Englishবাংলাગુજરાતીहिन्दीമലയാളംதமிழ்తెలుగు

ಸುವರ್ಣ ವಾಹಿನಿಯಲ್ಲಿ ವಿಷ್ಣು ಕೊನೆಯ ಚಿತ್ರ ಆಪ್ತರಕ್ಷಕ

Posted by:
Published: Friday, April 29, 2011, 11:39 [IST]
 

ಸಾಹಸಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅಭಿನಯದ ಕೊನೆಯ ಚಿತ್ರ 'ಆಪ್ತರಕ್ಷಕ' ಚಿತ್ರ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರ ಭಾಗ್ಯ ಕಾಣುತ್ತಿದೆ. ಮೇ.1ರಂದು ಸುವರ್ಣ ವಾಹಿನಿಯಲ್ಲಿ ಸಂಜೆ 6ಗಂಟೆಗೆ ಪ್ರಸಾರವಾಗಲಿದೆ. ಬಾಕ್ಸಾಫೀಸಲ್ಲಿ ಭರ್ಜರಿ ಯಶಸ್ಸು ದಾಖಲಿಸಿದ ಕನ್ನಡದ ಕುಲ ತಿಲಕ ವಿಷ್ಣುವರ್ಧನ್ ಅವರ ಕೊನೆಯ ಚಿತ್ರವನ್ನು ಮನೆಮಂದಿಯಲ್ಲಾ ಕುಳಿತು ಕಣ್ಣಾರೆ ಸವಿಯಲು ಅಭಿಮಾನಿಗಳಿಗೆ ಸುವರ್ಣಾವಕಾಶ.

ವಿಷ್ಣುವರ್ಧನ್ ಅಭಿನಯದ ಈ ಚಿತ್ರ ಅವರ ಎಷ್ಟೋ ಚಿತ್ರಗಳಲ್ಲಿ ಮರೆಯದ ಮಾಣಿಕ್ಯ ವಿದ್ದಂತೆ. 2010ರಲ್ಲಿ ತೆರೆಕಂಡ ಈ ಚಿತ್ರ ವಿಷ್ಣುವರ್ಧನ್ ಅಭಿನಯದ 200ನೇ ಚಿತ್ರ. ಸಂಧ್ಯಾ, ವಿಮಲಾ ರಾಮನ್, ಅವಿನಾಶ್, ಶ್ರೀನಿವಾಸ ಮೂರ್ತಿ, ಭಾವನಾ, ಲಕ್ಷ್ಮಿ ಗೋಪಾಲಸ್ವಾಮಿ ಹಾಗೂ ಕೋಮಲ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ಈ ಚಿತ್ರ ತೆರೆಕಂಡಾಗ ವಿಷ್ಣು ಅಭಿಮಾನಿಗಳು ಅವರ ಕಟೌಟಿಗೆ ಕ್ಷೀರಾಭಿಷೇಕ ಮಾಡಿ ಸಂಭ್ರಮಿಸಿದ್ದರು. ಎಲ್ಲ ನಿರೀಕ್ಷೆಯಂತೆ ಈ ಚಿತ್ರ 50 ದಿನಗಳ ಪ್ರದರ್ಶನದಲ್ಲಿ ರು.25 ಕೋಟಿ ಬಾಚುವ ಮೂಲಕ ಹೊಸ ದಾಖಲೆ ಸೃಷ್ಟಿಸಿತು. ಬಾಕ್ಸಾಫೀಸಲ್ಲಿ ಇನ್ನೂ ಸದ್ದು ಮಾಡುತ್ತಿರುವ ಈ ಚಿತ್ರ ಇದುವೆರೆಗೂ ರು.40 ಕೋಟಿಗೂ ಅಧಿಕ ಹಣ ಬಾಚಿ ದಾಖಲೆಗಳ ಮೇಲೆ ದಾಖಲೆ ಮಾಡುತ್ತಿದೆ.

English summary
Kannada blockbuster film Aptharakshaka to be aired on Suvarna TV on May 1st at 6 pm. Aaptharakshaka is a Kannada film released in 2010 starring the Indian Super Star Dr.Vishnuvardhan in his 200th Kannada film. The film is written and directed by P. Vasu and is a sequel to the 2004 blockbuster film Apthamitra .
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter
Coupons