twitter
    For Quick Alerts
    ALLOW NOTIFICATIONS  
    For Daily Alerts

    ಶ್ರಾವಣಿ ಸುಬ್ರಮಣ್ಯ ವಿಮರ್ಶೆ:ನಮ್ ಗಣೇಶ ಗೆದ್ ಬಿಟ್ಟ

    By ನೀಲಾವರ ಸತೀಶ್
    |

    Rating:
    4.0/5
    ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡದೇ ಕೆಲವು ಸಮಯಗಳಾಗಿದ್ದವು. ಬರೀ ನಗೆಯಲ್ಲೇ ಯುವ ಜನತೆಯನ್ನು ಆಕರ್ಷಿಸುತ್ತಿದ್ದ ಗಣೇಶ್, ಕಥೆಯನ್ನು ಆಯ್ಕೆ ಮಾಡುವಲ್ಲಿ ಎಡವುತ್ತಿದ್ದಾರೆನ್ನುವ ಮಾತೂ ಅಭಿಮಾನಿ ವಲಯದಲ್ಲಿ ಕೇಳಿ ಬರುತ್ತಿದ್ದವು.

    ನನ್ನ ಚಿತ್ರ ಸೋತಿರಬಹುದು, ಆದರೆ ನಾನು ಸೋತಿಲ್ಲ ಎನ್ನುವ ಮಾತನ್ನು ಗಣೇಶ್ ರಿಪೀಟ್ ಮಾಡುತ್ತಲೇ ಇದ್ದರು. ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿದ್ದ ಗಣೇಶ್ ಅವರ ಈ ಹಿಂದಿನ ಎರಡು ಚಿತ್ರಗಳು (ಮುಂಗಾರು ಮಳೆ, ಮಳೆಯಲಿ ಜೊತೆಯಲಿ) ಭರ್ಜರಿ ಸದ್ದು ಮಾಡಿದ್ದವು.

    2013ರಲ್ಲಿ ಗಣೇಶ್ 'ಶ್ರಾವಣಿ ಸುಬ್ರಮಣ್ಯ' ಚಿತ್ರದ ಮೂಲಕ ಮೂರನೇ ಬಾರಿಗೆ ಬೆಳ್ಳಿತೆರೆಯ ಮೇಲೆ ಗಣೇಶ್ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಮಂಜು ಸ್ವರಾಜ್ ನಿರ್ದೇಶನದ ಈ ಚಿತ್ರ ಇಂದು ಶುಕ್ರವಾರ (ಡಿ27) ರಾಜ್ಯಾದ್ಯಂತ ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

    ಶ್ರಾವಣಿ ಸುಬ್ರಮಣ್ಯ ಚಿತ್ರದ ಮೂಲಕ ಗಣೇಶ್, ಅಮೂಲ್ಯ ಜೋಡಿ ಮತ್ತೆ ಒಂದಾಗಿದ್ದಾರೆ. ಇವರಿಬ್ಬರ ಚೆಲುವಿನ ಚಿತ್ತಾರ ಚಿತ್ರ ಯಾವ ಪಾಟಿ ಹಿಟ್ ಆಗಿತ್ತು ಎನ್ನುವುದನ್ನು ಮತ್ತೆ ಹೇಳ ಬೇಕಾಗಿಲ್ಲ.

    ಬ್ಯಾನರ್: ಸುರೇಶ್ ಆರ್ಟ್ಸ್
    ನಿರ್ಮಾಪಕರು : ಕೆ ಎ ಸುರೇಶ್
    ರಚನೆ, ನಿರ್ದೇಶನ: ಮಂಜು ಸ್ವರಾಜ್
    ಸಂಗೀತ : ವಿ ಹರಿಕೃಷ್ಣ
    ಸಾಹಸ: ಡಿಫರೆಂಟ್ ಡ್ಯಾನಿ
    ಪ್ರಮುಖ ತಾರಾಗಣದಲ್ಲಿ : ಗಣೇಶ್, ಅಮೂಲ್ಯ, ಅನಂತ್ ನಾಗ್, ತಾರಾ, ಸಾಧು ಕೋಕಿಲಾ

    ಚಿತ್ರದ ಕಥೆಯ ಬಗ್ಗೆ, ಮೈನಸ್ ಪಾಯಿಂಟ್ ಮತ್ತು ಇತರ ವಿವರಗಳಿಗೆ ಸ್ಲೈಡ್ ನೋಡಿ...

