Englishবাংলাગુજરાતીहिन्दीമലയാളംதமிழ்తెలుగు

ಆರ್ ಚಂದ್ರು ಆಕ್ಷನ್ ಕಟ್ ನಲ್ಲಿ ನಟ ನಾಗಾರ್ಜುನ

Posted by:
Published: Thursday, January 10, 2013, 13:26 [IST]
 

ಆರ್ ಚಂದ್ರು ಆಕ್ಷನ್ ಕಟ್ ನಲ್ಲಿ ನಟ ನಾಗಾರ್ಜುನ

ತಾಜ್ ಮಹಲ್, ಪ್ರೇಮ್ ಕಹಾನಿ, ಮೈಲಾರಿ ಹಾಗೂ ಕೋ ಕೋ ಚಿತ್ರಗಳ ನಿರ್ದೇಶಕ ಆರ್ ಚಂದ್ರು ತೆಲುಗು ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. ತೆಲುಗು ಚಿತ್ರಗಳ 'ಮನ್ಮಥುಡು' ಅಕ್ಕಿನೇನಿ ನಾಗಾರ್ಜುನ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ಸದ್ಯಕ್ಕೆ ಚಂದ್ರು ಅವರು 'ಚಾರ್ ಮಿನಾರ್' ಚಿತ್ರದಲ್ಲಿ ಬಿಜಿಯಾಗಿದ್ದು ಇದೇ ಚಿತ್ರವನ್ನು ತೆಲುಗು ಭಾಷೆಗೂ ರೀಮೇಕ್ ಮಾಡುತ್ತಿದ್ದಾರೆ. ತೆಲುಗು ಚಾರ್ ಮಿನಾರ್ ಚಿತ್ರಕ್ಕೆ ಹೀರೋ ಆಗಿ ನಟ ನಾಗಾರ್ಜುನ ಹೀರೋ ಎಂದು ಅವರು ವಿವರ ನೀಡಿದ್ದಾರೆ.

ಚಂದ್ರು ಅವರ 'ಕೋ ಕೋ' ಹಾಗೂ 'ಮೈಲಾರಿ' ಚಿತ್ರಗಳನ್ನು ವೀಕ್ಷಿಸಿರುವ ತೆಲುಗು ನಿರ್ಮಾಪಕರೊಬ್ಬರು ಅವರ ಮುಂದಿನ 'ಚಾರ್ ಮಿನಾರ್' ಚಿತ್ರವನ್ನು ತೆಲುಗಿನಲ್ಲೂ ನಿರ್ದೇಶಿಸುವಂತೆ ಮುಂದೆ ಬಂದಿದ್ದಾರೆ.

ಇದೇ ನಿರ್ಮಾಪಕರ ಬಳಿ ನಾಗಾರ್ಜುನ ಡೇಟ್ಸ್ ಸಹ ಇದೆಯಂತೆ. ಇನ್ನೇನು ಆಕ್ಷನ್ ಕಟ್ ಹೇಳುವುದೊಂದು ಬಾಕಿ ಇದೆ. ಇನ್ನು ಕನ್ನಡ 'ಚಾರ್ ಮಿನಾರ್' ಚಿತ್ರದ ಡಿಟಿಎಸ್ ಕೆಲಸ ಭರದಿಂದ ಸಾಗುತ್ತಿದ್ದು 'ಸಂಕ್ರಾಂತಿ' ಹೊತ್ತಿಗೆ ಮೊದಲ ಪ್ರತಿ ಸಿದ್ಧವಾಗಲಿದೆ.

ಇದೊಂದು ರೋಮ್ಯಾಂಟಿಕ್ ಚಿತ್ರವಾಗಿದ್ದು ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಹಾಗೂ ಮೇಘನಾ ಗಾಂವಕರ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಗುರು ಕಿರಣ್ ಅವರ ಹಿನ್ನೆಲೆ ಸಂಗೀತ ಹಾಗೂ ಹರಿ ಅವರ ಸಂಗೀತ ಚಿತ್ರಕ್ಕಿದೆ. ಕೆಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣ ಚಿತ್ರದ ಇನ್ನೊಂದು ಆಕರ್ಷಣೆ. (ಏಜೆನ್ಸೀಸ್)

English summary
R Chandru is going places. The director, who has delivered hits like Taj Mahal and Mylari, is game for his debut in Telugu film industry. The interesting part of the story is that he will be directing none other than Telugu superstar Nagarjuna.
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter
Coupons