twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ: ಆಲಿಯಾ ಬಿಟ್ರೆ 2 ಸ್ಟೇಟ್ಸ್ ನಲ್ಲಿ ಮತ್ತೇನಿಲ್ಲ

    By ಜೇಮ್ಸ್ ಮಾರ್ಟಿನ್
    |

    ಹೈವೇ ಬೊಂಬೆ ಆಲಿಯಾ ಭಟ್ ಗೆ 2 ಸ್ಟೇಟ್ಸ್ ಚಿತ್ರದಲ್ಲಿ ಮತ್ತೊಂದು ಬಂಪರ್ ಪಾತ್ರ ಸಿಕ್ಕಿದೆ. ಕರಣ್ ಜೋಹರ್, ಸಾಜಿದ್ ನಾಡಿಯಾಡ್ ವಾಲ ನಿರ್ಮಾಣದ ಈ ಚಿತ್ರ ಲವಲವಿಕೆಯಿಂದ ಕೂಡಿದ್ದು ಯುವ ಮನಸ್ಸುಗಳನ್ನು ಗೆಲ್ಲುವ ಸಾಧ್ಯತೆ ಹೆಚ್ಚಿದೆ.

    ಖ್ಯಾತ ಲೇಖಕ ಚೇತನ್ ಭಗತ್ ಅವರ 2 ಸ್ಟೇಟ್ಸ್ ಕಾದಂಬರಿ ಬೆಳ್ಳಿತೆರೆಗೆ ತರಲಾಗಿದ್ದು, ಕಥೆ ಎಲ್ಲರಿಗೂ ಗೊತ್ತಿರುವುದರಿಂದ ಇಲ್ಲಿ ಪಾತ್ರಧಾರಿಗಳು ಹಾಗೂ ನಿರೂಪಣೆ ಪ್ರಮುಖ ಪಾತ್ರವಹಿಸಿದೆ. ಚಿತ್ರದ ಸಂಗೀತ, ಅಭಿಷೇಕ್ ವರ್ಮನ್ ನಿರ್ದೇಶನ ತಕ್ಕಮಟ್ಟಿಗೆ ಕ್ಲಿಕ್ ಆಗಿದೆ.

    Rating:
    3.0/5

    ಪ್ರೇಮಿಗಳಿಬ್ಬರು ಅಮ್ಮ ಪೋಷಕರನ್ನು ಹಾಗೂ ಆಪ್ತರನ್ನು ಮೆಚ್ಚಿಸಿ ಮದುವೆ ಹಂತ ತಲುಪುವ ಸುಂದರ ಸಾಮಾಜಿಕ ಕಥಾನಕವಿದೆ. ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಸಾಂಸ್ಕೃತಿಕ ಹಾಗೂ ಮದುವೆ ಪದ್ಧತಿಗಳ ಮೇಲೆ ಕಥೆ ಬೆಳಕು ಚೆಲ್ಲಲಾಗಿದೆ. ಆದರೆ, ಎಲ್ಲವೂ ನಿರೀಕ್ಷಿತವಾಗಿರುವುದರಿಂದ ಚಿತ್ರ ಟೈಂ ಪಾಸ್ ಚಿತ್ರ ಕೆಟಗೆರಿಗೆ ಸೇರಿಸಬಹುದು ಆಲಿಯಾಗಾಗಿ ಒಮ್ಮೆ ನೋಡಿ ಆನಂದಿಸಬಹುದು ಅಷ್ಟೇ. ವಿಮರ್ಶಕರ ವಿಮರ್ಶೆಯ ಸಂಗ್ರಹ ಇಲ್ಲಿದೆ ಓದಿ...

