ಈಟಿವಿ ಕನ್ನಡ ವಾಹಿನಿಯಲ್ಲಿ ಹೊಸ ದೈನಿಕ ಧಾರಾವಾಹಿ ಹೊಸ ಬಾಳಿಗೆ ನೀ ಜೊತೆಯಾದೆ ಆರಂಭವಾಗಿದೆ. ನವಿರಾದ ಕಥಾಹಂದರವುಳ್ಳ ಈ ಧಾರಾವಾಹಿ ನಿರ್ದೇಶಕರು ಶ್ರೀನಗರ ಚಂದ್ರು. ಸೋಮವಾರದಿಂದ ಶುಕ್ರವಾರದ ತನಕ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.
ಬಹುತೇಕ ಹೊಸಬರೇ ಇರುವ ಈ ಧಾರಾವಾಹಿಯಲ್ಲಿ ಹಲವು ವಿಶೇಷಗಳಿಂದ ಕೂಡಿದೆ. ಸ್ವಾತಿ ಮತ್ತು ಪ್ರಮೋದ್ ಧಾರಾವಾಹಿಯ ಪ್ರಮುಖ ಆಕರ್ಷಣೆ. ವಿಜಯಕಾಶಿ, ಕಾಮಿನಿಧರನ್, ವಾಣಿಶ್ರೀ, ಪ್ರಕಾಶ್ ಕುಮಾರ್ ಮತ್ತು ಲಕ್ಷ್ಮಿ ಮುಂತಾದ ಕಲಾವಿದರು ಬಳಗ ಧಾರಾವಾಹಿಯಲ್ಲಿದೆ.
ಈ ಹಿಂದೆ ಗುಪ್ತಗಾಮಿನಿ ಯಂಥಹ ಮನೋಜ್ಞ ಧಾರಾವಾಹಿ ನಿರ್ಮಿಸಿದ್ದ ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ನಿರ್ಮಿಸಿರುವ ಸದಭಿರುಚಿಯ ಧಾರಾವಾಹಿ ಇದು. ಹೊಸ ಧಾರಾವಾಹಿಗಳಿಗಾಗಿ ಚಡಪಡಿಸುತ್ತಿರುವ ವೀಕ್ಷಕರಿಗೆ ಈ ಹೊಸ ಧಾರಾವಾಹಿ ಇಷ್ಟವಾಗಬಹುದು. (ಒನ್‌ಇಂಡಿಯಾ ಕನ್ನಡ)