,ವಿಧಾನಸೌಧವನ್ನ ಅಪವಿತ್ರ ಗೊಳಿಸುತ್ತ,ಮತದಾರರನ್ನು ವಂಚಿಸುತ್ತಿರುವ, ರಾಜಕಾರಣಿಗಳನ್ನ ನಿಮ್ಮ ಪಬ್ಲಿಕ್ ಟೀ.ವೀ. ಮೂಲಕ ಜಾಲಾಡಿ , ಸಮಾಜದ ವ್ಯವಸ್ತೆಗೊಂದು ಹೊಸಾ ಆಯಾಮ ಕೊಡಿ,ಇದು ನನ್ನ ಪ್ರಾರ್ಥನೆ.ನಮಸ್ಕಾರ ಲಕ್ಷ್ಮಿಕಾಂತ್
Krishna Murthy 03 Feb 2012 02:39 pm
all the best for Sri. Ranganath Public TV. Watch , he will do wonders in Public TV
RAJU 03 Feb 2012 10:39 am
ಪಬ್ಲಿಕ್ ಟಿವಿ ಗೆ ಒಳ್ಳೆಯದಾಗಲಿ . ಯಾವುದೇ ವ್ಯಕ್ತಿ, ವಿಷಯ, ಪಕ್ಷಪಾತ ವಿಲ್ಲದೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲಿ .ಹೇಳಿಕೆಗಳು ಆರಂಭ ಶೂರತ್ವ ಆಗದಿರಲಿ .
[ ಅಭಿಪ್ರಾಯ ಬರೆಯಿರಿ ]
   
    Upcoming Matches
SL Vs PAK - 1st Twenty20 Fri 1st Jun Int2020
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
Follow Oneindia Kannada on Twitter
Oneindia Kannada Facebook fan page
Write Comments on this Article