twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರ ವಿಮರ್ಶೆ: ಹಾರುವ ಸಿಖ್ ಮಿಲ್ಕಾಗೆ ಜೈಕಾರ ಹಾಕಿ

    By Mahesh
    |

    ಹಾರುವ ಸಿಖ್ ಎಂದೇ ಖ್ಯಾತಿ ಗಳಿಸಿರುವ ಜೀವಂತ ದಂತಕಥೆ ಮಿಲ್ಕಾ ಸಿಂಗ್ ಅವರ ಜೀವನ ಓಟದ ಕಥೆ ಬಿಚ್ಚಿಡುವ 'ಭಾಗ್ ಮಿಲ್ಕಾ ಭಾಗ್' ಚಿತ್ರವನ್ನು ಮಿಸ್ ಮಾಡಿಕೊಂಡರೆ ನಿಮಗೆ ನಷ್ಟ. ಪಾನ್ ಸಿಂಗ್ ತೋಮಾರ್ ಚಿತ್ರದ ನಂತರ ಅಥ್ಲೀಟ್ ಬಗ್ಗೆ ಬಂದಿರುವ ಅತ್ಯುತ್ತಮ ಹಿಂದಿ ಚಿತ್ರ ಇದು. 3 ಗಂಟೆ 7 ನಿಮಿಷ ಒಳ್ಳೆ ವಾತಾವರಣದಲ್ಲಿ ಕಳೆಯಲು ಇಚ್ಛೆ ಇದ್ದರೆ ತಕ್ಷಣವೇ ಭಾಗ್ ಮಿಲ್ಕಾ ಭಾಗ್ ಎಂದು ಅರಚುತ್ತಾ ಚಿತ್ರಮಂದಿರಕ್ಕೆ ಧಾವಿಸಿ ಇದು ಕೇವಲ ಚಲನಚಿತ್ರವಲ್ಲ ಜೀವನ ಚಿತ್ರ ಭಾರತದ ಹೆಮ್ಮೆಯ ಚಿತ್ರ

    ಚಿತ್ರದ ಮೊದಲರ್ಧದಲ್ಲಿ ಮಿಲ್ಕಾ ಸಿಂಗ್ ಜೀವನ ಕುರಿತ ಸಣ್ಣ ಪುಟ್ಟ ವಿಷಯಗಳನ್ನು ಪ್ರೇಕ್ಷಕರ ಮನಸ್ಸಿಗೆ ಮುಟ್ಟಿಸಲು ನಿರ್ದೇಶಕ ಶ್ರಮಪಟ್ಟಿದ್ದಾರೆ. ಇನ್ನೊಂದು ರೀತಿಯಲ್ಲಿ ಹೇಳಬೇಕಾದರೆ ನಿರ್ದೇಶಕರಿಗೆ ಮೊದಲರ್ಧದ ನಿರೂಪಣೆ ಸವಾಲಾಗಿದ್ದು ಪ್ರೇಕ್ಷಕರನ್ನು ಓಟದ ಮೂಡ್ ಗೆ ತಂದು ನಿಲ್ಲಿಸುವಲ್ಲಿ ಕೊನೆಗೂ ಯಶ ಕಂಡಿದ್ದಾರೆ.

    ಆದರೂ, ಮೊದಲರ್ಧದ ಕೆಲವು ಭಾಗಗಳಿಗೆ ಕತ್ತರಿ ಹಾಕಿದ್ದಾರೆ ಚಿತ್ರ ಇನ್ನಷ್ಟು ಟ್ರಿಮ್ ಆಗಿ ಸುಂದರವಾಗುತ್ತಿತ್ತು. ರಂಗ್ ದೇ ಬಸಂತಿ ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ಮೆಹ್ರಾ ಅವರು ಮತ್ತೊಮ್ಮೆ ಇಡೀ ದೇಶವೇ ತಮ್ಮ ಚಿತ್ರದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಪ್ರಸೂನ್ ಜೋಶಿ ಅವರ ಸ್ಕ್ರಿಪ್ಟ್, ಪರಕಾಯ ಪ್ರವೇಶ ಮಾಡಿರುವ ನಟ, ನಿರ್ದೇಶಕ ಫರ್ಹಾನ್ ಅಖ್ತರ್, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಚಿತ್ರದ ಕಥೆ ಏನು? ಚಿತ್ರದಲ್ಲಿ ಇನ್ನೇನು ವಿಶೇಷ ಅಂಶಗಳಿದೆ ಮುಂದೆ ಓದಿ...

