twitter
    For Quick Alerts
    ALLOW NOTIFICATIONS  
    For Daily Alerts

    ಪ್ರೇಕ್ಷಕನ ತಾಳ್ಮೆ ಪರೀಕ್ಷಿಸುವ ’ವೀರ ಪುಲಿಕೇಶಿ’ ಚಿತ್ರ

    |

    ಸರ್ಜಾ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದೆ. ಭರತ್ ಸರ್ಜಾ ಪುಲಿಕೇಶಿ ಚಿತ್ರದಲ್ಲಿ 'ಪುಲಿ'ಯಾಗಿ ಮೆರೆದು ಬಣ್ಣದ ಲೋಕಿಗೆ ಅಡಿಯಿಟ್ಟಿದ್ದಾರೆ. ಆದರೆ ಚಿತ್ರದ ಟೈಟಲ್ ಕಾರ್ಡಿನಲ್ಲಿ ಭರತ್ ಎಂದಷ್ಟೇ ಹಾಕಿಸಿಕೊಂಡಿದ್ದಾರೆ.

    ರಾಜ್ಯದ ಇತಿಹಾಸದ ಪುಟವನ್ನು ತಿರುಚಿದಾಗ ಕನ್ನಡನಾಡು ಕಂಡ ಹೆಮ್ಮೆಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿಗೂ ಈ ಚಿತ್ರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಚಿತ್ರದಲ್ಲಿ ನಾಯಕನ ಹೆಸರು ಪುಲಿ ಆಲಿಯಾಸ್ ಪುಲಿಕೇಶಿ ಅಷ್ಟೇ..

    ಹೊಸತನವಿಲ್ಲದ, ಹಳೇ ಗಾಂಧಿನಗರದ ಫಾರ್ಮುಲದಿಂದ ಹೊರಬರದ ನಿರ್ದೇಶಕರ ಅನುಭದ ಕೊರತೆ ಚಿತ್ರದಲ್ಲಿನ ನೆಗೆಟಿವ್ ಹೈಲೈಟ್ಸ್. ಚಿತ್ರದಲ್ಲಿ ಪ್ರೇಕ್ಷಕನಿಗೆ ನಿರಾಳ ಎಂದನಿಸುವುದು ರವಿಶಂಕರ್ ಮತ್ತು ರಾಜು ತಾಳಿಕೋಟೆ ಪರದೆಯಲ್ಲಿ ಇರುವ ತನಕ ಮಾತ್ರ ಎಂದರೆ ನಿರ್ದೇಶಕರು ಬೇಸರಿಸಿಕೊಳ್ಳಬಾರದು. [ವೀರ ಪುಲಿಕೇಶಿ' ಚಿತ್ರ ಫೋಟೋ ಗ್ಯಾಲರಿ]

    Rating:
    2.5/5

    ತಾರಾಗಣದಲ್ಲಿ : ಭರತ್ ಸರ್ಜಾ, ರೇಖಾ, ದೇವರಾಜ್, ರವಿಶಂಕರ್, ಅವಿನಾಶ್, ಪದ್ಮಾ ವಾಸಂತಿ, ಹೊನ್ನವಳ್ಳಿ ಕೃಷ್ಣ , ರಾಜು ತಾಳಿಕೋಟೆ
    ನಿರ್ದೇಶನ: ಮಂಜುನಾಥ್ ಬಾಬು (ಮಾ.ಬು)
    ನಿರ್ಮಾಪಕರು: ಗಿರೀಶ್, ವೀರೇಶ್
    ಸಂಗೀತ: ರಾಜೇಶ್ ರಾಮನಾಥ್
    ಸಾಹಸ: ಕೌರವ ವೆಂಕಟೇಶ್
    ಛಾಯಾಗ್ರಹಣ: ಬಿ ಗೌಡ

    ವೀರಪ್ಪನ್ ಮತ್ತು ಲೈವ್ ಬ್ಯಾಂಡ್ ಹೋರಾಟ. ಮುಂದೆ ಓದಿ..

