twitter
    For Quick Alerts
    ALLOW NOTIFICATIONS  
    For Daily Alerts

    ಶಿವರಾಜ್ ಕುಮಾರ್ 'ಅಂದರ್ ಬಾಹರ್' ಚಿತ್ರ ವಿಮರ್ಶೆ

    By Rajendra
    |

    Rating:
    4.0/5
    ಶಿವಣ್ಣ ಇಲ್ಲಿ ಕ್ರಿಮಿನಲ್ ಹಸ್ಬೆಂಡ್. ಚಿತ್ರದಲ್ಲಿ ಫ್ಯಾಮಿಲಿ ಸೆಂಟಿಮೆಂಟ್ ಇದೆ. ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವ ಫೈಟ್ ಗಳಿವೆ. ಕ್ಲಾಸ್ ಪ್ರೇಕ್ಷಕರಿಗೆ ಕ್ಲಾಸಿಕ್ ಕಥೆಯಿದೆ. ಕಿವಿಗೆ ಇಂಪು ನೀಡುವ ಹಾಡುಗಳಿವೆ. ಚಿತ್ರ ಸುದೀರ್ಘ ಅನ್ನಿಸಿದರೂ ಎಲ್ಲೂ ಬೋರು ಹೊಡೆಸದಂತೆ ತೆರೆಗೆ ತಂದಿದ್ದಾರೆ ನಿರ್ದೇಶಕ ಫಣೀಶ್ ಎಸ್ ರಾಮನಾಥಪುರ.

    ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಬಹಳ ಸಮಯದ ಬಳಿಕ ಮನಮಿಡಿಯುವ ಪಾತ್ರ ಪೋಷಿಸಿದ್ದಾರೆ. ಕಥೆಗೆ ಜೀವತುಂಬಿದ್ದಾರೆ. ಪಾರ್ವತಿ ಮೆನನ್ ಸಹ ಅಷ್ಟೇ ಶಿವಣ್ಣನಿಗೆ ಸರಿಸಾಟಿಯಾಗಿ ಅಭಿನಯಿಸಿದ್ದಾರೆ. ಅಂಡರ್ ವರ್ಲ್ಡ್ ಡಾನ್ ಒಬ್ಬನ ಅಂದರ್ ಬಾಹರ್ ಕಥೆ ಇದು.

    ಮದುವೆಯ ಬಳಿಕ ಸಂಪ್ರದಾಯದಂತೆ ಗಂಡನಾದವನು ಹೆಂಡತಿಗೆ ಅರುಂಧತಿ ನಕ್ಷತ್ರವನ್ನು ತೋರಿಸುತ್ತಾನೆ. ಆದರೆ ಅರುಂಧತಿ ನಕ್ಷತ್ರ ಹಗಲು ಹೊತ್ತು ಅಷ್ಟೇ ಅಲ್ಲ ರಾತ್ರಿ ವೇಳೆಯಲ್ಲೂ ಬರಿಗಣ್ಣಿಗೆ ಕಾಣುವುದಿಲ್ಲ ಎಂಬ ಸತ್ಯ ಸಂಗತಿಯೊಂದಿಗೆ ಕಥೆ ಆರಂಭವಾಗುತ್ತದೆ.

    ಚಿತ್ರ: ಅಂದರ್ ಬಾಹರ್
    ನಿರ್ಮಾಪಕರು: ರಜನೀಶ್, ಪ್ರಸಾದ್ ರಾವ್, ಅಂಬರೀಶ್, ಭಾಸ್ಕರ್, ಅವಿನಾಶ್ ಹಾಗೂ ಶ್ರೀನಿವಾಸ್
    ನಿರ್ದೇಶನ: ಫಣೀಶ್ ಎಸ್ ರಾಮನಾಥಪುರ
    ಸಂಭಾಷಣೆ: ಎಂ.ಎಸ್.ರಮೇಶ್
    ಸಂಗೀತ: ವಿಜಯ್ ಪ್ರಕಾಶ್
    ಛಾಯಾಗ್ರಹಣ: ಶೇಖರ್ ಚಂದ್ರ
    ಸಂಕಲನ: ಜೋ.ನಿ.ಹರ್ಷ
    ಸಾಹಸ: ಥ್ರಿಲ್ಲರ್ ಮಂಜು, ಪಳನಿ ರಾಜ್
    ನೃತ್ಯ ಸಂಯೋಜನೆ: ಇಮ್ರಾನ್ ಸರ್ದಾರಿಯಾ
    ತಾರಾಗಣ: ಶಿವರಾಜ್ ಕುಮಾರ್, ಪಾರ್ವತಿ ಮೆನನ್, ಶಶಿಕುಮಾರ್, ಶ್ರೀನಾಥ್, ಅರುಂಧತಿ ನಾಗ್, ಸೃಜನ್ ಲೋಕೇಶ್, ರಘು ರಾಮ್ ಮುಂತಾದವರು.

