twitter
    For Quick Alerts
    ALLOW NOTIFICATIONS  
    For Daily Alerts

    ಚಲನಚಿತ್ರ ವಿಮರ್ಶೆ: ಕಾಮಿಡಿ ಸವಾರಿ ಪರಾರಿ

    By Rajendra
    |

    Rating:
    3.0/5
    ಇವರು ಒಂಥರಾ ಥ್ರೀ ಈಡಿಯಟ್ಸ್ ಇದ್ದಂತೆ. ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಳ್ಳುತ್ತಾರೆ. ಇಕ್ಕಟ್ಟಿಗೆ ಸಿಕ್ಕಿಬೀಳುತ್ತಾರೆ. ಅತ್ತ ತೀರಾ ಎಳಸು ಅಲ್ಲ ಇತ್ತ ತೀರಾ ಗಡುಸು ಅಲ್ಲ. ಬಾಲ ಇಲ್ಲದ ಕೋತಿಗಳು. ಈ ಎಡಬಿಡಂಗಿಗಳ ಎಡವಟ್ಟುಗಳೇ 'ಪರಾರಿ'.

    ಕಾಮಿಡಿ ಚಿತ್ರವನ್ನು ನಿರ್ದೇಶಕ ಕೆ.ಎಂ.ಚೈತನ್ಯ ಅವರು ಸೀರಿಯಸ್ಸಾಗಿಯೇ ಮಾಡಿದ್ದಾರೆ. ಕೇವಲ ಕಾಮಿಡಿಗಷ್ಟೇ ತಮ್ಮ ಚಿತ್ರವನ್ನು ಸೀಮಿತವಾಗಿಡದೆ ಒಂಚೂರು ಅತ್ತಿತ್ತಲೂ ಕಥೆಯನ್ನು ಹೊರಳಿಸಿದ್ದಾರೆ. ಹಾಗಾಗಿ ಚಿತ್ರದಲ್ಲಿ ಕಾಮಿಡಿ ಜೊತೆಗೆ ಒಂದಷ್ಟು ಥ್ರಿಲ್, ಇನ್ನೊಂದಿಷ್ಟು ದಿಲ್ ಇದೆ. ಜೊತೆಗೆ ಮಜಾ ನೀಡಲು ಬೀಜ ಬೀಜ ಹಾಡು ಇದೆ.

    ಕಾಲೇಜು ಯುವಕರನ್ನೇ ಉದ್ದೇಶವಾಗಿಟ್ಟುಕೊಂಡು ಚಿತ್ರವನ್ನು ಮಾಡಿದ್ದಾರೆ ಕೆ.ಎಂ.ಚೈತನ್ಯ. ಕಥೆ, ಚಿತ್ರಕಥೆ ಎಸ್.ಮೋಹನ್ ಅವರದಾದರೂ ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸುವಲ್ಲಿ ಚೈತನ್ಯ ಅವರ ಶ್ರಮ ಎದ್ದು ಕಾಣುತ್ತದೆ.

    ಚಿತ್ರ: ಪರಾರಿ
    ನಿರ್ಮಾಪಕ: ಸುಮಿತ್ ಕೊಂಬ್ರಾ
    ಲಾಂಛನ: ಶಕ್ತಿ ಮೂವೀಸ್ ವರ್ಲ್ಡ್‌ವೈಡ್
    ನಿರ್ದೇಶನ: ಕೆ.ಎಂ.ಚೈತನ್ಯ
    ಸಂಗೀತ: ಅನೂಪ್ ಸೀಳಿನ್
    ಛಾಯಾಗ್ರಹಣ: ವೇಣು
    ಸಾಹಿತ್ಯ: ಜಯಂತ್ ಕಾಯ್ಕಿಣಿ, ವಿ.ನಾಗೇಂದ್ರ ಪ್ರಸಾದ್ ಹಾಗೂ ಕವಿರಾಜ್
    ಸಂಕಲನ: ಪಿ.ಹರಿದಾಸ್, ಕೆ.ಪ್ರದೀಪ್
    ಕಲೆ: ಅರುಣ್ ಸಾಗರ್
    ಕಥೆ, ಚಿತ್ರಕಥೆ: ಎಸ್ ಮೋಹನ್
    ಪಾತ್ರವರ್ಗ: ಶೃಂಗ, ಶ್ರವಂತ್, ಬುಲೆಟ್ ಪ್ರಕಾಶ್, ಶುಭಾ ಪೂಂಜಾ, ಜಾಹ್ನವಿ ಕಾಮತ್, ರಂಗಾಯಣ ರಘು, ಶರತ್ ಲೋಹಿತಾಶ್ವ, ಉಮಾಶ್ರೀ, ಸಾಧು ಕೋಕಿಲ, ಬಿರಾದಾರ್, ಅರುಣ್ ಸಾಗರ್ ಮುಂತಾದವರು.