    ಚಿತ್ರದ ಕಥೆ ಏನಪ್ಪಾಂದ್ರೆ

    ಚಿತ್ರದ ಕಥೆ ಏನಪ್ಪಾಂದ್ರೆ

    ದಂತಚೋರ ವೀರಪ್ಪನ್ ಸಹಚರರ ಗುಂಡಿಗೆ ಬಲಿಯಾಗುವ ದಕ್ಷ ಪೊಲೀಸ್ ಅಧಿಕಾರಿಯ ಮಗನೇ ಪುಲಿಕೇಶಿ (ಭರತ್). ಎಷ್ಟಾದರೂ ಪೊಲೀಸ್ ಅಧಿಕಾರಿಯ ರಕ್ತವಲ್ಲವೇ? ತಂದೆಯಂತೆ ಪುಲಿಕೇಶಿಗೂ ಅನ್ಯಾಯ, ಅಕ್ರಮ ಎಸಗುವವರನ್ನು ಮಟ್ಟಹಾಕುವ ಮಹದಾಸೆ. ಎಸಿಪಿಯಾಗಿ ಮೈಸೂರಿನಿಂದ ಬೆಂಗಳೂರಿನ ಉಪ್ಪಾರಪೇಟೆ ಠಾಣೆಗೆ ವರ್ಗಾವಣೆಯಾಗುತ್ತಾನೆ.

    ಲೈವ್ ಬ್ಯಾಂಡ್ ಹೋರಾಟ

    ಲೈವ್ ಬ್ಯಾಂಡ್ ಹೋರಾಟ

    ಇತ್ತ ತನ್ನಪ್ಪನ ಕೊನೆಯಾಸೆಯನ್ನು ಪೂರೈಸಲು ನಗರದ ಮೆಜಿಸ್ಟಿಕ್ ನಲ್ಲಿ (ಅದೂ ಕೆ ಜೆ ರಸ್ತೆಯಲ್ಲಿ) ಲೈವ್ ಬ್ಯಾಂಡ್ ತೆರೆಯಲು ವಿಲನ್ (ರವಿಶಂಕರ್) ಯತ್ನಿಸುತ್ತಾನೆ. ಇವನ ಆಸೆಯನ್ನು ಮಣ್ಣುಪಾಲು ಮಾಡಿ, ಅವನನ್ನು ಮಟ್ಟ ಹಾಕವುದೇ ನಾಯಕನ ಗುರಿ. ನಾಯಕ ಗುರಿಯನ್ನು ತಲುಪುತ್ತಾನೋ ಅಥವಾ ಇಲ್ಲವೋ ಯಾರಾದರೂ ಏನೂ ತಲೆಕೆಡಿಸಿ ಕೊಳ್ಳದೇ ಅಂದಾಜಿಸಿಕೊಳ್ಳಬಹುದು.

    ಇದು ಪೌರಾಣಿಕ ಚಿತ್ರವಲ್ಲ

    ಇದು ಪೌರಾಣಿಕ ಚಿತ್ರವಲ್ಲ

    ಇಮ್ಮಡಿ ಪುಲಿಕೇಶಿಗೂ, ಈ ಪುಲಿಕೇಶಿಗೂ ಸಂಬಂಧವಿಲ್ಲ. ಆದರೆ ದಶಕಗಳ ಕೆಳಗೆ ಬಿಡುಗಡೆಯಾದ ವರನಟನ 'ಇಮ್ಮಡಿ ಪುಲಿಕೇಶಿ'ಚಿತ್ರದ ಕೆಲವೊಂದು ಉಲ್ಲೇಖನವನ್ನು ಚಿತ್ರದಲ್ಲಿ ನೀಡಲಾಗಿದೆ. ಈ ಚಿತ್ರವನ್ನು ಕರ್ತವ್ಯ ನಿರ್ವಹಿಸುತ್ತಿದ್ದಾಗ ಮಡಿದ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆಗೆ ಅರ್ಪಿಸುತ್ತಿದ್ದೇವೆ ಎನ್ನುವ ಒಕ್ಕಣೆಯೂ ಇದೆ, ಹಾಗೇ ಊಟವನ್ನು ವೇಸ್ಟ್ ಮಾಡಬೇಡಿ ಎನ್ನುವ ಸಂದೇಶವನ್ನೂ ತೋರಿಸಲಾಗಿದೆ .