    ಗಂಡ ಹೆಂಡತಿ ಸಂಬಂಧಗಳ ಮಿಲನ

    ಗಂಡ ಹೆಂಡತಿ ಸಂಬಂಧಗಳ ಮಿಲನ

    ಗಂಡ ಹೆಂಡತಿ ಸಂಬಂಧ ಒಂದು ಸಣ್ಣ ಸುಳ್ಳಿನ ಮೂಲಕವೇ ಆರಂಭವಾಗುತ್ತದೆ. ಅದೇ ನಂಬಿಕೆಗಳು ಬಲವಾಗುತ್ತಾ ಗಂಡ ಹೆಂಡತಿ ಇನ್ನಷ್ಟು ಹತ್ತಿರವಾಗಲು ಸಹಾಯಕವಾಗುತ್ತದೆ. ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡು ಸಾಗಿದರೆ ಮಾತ್ರ ಈ ಸಂಸಾರ ಸೌಧ ನಿಲ್ಲಲು ಸಾಧ್ಯ ಎಂಬುದೇ ಚಿತ್ರದ ಕಥಾವಸ್ತು.

    ಮೊದಲರ್ಧದಲ್ಲಿ ಮಾಸ್ ಎಲಿಮೆಂಟ್ಸ್ ಗೆ ಒತ್ತು

    ಮೊದಲರ್ಧದಲ್ಲಿ ಮಾಸ್ ಎಲಿಮೆಂಟ್ಸ್ ಗೆ ಒತ್ತು

    ಚಿತ್ರದಲ್ಲಿ ಲಿವ್ ಇನ್ ರಿಲೇಷನ್ ಹಾಗೂ ಮದುವೆ ಸಂಬಂಧಗಳ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಚಿತ್ರದ ಮೊದಲರ್ಧ ಶಿವಣ್ಣ ಅಭಿಮಾನಿಗಳನ್ನು ಉದ್ದೇಶವಾಗಿಟ್ಟುಕೊಂಡು ಮಾಸ್ ಎಲಿಮೆಂಟ್ಸ್ ಗೆ ಒತ್ತು ನೀಡಲಾಗಿದೆ. ದ್ವೀತೀಯಾರ್ಧ ಸುದೀರ್ಘ ಅನ್ನಿಸಿದರೂ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಹಿಡಿದಿಡುತ್ತದೆ.

    ಕಥೆಗೆ ಪೂರಕವಾಗಿರುವ ತಿರುವುಗಳು

    ಕಥೆಗೆ ಪೂರಕವಾಗಿರುವ ತಿರುವುಗಳು

    ಆರಂಭದಿಂದಲೇ ಕುತೂಹಲ ಮೂಡಿಸುವ ಫಣೀಶ್ ಅವರು ಸೂರ್ಯ (ಶಿವರಾಜ್ ಕುಮಾರ್) ಎಂಬ ಭೂಗತ ವ್ಯಕ್ತಿಯ ಒಳ ಮತ್ತು ಹೊರ ತುಮುಲಗಳನ್ನು ಹೊರಹಾಕುತ್ತಾ ಸಾಗುತ್ತಾರೆ. ಇಲ್ಲೇ ಚಿತ್ರದ ಗಟ್ಟಿತನ ಅಡಗಿರುವುದು. ಕಥೆಗೆ ಪೂರಕವಾಗಿ ಒಂದಷ್ಟು ಕುತೂಹಲ ಮೂಡಿಸುವ ತಿರುವುಗಳು ಚಿತ್ರಕ್ಕೆ ಬಲ ನೀಡಿವೆ.