    Rating:
    4.5/5

    ಹಾರುವ್ ಶಿಖ್ ಚಿತ್ರ ಕಥೆ

    ಹಾರುವ್ ಶಿಖ್ ಚಿತ್ರ ಕಥೆ

    ಕಥೆ ಎಲ್ಲರಿಗೂ ಗೊತ್ತೇ ಇದೆ: ಪಾಕಿಸ್ತಾನದ ಮುಲ್ತಾನ್ ನ ನೆಲದಲ್ಲಿ ಬೆಳೆದ ಸಿಖ್ ಹುಡುಗ ವಿಶ್ವಖ್ಯಾತಿ ಅಥ್ಲೀಟ್ ಆಗಿ ಬೆಳೆಯುವ ಕಹೆ ನೊಬ್ಬ ಭಾರತ -ಪಾಕಿಸ್ತಾನ ವಿಭಜನೆಗೊಂಡಾಗ ದೆಹಲಿಗೆ ಬರುತ್ತಾನೆ ಆದರೆ, ಕುಟುಂಬ ಅಲ್ಲೇ ಉಳಿಯುತ್ತದೆ.

    ನಿತ್ಯ ಜೀವನಕ್ಕೆ ಕಷ್ಟಪಡುವ ಸ್ಥಿತಿಯಲ್ಲಿ ಬೆಳೆಯುವ ಮಿಲ್ಕಾ ಗೆ ಒಂದು ಜೊತೆ ಶೂ ಕೊಳ್ಳಲು ಕಷ್ಟವಾಗಿರುತ್ತದೆ. ಆದರೆ, ಕನಸು, ದೃಢ ಸಂಕಲ್ಪ ಜೀವನದಲ್ಲಿ ಮುಂದೆ ಬರುವಂತೆ ಮಾಡುತ್ತದೆ. ದೆಹಲಿಯಲಿ ಬಿರಾ ಜೊತೆ ಪ್ರೇಮಾಂಕುರವಾಗುತ್ತದೆ. ನಿರಾಶ್ರ್ರಿತರ ಕಾಲೋನಿಯ ಯುವತಿಯ ಪ್ರೇಮ ಆತನನ್ನು ಆರ್ಮಿ ಸೇರುವಂತೆ ಮಾಡುತ್ತದೆ. ಮುಂದೆ ಓದಿ...

    ಹಾರುವ್ ಸಿಖ್ ಕಥೆ

    ಹಾರುವ್ ಸಿಖ್ ಕಥೆ

    ಅಲ್ಲಿಂದ ಶುರುವಾದ ಓಟ ಆತನನ್ನು 1956ರ ಮೆಲ್ಬೋರ್ನ್ ಒಲಿಂಪಿಕ್ಸ್ ರೇಸ್ ಗೆ ತಂದು ನಿಲ್ಲಿಸುತ್ತದೆ. ಆದರೆ, ಓಟ ಎಂದರೆ ಸುಲಭದ ಕೆಲಸವಲ್ಲ ಎಂದು ಮಿಲ್ಕಾಗೆ ಅರಿವಾಗುತ್ತದೆ. ಛಲ ಬಿಡದೆ 400 ಮೀ ಓಟದಲ್ಲಿ ವಿಕ್ರಮ ಸಾಧಿಸುತ್ತಾನೆ.

    1960ರ ರೋಮ್ ನಲ್ಲಿ ಒಲಿಂಪಿಕ್ಸ್, ಏಷ್ಯಾಡ್, ಕಾಮನ್ ವೆಲ್ತ್ ಯಶಸ್ಸಿನ ನಂತರ ಮಿಲ್ಕಾ ಜೀವನ ಪಡೆಯುವ ತಿರುವು, ಅಥ್ಲೀಟ್ ಓಟ, ಜೀವನದ ರೇಸ್ ಎರಡನ್ನೂ ಮಿಲ್ಕಾ ಸಂಭಾಳಿಸುವ ಕಥಾನಕ ಮನಮುಟ್ಟುವಂತೆ ಮೂಡಿ ಬಂದಿದೆ.
    ಯಶಸ್ಸಿಗೆ ಪೂರಕ ಅಂಶಗಳು

    ಯಶಸ್ಸಿಗೆ ಪೂರಕ ಅಂಶಗಳು

    ವಿನೋದ್ ಪ್ರಧಾನ್ ಅವರ ಕೆಮೆರಾ ವರ್ಕ್ ನಲ್ಲಿ ಜಬ್ಜೇತ್ ಸಿಂಗ್ ಮಿಲ್ಕಾ ಸಿಂಗ್ ಆಗುವ ಕಥೆ, ರೇಸಿಂಗ್ ಟ್ರ್ಯಾಕ್ ಸೋನಮ್ ನಗು ದಿವ್ಯಾ ದತ್ತಾ ಮೌನ ಎಲ್ಲವೂ ನೈಜವಾಗಿ ಮೂಡಿದೆ.