    ಅನುಭವಿ ಕಲಾವಿದರ ಜತೆ ಹೊಸಬರ ಪರಾರಿ

    ಅನುಭವಿ ಕಲಾವಿದರ ಜತೆ ಹೊಸಬರ ಪರಾರಿ

    ಶೃಂಗ, ಶ್ರವಂತ್, ಜಾಹ್ನವಿ ಕಾಮತ್ ಹೊಸಬರೇ ಆದರೂ ಲೀಲಾಜಾಲ ಅಭಿನಯ ನೀಡಿದ್ದಾರೆ. ಸಾಕಷ್ಟು ನುರಿತ ಕಲಾವಿದರ ಬಳಗವೇ ಚಿತ್ರದಲ್ಲಿರುವುದು ಇನ್ನೊಂದು ವಿಶೇಷ. ರಂಗಾಯಣ ರಘು, ಬಿರಾದಾರ್, ಉಮಾಶ್ರೀ, ಶರತ್ ಲೋಹಿತಾಶ್ವ ಮುಂತಾದ ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ.

    ಕಾಮಿಡಿ ವಿಲನ್ ಆಗಿ ಅರುಣ್ ಸಾಗರ್

    ಕಾಮಿಡಿ ವಿಲನ್ ಆಗಿ ಅರುಣ್ ಸಾಗರ್

    ಚಿತ್ರದಲ್ಲಿ ಅರುಣ್ ಸಾಗರ್ ಅವರದೂ ವಿಭಿನ್ನ ಪಾತ್ರ. ಒಂಥರಾ ಕಾಮಿಡಿ ವಿಲನ್ ಅವರು. ಮೂಕನಾಗಿ ಬಿರಾದಾರ್ ನಕ್ಕುನಲಿಸುತ್ತಾರೆ. ಪೋಷಕ ಪಾತ್ರಗಳಲ್ಲಿ ಉಮಾಶ್ರೀ ಹಾಗೂ ರಂಗಾಯಣ ರಘು ಪಾತ್ರಗಳು ಗಮನಸೆಳೆಯುತ್ತವೆ. ಶುಭಾಪೂಂಜಾ, ಜಾಹ್ನವಿ ಕಾಮತ್ ಇಬ್ಬರೂ ಒಬ್ಬರಿಗೊಬ್ಬರು ಸರಿಸಾಟಿಯಾಗಿ ಅಭಿನಯ ನೀಡಿದ್ದಾರೆ.

    ಯುವಕರು ಪುರುಷರಾಗಲು ಹೋಗುತ್ತಾರೆ

    ಯುವಕರು ಪುರುಷರಾಗಲು ಹೋಗುತ್ತಾರೆ

    ಇಷ್ಟಕ್ಕೂ ಚಿತ್ರದ ಕಥೆ ಏನೆಂದರೆ...ಸ್ವಾಮೀಜಿಯೊಬ್ಬರ ಸಲಹೆಯಂತೆ ಮೂವರು ಯುವಕರು ಪೀಡೆ, ಕರಣ್, ಹಾಗೂ ಅನಂತ (ಕ್ರಮವಾಗಿ ಬುಲೆಟ್ ಪ್ರಕಾಶ್, ಶ್ರವಂತ್ ಹಾಗೂ ಶೃಂಗ) ಆಂಧ್ರದ ಹಳ್ಳಿಯೊಂದಕ್ಕೆ ಭೇಟಿ ನೀಡುತ್ತಾರೆ. ಅಲ್ಲಿ ಊರಿಗೆ ಊರೇ ಕಾಮಾಟಿಪುರ.