    ಪೊಲೀಸ್ ಅಧಿಕಾರಿಯಾಗಿ ಶಶಿಕುಮಾರ್

    ಪೊಲೀಸ್ ಅಧಿಕಾರಿಯಾಗಿ ಶಶಿಕುಮಾರ್

    ನಾಯಕನನ್ನು ಹುಡುಕಿಕೊಂಡು ಬರುವ ಪೊಲೀಸ್ ಅಧಿಕಾರಿಯಾಗಿ ಶಶಿಕುಮಾರ್ ಅವರು ಗಮನಸೆಳೆಯುತ್ತಾರೆ. ಸೃಜನ್ ಲೋಕೇಶ್ ಅವರ ಪಾತ್ರ ಹೆಚ್ಚಾಗಿಲ್ಲ ಎಂಬುದನ್ನು ಬಿಟ್ಟರೆ ಉಳಿದಂತೆ ರಘುರಾಮ್, ಅರುಂಧತಿ ನಾಗ್, ಶ್ರೀನಾಥ್ ತಮ್ಮ ತಮ್ಮ ಪಾತ್ರಗಳಿಗೆ ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ.

    ಶೇಖರ್ ಚಂದ್ರ ಛಾಯಾಗ್ರಹಣ ಹಿತವಾಗಿದೆ

    ಶೇಖರ್ ಚಂದ್ರ ಛಾಯಾಗ್ರಹಣ ಹಿತವಾಗಿದೆ

    "ಜೈ ಹೋ..." ಖ್ಯಾತಿಯ ವಿಜಯ್ ಪ್ರಕಾಶ್ ಅವರ ಸಂಗೀತ ಮುದ ನೀಡುತ್ತದೆ. ಶೇಖರ್ ಚಂದ್ರ ಅವರ ಛಾಯಾಗ್ರಹಣ ಕಣ್ಣಿಗೆ ಹಿತವಾಗಿದೆ. ಥ್ರಿಲ್ಲರ್ ಮಂಜು ಅವರ ಸಾಹಸ ಸನ್ನಿವೇಶಗಳು ಮೈನವಿರೇಳಿಸುವಂತಿದ್ದರೂ ಅಲ್ಲಲ್ಲಿ ಅತಿರಂಜಿತವಾಗಿ ಮೂಡಿಬಂದಿವೆ.

    ಸಂಭಾಷಣೆಗೆ ಚಿತ್ರದಲ್ಲಿ ಹೆಚ್ಚು ಮಾರ್ಕ್ಸ್

    ಸಂಭಾಷಣೆಗೆ ಚಿತ್ರದಲ್ಲಿ ಹೆಚ್ಚು ಮಾರ್ಕ್ಸ್

    ಚಿತ್ರದಲ್ಲಿ ಹೆಚ್ಚು ಮಾರ್ಕ್ಸ್ ತೆಗೆದುಕೊಳ್ಳುವುದು ಮಾತ್ರ ಸಂಭಾಷಣೆ. ಎಂ.ಎಸ್.ರಮೇಶ್ ಅವರ ಸಂಭಾಷಣೆಗೆ ಡಿಸ್ಟಿಂಕ್ಷನ್ ಮಾರ್ಕ್ಸ್ ನೀಡಲೇಬೇಕು. ಚಿತ್ರದಲ್ಲಿ ಭಾವನಾತ್ಮಕ ಅಂಶಗಳಿಗೆ ಹೆಚ್ಚು ಒತ್ತು ನೀಡಲಾಗಿದ್ದು ಪಾರ್ವತಿ ಮೆನನ್ ಅದ್ಭುತವಾಗಿ ನಿಭಾಯಿಸಿದ್ದಾರೆ. ಅವರ ಅಭಿನಯ ಮಿಲನ ಚಿತ್ರವನ್ನು ಮತ್ತೊಮ್ಮೆ ನೆನಪಿಗೆ ತರುತ್ತದೆ.

    English summary
    Hat Trick Hero Shivrajkumar and Parvathi Menon lead Kannada film Andar Bahar review. Parvathy Menon performance outstanding. Camera work by Sekhar Chandru brilliant. Must watch film.
    Friday, April 26, 2013, 17:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X