    ಪಿ ಭಾರತಿ ಅವರ ಸಂಕಲನದ ನಡುವೆಯೂ ಚಿತ್ರ 3 ಗಂಟೆ ಅವಧಿ ನೋಡುವಂತೆ ಮಾಡುವಲ್ಲಿ ಭಾರತಿ ಪಾತ್ರ ದೊಡ್ಡದು. ಕ್ರೀಡಾ ಕ್ಷೇತ್ರದ ಹೀರೊ ಕಥೆ ಎಲ್ಲರನ್ನು ಮುಟ್ಟುವಂತೆ ಮಾಡುತ್ತದೆ.

    ಶಂಕರ್ ಎಹಾಸನ್ ಲಾಯ್ ಸಂಗೀತ ಮಿಲ್ಕಾ ಕಥೆಯ ಜೊತೆಜೊತೆಗೆ ಹಾಸುಹೊಕ್ಕಿದೆ. ಕಥೆಯಿಂದ ಪ್ರತ್ಯೇಕವಾಗಿ ಕಾಣಿಸಿಕೊಂಡಿಲ್ಲ

    ರಾಕೇಶ್ ಕಮಾಲ್

    ರಾಕೇಶ್ ಕಮಾಲ್

    ಇದು ಬರೀ ವೇಗವಾಗಿ ಓಡುವ ಹೋರಾಟಗಾರ ಅಥ್ಲೀಟ್ ಕಥೆಯಾಗಿ ಮೂಡಿ ಬಂದಿಲ್ಲ. ರಾಕೇಶ್ ಅವರು ಇಲ್ಲಿ ಮಿಲ್ಕಾ ಓಡುವಾಗ ಇರುವ ಚಲ, ಕುಸಿದರೂ ಮತ್ತೆ ಎದ್ದು ನಿಲ್ಲುವ ಬಲ, ಜೀವನದ ಸಂಕಷ್ಟ ಎದುರಿಸುವ ರೀತಿಯನ್ನು ತೋರಿಸಿದ್ದಾರೆ. ಇದು ಜನರು ತಮ್ಮನ್ನು ತಾವು ಹುಡುಕಿಕೊಳ್ಳುವಂತೆ ಮಾಡುತ್ತದೆ

    ಅಸಲಿ ಮಿಲ್ಕಾ ಮಾತು

    ಅಸಲಿ ಮಿಲ್ಕಾ ಮಾತು

    ಭಾಗ್ ಮಿಲ್ಕಾ ಭಾಗ್ ಚಿತ್ರವನ್ನು ನೋಡಿದ ಮೇಲೆ ಕಣ್ಣೀರಿಟ್ಟ ಮಿಲ್ಕಾ ಸಿಂಗ್, ಫರ್ಹಾನ್ ಅಖ್ತರ್ ಕರ್ಚೀಫಿನಲ್ಲಿ ಕಣ್ಣೀರು ಒರೆಸಿಕೊಂಡು ನಟನನ್ನು ಹರಸಿದ್ದಾರೆ.

    ಅಪ್ಪನ ಕಥೆ ನೋಡಲು ಪ್ರಿಮಿಯರ್ ಶೋಗೆ ಗೈರು ಹಾಜರಾಗಿದ್ದ ಖ್ಯಾತ ಗಾಲ್ಫ್ ಪಟು ಜೀವ್ ಮಿಲ್ಕಾ ಸಿಂಗ್, ನಮ್ಮಪ್ಪ ಪಟ್ಟ ಕಷ್ಟ ನೋಡಲು ನನಗೆ ಆಗುವುದಿಲ್ಲ. ಅಪ್ಪನಿಗೆ ಚಿತ್ರ ಇಷ್ಟವಾಗಿದ್ದರೆ ಅದಕ್ಕಿಂತ ದೊಡ್ಡ ಖುಷಿ ಬೇರೆ ಇಲ್ಲ ಎಂದಿದ್ದಾರೆ.

    ರಂಗ್ ದೇ ಬಸಂತಿ ನೋಡಿ ಮೆಚ್ಚಿದ ನಂತರವೇ ರಾಕೇಶ್ ಓಂಪ್ರಕಾಶ್ ಮೆಹ್ರಾ ಕೈಗೆ ಮಿಲ್ಕಾ ಜೀವನ ಕಥೆ ತೆರೆ ಮೇಲೆ ಹೆಣೆಯುವ ಜವಾಬ್ದಾರಿ ನೀಡಿದೆ ಎಂದು ಜೀವ್ ಹೇಳಿದ್ದಾರೆ.

    English summary
    History is created in several ways. One of them is cinema. And if Rakeysh Omprakash Mehra's Bhaag Milkha Bhaag seems like a near-flawless homage to the flying spirit of India's greatest runner, it is partly because the story, so nimbly woven into a pastiche of drama, emotion, humour and pathos by Prasoon Joshi, is in no hurry to keep pace with the onscreen Milkha's breathless sprint.
    Wednesday, December 4, 2013, 15:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X