ಎದ್ದೇಳು ಮಂಜುನಾಥ, ಮಠ ಖ್ಯಾತಿಯ ಗುರುಪ್ರಸಾದ್ ಈಗ ಲಕ್ಷಾಧಿಪತಿ. 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರವನ್ನು ತರಾತುರಿಯಲ್ಲಿ ಮಾಡಿ ಮುಗಿಸದೆ, ಅದನ್ನು ಆದಷ್ಟು ಆಸ್ವಾಧಿಸುತ್ತಾ ಸ್ಪೆಷಲ್ ತಯಾರಿ ನಡೆಸುತ್ತಿರುವ ಗುರುಪ್ರಸಾದ್ ಈಗ ಸಂಭಾಷಣೆಕಾರರಾಗಿಗೂ ಖ್ಯಾತರಾಗಿದ್ದಾರೆ.
ಪುನೀತ್ ಮುಖ್ಯಭೂಮಿಕೆಯಲ್ಲಿದ್ದ 'ಹುಡುಗರು' ಹಾಗೂ ಪ್ರೇಮ್ ಕುಮಾರ್ ಅಭಿನಯದ 'ಮತ್ತೆ ಬನ್ನಿ ಪ್ರೀತ್ಸೋಣ' ಚಿತ್ರಗಳಿಗೆ ಡೈಲಾಗ್ ಬರೆದು ಗೆದ್ದಿದ್ದಾರೆ ಗುರು. ಈಗವರು ಸುವರ್ಣ ವಾಹಿನಿಯ 'ಕನ್ನಡದ ಕೋಟ್ಯಾಧಿಪತಿ' ಗೇಮ್ ಶೋಗೆ ಸಂಭಾಷಣೆ ಬರೆಯಲು ಕೂತಿದ್ದಾರೆ. ಈ ಮೂಲಕ ಕೋಟ್ಯಾಧಿಪತಿಗೆ ಸಂಭಾಷಣೆ ಬರೆದ ಲಕ್ಷಾಧಿಪತಿಯಾಗಿ ಬದಲಾಗಿದ್ದಾರೆ.
ಇದಕ್ಕಾಗಿ ಅವರು ಸುಮಾರು ಇಪ್ಪತ್ತೈದು ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನುತ್ತವೆ ಬಲ್ಲ ಮೂಲಗಳು. ನಿರ್ದೇಶಕನಿಗೂ ಒಂದು ಕಾಲ ಸಂಭಾಷಣೆಕಾರನಿಗೂ ಒಂದು ಕಾಲ ಎಂಬುದನ್ನು ಗುರುಪ್ರಸಾದ್ ನಿರೂಪಿಸಿದ್ದಾರೆ. ಅಂದಹಾಗೆ ಕೋಟ್ಯಾಧಿಪತಿಗೆ ಸಂಭಾಷಣೆ ಹೆಣೆಯಲು ಗುರು ಅವರನ್ನು ಡಿಮ್ಯಾಂಡ್ ಮಾಡಿರುವವರು ಸ್ವತಃ ಪುನೀತ್ ಎಂಬುದು ಮತ್ತೊಂದು ಸ್ಪೆಷಲ್! (ಏಜೆನ್ಸೀಸ್)