    ಶ್ರಾವಣಿ ಸುಬ್ರಮಣ್ಯ

    ಶ್ರಾವಣಿ ಸುಬ್ರಮಣ್ಯ

    ಚಿತ್ರದ ಕಥೆಯ ಬಗ್ಗೆ ಚುಟುಕಾಗಿ ಹೇಳುವುದಾದರೆ, ಲವ್ ಫೈಲ್ಯುರ್ ಆಗಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬರುವ ನಾಯಕಿ (ಶ್ರಾವಣಿ) accidentally ನಾಯಕನನ್ನು (ಸುಬ್ರಮಣ್ಯ) ಭೇಟಿ ಮಾಡುತ್ತಾಳೆ. ಆತ್ಮಹತ್ಯೆ ಮಹಾಪಾಪ ಎಂದು ನಾಯಕ, ನಾಯಕಿಗೆ ಜೀವನದ ಮಹತ್ವವನ್ನು ತಿಳಿಸಿ ತನ್ನ ಜೊತೆಗೆ ಕರೆದು ಕೊಂಡು ಬರುತ್ತಾನೆ. ಇನ್ನೂ ಇದೆ..

    ಚಿತ್ರದ ಕಥೆ

    ಚಿತ್ರದ ಕಥೆ

    ನಾಯಕಿ ಮತ್ತು ನಾಯಕ ಕೆಲವು ತಿಂಗಳುಗಳ ಕಾಲ ಜೊತೆಯಾಗಿದ್ದರೂ, ತಮ್ಮಲ್ಲಿರುವ ಪ್ರೀತಿಯನ್ನು ಒಬ್ಬರಿಗೊಬ್ಬರಿಗೆ ತಿಳಿಸುವಲ್ಲಿ ವಿಫಲರಾಗುತ್ತಾರೆ. ಇತ್ತ ನಾಯಕಿಯ ಕುಟುಂಬ ನಾಯಕನನ್ನು ಮಟ್ಟ ಹಾಕಲು ನಿರ್ಧರಿಸಿದರೆ, ಆತ್ಮಹತ್ಯೆಗೆ ಕಾರಣವಾಗಿದ್ದ ನಾಯಕಿಯ ಹಳೇ ಲವರ್ ನಾಯಕಿಯನ್ನು ಮಟ್ಟ ಹಾಕಲು ನಿರ್ಧರಿಸುತ್ತಾನೆ. ಚಿತ್ರ ಮುಂದೆ ಎಲ್ಲಿ ಸಾಗುತ್ತದೆ, ತೆರೆ ಮೇಲೆ ನೀಡಿ...

    ಮಂಜು ಸ್ವರಾಜ್

    ಮಂಜು ಸ್ವರಾಜ್

    ಚಿತ್ರದ ನಿರ್ದೇಶಕರ ಬಗ್ಗೆ ಎರಡು ಮಾತು ಹೇಳಲೇ ಬೇಕು. ನಾಯಕ ಮತ್ತು ನಾಯಕಿಯ ಪಾತ್ರದ ಜೊತೆ ಇತರ ಪೋಷಕ ಪಾತ್ರವನ್ನು ಮಂಜು ಸ್ವರಾಜ್ ತೆರೆಗೆ ತಂದ ರೀತಿಗೆ ಮೆಚ್ಚಲೇ ಬೇಕು. ಚಿತ್ರಕಥೆಗೆ ಪೂರಕ ಎನ್ನುವಂತೆ ಕಲಾವಿದರನ್ನು ಬಳಸಿಕೊಂಡು ಎಲ್ಲೂ ಹಳಿ ತಪ್ಪದಂತೆ ಹಾಸ್ಯ, ರೊಮ್ಯಾನ್ಸ್, ಸೆಂಟಿಮೆಂಟ್ ಅನ್ನು ಹದವಾಗಿ ಬಳಸಿ ತೆರೆ ಮೇಲೆ ತರುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