    ಎನ್ ಡಿಟಿವಿ 2 ಸ್ಟಾರ್

    ಎನ್ ಡಿಟಿವಿ 2 ಸ್ಟಾರ್

    ಅರ್ಜುನ್ ಕಪೂರ್ ಹಾಗೂ ಅಲಿಯಾ ಭಟ್ ಸುತ್ತಾ ಸುತ್ತುವ ಕಥೆ ಮುಂದುವರೆಯುವುದೇ ಇಲ್ಲ. ರೇವತಿ, ಅಮೃತಾ ಸಿಂಗ್ ಪಾತ್ರಗಳಿಗೆ ತಕ್ಕ ಪೋಷಣೆ ಇಲ್ಲ. ಕ್ರಾಸ್ಟ ಕಲ್ಚರ್ ಕಥೆ ಸಾಕಷ್ಟು ಬಂದಿರುವುದರಿಂದ ಇದರಲ್ಲಿ ಹೊಸದನ್ನು ನೋಡಲು ಬಂದವರಿಗೆ ನಿರಾಶೆ. ಚೇತನ್ ಭಗತ್ ಕಥೆ ಅಳವಡಿಕೆ ಸರಿ ಇದ್ದರೂ ಚಿತ್ರದ ವೇಗವೇ ಮಾರಕವಾಗಬಲ್ಲುದು

    ಇಂಡಿಯಾ ಟುಡೇ 4 ಸ್ಟಾರ್

    ಇಂಡಿಯಾ ಟುಡೇ 4 ಸ್ಟಾರ್

    ಚೇತನ್ ಭಗತ್ ಕಥೆಯ ಸತ್ವ ಸಾರ ಹೀರಿ ಅಭಿಷೇಕ್ ವರ್ಮನ್ ತಮ್ಮ ಛಾಪು ಮೂಡಿಸಿದ್ದಾರೆ. ಪ್ರೀತಿಸುವ ನವ ತರುಣ ತತುಣಿಯರ ಪ್ರೇಮವನ್ನು ವಿಭಿನ್ನ ಸಂಸ್ಖೃತಿಯ ಹಿನ್ನೆಲೆಯುಳ್ಳ ಪೋಷಕರು ಕಾಣುವ ರೀತಿಯನ್ನು ಸೂಕ್ತವಾಗಿ ನಿರೂಪಿಸಲಾಗಿದೆ. ಕುಟುಂಬದ ಜತೆಗೆ ಕುಳಿತು ನೋಡಬಹುದಾದ ಚಿತ್ರ. ಚಿತ್ರದ ಸಂಗೀತ, ಆಲಿಯಾ ಭಟ್, ಅರ್ಜುನ್ ನಟನೆ ಮನಸ್ಸಿನಲ್ಲಿ ಉಳಿಯಲಿದೆ.- ಸೌರಭ್ ದ್ವಿವೇದಿ

    ಬಾಲಿವುಡ್ ಲೈಫ್ 4 ಸ್ಟಾರ್

    ಬಾಲಿವುಡ್ ಲೈಫ್ 4 ಸ್ಟಾರ್

    ಚೇತನ್ ಭಗತ್ ಕೃತಿಗಳನ್ನು ಪ್ರೀತಿಸಿ ಅಥವಾ ದ್ವೇಷಿಸಿ ಆದರೆ, ನಿರ್ಲಕ್ಷಿಸಲು ಸಾಧ್ಯವಿಲ್ಲ. 2 ಸ್ಟೇಟ್ಸ್ ಕಥೆ ಅಳವಡಿಕೆ ಸೂಪರ್ ಆಗಿ ಮೂಡಿದೆ. ಪ್ರೇಮಿಗಳಿಗೆ ಈ ಚಿತ್ರ ಒಳ್ಳೆ ಮನರಂಜನೆ ಹಾಗೂ ಸ್ಮರಣೆ ತಂದು ಕೊಡಬಲ್ಲುದು. ಪ್ರೇಮ ಕಥೆಗಳ ಅಂತ್ಯಕ್ಕಿಂತ ಜರ್ನಿಯನ್ನು ಎಂಜಾಯ್ ಮಾಡುವುದು ಒಳ್ಳೆ ಲಕ್ಷಣ-ಪ್ರಥಮೇಶ್ ಜಾಧವ್