    ನಾಯಕಿ ಆಟಕ್ಕುಂಟು ಲೆಕ್ಕಕಿಲ್ಲ

    ನಾಯಕಿ ಆಟಕ್ಕುಂಟು ಲೆಕ್ಕಕಿಲ್ಲ

    ಇನ್ನು ನಾಯಕಿ ಜಿಂಕೆಮರಿ ರೇಖಾ ಆಟಕ್ಕುಂಟು ಲೆಕ್ಕಕ್ಕಿಲ್ಲ. ಮಾಮ..ಮಾಮ. ಎಂದು ನಾಯಕನ ಹಿಂದೆ ಬೀಳುವುದಕ್ಕಷ್ಟೇ ಸೀಮಿತ. ನಾಯಕ ಭರತ್ ನಟನೆಯಲ್ಲಿ ಇನ್ನೂ ಪಳಗಬೇಕು. ಚಿತ್ರದಲ್ಲಿ ನಟನೆಯ ವಿಚಾರದಲ್ಲಿ ಸೂಪರ್ ಅಭಿನಯ ಎಂದರೆ ರವಿಶಂಕರ್, ರಾಜು ತಾಳಿಕೋಟೆ. ತಾಯಿಯಾಗಿ ಪದ್ಮಾವಾಸಂತಿ, ಪೇದೆಯಾಗಿ ಹೊನ್ನವಳ್ಳಿ ಕೃಷ್ಣ ನಟನೆ ಓಕೆ..

    ಕೊನೆಯದಾಗಿ ಹೇಳುವುದಾದರೆ..

    ಕೊನೆಯದಾಗಿ ಹೇಳುವುದಾದರೆ..

    ಪ್ರೇಕ್ಷಕ ಅತಿಸುಲಭವಾಗಿ ನಿರೀಕ್ಷಿಸಿಸಬಲ್ಲ ಚಿತ್ರಕಥೆಯನ್ನು ನಿರ್ದೇಶಕರು ಅದೂ 143 ನಿಮಿಷ ತೋರಿಸಿರುವುದು ತಾಳ್ಮೆಯನ್ನು ಪರೀಕ್ಷಿಸದೇ ಇರದು. ದೇಹದಾರ್ಢ್ಯಕ್ಕೆ ಕೊಟ್ಟ ಒತ್ತನ್ನು ಭರತ್ ನಟನೆಗೂ ಕೊಡಬೇಕು ಎನ್ನುವುದು ಪ್ರೇಕ್ಷಕರ ಕಡೆಯಿಂದ ಬರುತ್ತಿದ್ದ suggestion. ಹೊಸಬರಿಂದ ಹೊಸತನ ಬಯಸುತ್ತಿರುವ ಕನ್ನಡದ ಪ್ರೇಕ್ಷಕರಿಗೆ ಮತ್ತದೇ ಹಳೇ ಫಾರ್ಮುಲಾದ ಕಥೆ ಕೊಡಬೇಡಿ ಎನ್ನುವುದೊಂದು ಸಲಹೆ.

    English summary
    Kannada movie Veera Pulikeshi review. Bharat Sarja, Rekha, Ravishankar, Raju Talikote in the lead role. Manjunath Babu has directed this movie.
    Sunday, April 27, 2014, 13:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X