    ಗಣೇಶ್, ಅಮೂಲ್ಯ ಮತ್ತು ಸಹ ಕಲಾವಿದರು

    ಗಣೇಶ್, ಅಮೂಲ್ಯ ಮತ್ತು ಸಹ ಕಲಾವಿದರು

    ಅನಂತ್ ನಾಗ್ ಮತ್ತು ತಾರಾ ಜೋಡಿಯ ಪ್ರಬುದ್ದ ಅಭಿನಯಕ್ಕೆ ಪ್ರೇಕ್ಷಕ ಉಘೇ.. ಉಘೇ.. ಅನ್ನುತ್ತಾನೆ, hats off to you both. ಆದರೆ ಎಲ್ಲರನ್ನೂ ಮೀರಿಸುವಂತೆ ಕನ್ನಡ ಚಿತ್ರರಂಗ ಕಂಡ ಬಹುಮುಖ ಪ್ರತಿಭೆ ಸಾಧು ಕೋಕಿಲಾ ನಟನೆ, ಹಾಸ್ಯದ ಟೈಮಿಂಗ್ಸಿಗೆ ಪ್ರೇಕ್ಷಕ ವಾರೇ..ವಾ.. ಅನ್ನುತ್ತಾನೆ. ಗಣೇಶ್ ಮತ್ತು ಅಮೂಲ್ಯ ನಟನೆಯ ಬಗ್ಗೆ ಕೆಮ್ಮಂಗಿಲ್ಲ.

    ಇತರ ವಿಭಾಗ

    ಇತರ ವಿಭಾಗ

    ಹರಿಕೃಷ್ಣ ಸಂಗೀತಕ್ಕೆ ಚಿತ್ರ ಬಿಡುಗಡೆಗೆ ಮುನ್ನವೇ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಚಿತ್ರದ ಸಂಕಲನ, ಸಿನಿಮಾಟೊಗ್ರಾಫಿ, ಸಾಹಸ ಸನ್ನಿವೇಶಗಳು, ಸಂಭಾಷಣೆ ಚಿತ್ರಕ್ಕೆ ಪೂರಕವಾಗಿದೆ.

    ಲಾಸ್ಟ್ ಬಟ್ ನಾಟ್ ಲೀಸ್ಟ್

    ಲಾಸ್ಟ್ ಬಟ್ ನಾಟ್ ಲೀಸ್ಟ್

    ಚಿತ್ರದ ಆರಂಭ ಮತ್ತು ಕ್ಲೈಮ್ಯಾಕ್ಸ್ ಸನ್ನಿವೇಶಕ್ಕೆ ನಿರ್ದೇಶಕರು ಸ್ವಲ್ಪ ವೇಗ ನೀಡ ಬಹುದಾಗಿತ್ತು ಅಥವಾ ಕತ್ತರಿ ಪ್ರಯೋಗಿಸ ಬಹುದಾಗಿತ್ತು. ಗಣೇಶ್ ಒಬ್ಬ ಪ್ರಬುದ್ದ ನಟನಾಗಿದ್ದರೂ ಸಾಹಸ ದೃಶ್ಯಗಳಲ್ಲಿ ಇನ್ನೂ ಸ್ವಲ್ಪ ಪಳಗ ಬೇಕು ಎನ್ನುವುದೊಂದು ನಮ್ಮ ಕಡೆಯಿಂದ ಒಂದು ಸಲಹೆ. ನಮ್ಮ ವಿಮರ್ಶಕರ ಪ್ರಕಾರ ನಾವು ಚಿತ್ರಕ್ಕೆ ಕೊಡುವ ರೇಟಿಂಗ್ 4/5.

    English summary
    Golden star Ganesh starer Shravani Subramanya movie review. Ganesh is paired opposite actress Amoolya and the movie directed by Manju Swaraj has got released today (Dec 27, 2013)
    Friday, December 27, 2013, 23:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X