    ಪೀಕಲಾಟಕ್ಕೆ ಸಿಕ್ಕಿಬೀಳುವ ಯುವಕರು

    ಪೀಕಲಾಟಕ್ಕೆ ಸಿಕ್ಕಿಬೀಳುವ ಯುವಕರು

    ಇಲ್ಲಿಗೆ ಮಜಾ ಮಾಡಲು ಬಂದಂಹ ಯುವಕರು ಲವ್ವಲ್ಲಿ ಬೀಳುತ್ತಾರೆ. ಅಲ್ಲಿಂದ ಅವರೊಂದಿಗೆ ಪರಾರಿಯಾಗಲು ಯತ್ನಿಸುತ್ತಾರೆ. ಪರಾರಿಯಾಗುವ ಸಮಯದಲ್ಲಿ ಶವವೊಂದು ಇವರಿಗೆ ತಗಲಾಕಿಕೊಳ್ಳುತ್ತದೆ. ಪೊಲೀಸ್ ಇನ್ಸ್ ಪೆಕ್ಟರ್ ಶರತ್ ಲೋಹಿತಾಶ್ವ ಕಣ್ಣಿಗೆ ಬಿದ್ದು ಪೀಕಲಾಟಕ್ಕೆ ಬೀಳುತ್ತಾರೆ.

    ಛಾಯಾಗ್ರಹಣ, ಸಂಗೀತ ಓಕೆ

    ಛಾಯಾಗ್ರಹಣ, ಸಂಗೀತ ಓಕೆ

    ಪರಾರಿ ಚಿತ್ರದಲ್ಲಿ ಕಾಮಿಡಿಯಾಗಿ ಸಾಗಿಹೋಗುವ ಕಾರಣ ಮುಂದೇನಾಗುತ್ತದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಉಳಿಯುವುದಿಲ್ಲ. ಎಚ್.ಸಿ.ವೇಣು ಅವರ ಛಾಯಾಗ್ರಹಣ, ಅನೂಪ್ ಸೀಳಿನ್ ಅವರ ಸಂಗೀತ ಒಂದಕ್ಕೊಂದು ಮೇಳೈಸಿವೆ.

    ಮೇಘನಾ ಐಟಂ ಹಾಡು ಇನ್ನೊಂದು ಹೈಲೈಟ್

    ಮೇಘನಾ ಐಟಂ ಹಾಡು ಇನ್ನೊಂದು ಹೈಲೈಟ್

    ಬೀಜ ಬೀಜ...ಬೀಜ ಮೊದಲ ಮರ ಮೊದಲಾ...ಐಟಂ ಹಾಡಿಗೆ ಮೇಘನಾ ನಾಯ್ಡು ಹೆಜ್ಜೆ ಹಾಕಿರುವುದು ಯುವಕರ ಪಾಲಿಗೆ ಪಂಚಮೃತ. ಚಿತ್ರದ ಮೊದಲರ್ಧ ಕುತೂಹಲಭರಿತವಾಗಿ ಸಾಗಿಹೋಗುತ್ತದೆ. ದ್ವಿತೀಯಾರ್ಧಕ್ಕೆ ಹೊರಳಿದಾಗ ಕಥೆಯ ವೇಗ ಕಡಿಮೆಯಾಗಿ ಕೊನೆಕೊನೆಗೆ ಸುದೀರ್ಘವಾದಂತೆ ಭಾಸವಾಗುತ್ತದೆ.

    ಮನರಂಜನೆಗೆ ಮೋಸವಿಲ್ಲ, ಜೇಬಿಗೆ ಲಾಸಿಲ್ಲ

    ಮನರಂಜನೆಗೆ ಮೋಸವಿಲ್ಲ, ಜೇಬಿಗೆ ಲಾಸಿಲ್ಲ

    ಒಟ್ಟಾರೆಯಾಗಿ ಹೇಳಬೇಕು ಎಂದರೆ ಮನರಂಜನೆಗೆ ಮೋಸವಿಲ್ಲ. ಜೇಬಿಗೆ ಲಾಸಿಲ್ಲ. ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ನೀಡಲಾಗಿದೆ ಎಂಬುದು ನಿಮ್ಮ ಗಮನಕ್ಕಿರಲಿ. ಉಳಿದಂತೆ ನಕ್ಕುನಗಿಸಲು ಇದ್ದೇ ಇವೆ ಮೂರು ಬಾಲವಿಲ್ಲದ ಕೋತಿಗಳು.

    English summary
    Kannada film Parari review. Parari features Bullet Prakash, Shubha Poonja and new faces like Jahnavi Kamath, Shravanth Rao, and Shrungha in the key roles. People could enjoy the film if they let go the logic.
    Friday, April 26, 2013, 17:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X