    ಹಿಂದೂಸ್ತಾನ್ ಟೈಮ್ಸ್-: ಶ್ವೇತಾ ಕುಶಾಲ್

    ಹಿಂದೂಸ್ತಾನ್ ಟೈಮ್ಸ್-: ಶ್ವೇತಾ ಕುಶಾಲ್

    ಪಂಜಾಬಿ ಹುಡುಗ-ತಮಿಳು ಹುಡುಗಿ ಪ್ರೇಮಕಥೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅಭಿನಯದಲ್ಲಿ ಅರ್ಜುನ್ ಅಲಿಯಾ ಓಕೆ.. ರೇವತಿ-ಅಮೃತಾ- ಶಿವಕುಮಾರ್, ರೋನಿತ್ ಪಾತ್ರಗಳನ್ನು ವೇಸ್ಟ್ ಮಾಡಲಾಗಿದೆ. ಪಂಚಿಂಗ್ ಡೈಲಾಗ್, ಸಣ್ಣ ಮಟ್ಟದ ಸಸ್ಪೆನ್ಸ್, ಥ್ರಿಲ್ ಇಲ್ಲದ ನಿಧಾನಗತಿಯ ಸಿನಿಮಾ ನೋಡುವುದಕ್ಕಿಂತ ಮನೆಯಲ್ಲಿ ಕೂತು ಚೇತನ್ ಭಗತ್ ಕಾದಂಬರಿ ಓದುವುದೇ ಉತ್ತಮ ಎಂಬುದು ನಮ್ಮ ಸಲಹೆ

    ಬಾಲಿವುಡ್ ಹಂಗಾಮ 4.5 ಸ್ಟಾರ್ಸ್

    ಬಾಲಿವುಡ್ ಹಂಗಾಮ 4.5 ಸ್ಟಾರ್ಸ್

    ಅಭಿಶೇಕ್ ಮೊದಲ ಚಿತ್ರದಲ್ಲೇ ಫುಲ್ ಸ್ಕೋರ್ ಮಾಡಿದ್ದಾರೆ. ಅವರ ಕಥೆ ಹೇಳುವ ರೀತಿ ಬಾಲಿವುಡ್ ಜಗತ್ತಿಗೆ ಭಿನ್ನವಾಗಿ ಕಾಣಿಸಬಹುದು. ಚೇತನ್ ಭಗತ್ ಕಥೆಗೆ ತಕ್ಕ ನ್ಯಾಯ ಒದಗಿಸುತ್ತ ದೃಶ್ಯಗಳಲ್ಲಿ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ. ಶಂಕರ್ ಎಹ್ಸಾನ್ ಲಾಯ್ ಹಿಮ್ಮೇಳದ ಜತೆಗೆ ಹುಸೇನ್ ದಲಾಲ್ ಡೈಲಾಗ್ ಗಳು ಪ್ರೇಕ್ಷಕರನ್ನು ಮುಟ್ಟುತ್ತದೆ.

    ಮುಖ್ಯಪಾತ್ರಧಾರಿಗಳಿಬ್ಬರಿಗೂ ಇದು ಹೊಸ ಬಗೆ ಪಾತ್ರವಾಗಿದ್ದು ಇಬ್ಬರೂ ಮಿಂಚಿದ್ದಾರೆ. ಈ ಚಿತ್ರ ಪ್ರೇಮಿಗಳಂತೂ ಮತ್ತೆ ಮತ್ತೆ ನೋಡಬಹುದಾದ ಚಿತ್ರ-ತರಣ್ ಆದರ್ಶ್

    ಜೀ ನ್ಯೂಸ್ ವಿಮರ್ಶೆ  2 ಸ್ಟಾರ್

    ಜೀ ನ್ಯೂಸ್ ವಿಮರ್ಶೆ 2 ಸ್ಟಾರ್

    ಹೊಸತನವಿರದ ಹಳೆ ಕಥೆ, ಹೊಸ ನಿರ್ದೇಶಕ, ಹೊಸ ಜೋಡಿ, ನಿರೀಕ್ಷಿತ ನಿರೂಪಣೆ, ಕುಂಠಿತ ಕಥಾ ವೇಗ, ಪರ್ವಾಗಿಲ್ಲ ಎನ್ನಬಹುದಾದ ಅಭಿನಯ.. ಬೇರೆ ಚಿತ್ರಗಳು ನೋಡಲು ಮಿಸ್ ಆದರೆ ಈ ಚಿತ್ರಕ್ಕೊಂದು ಟಿಕೆಟ್ ಖರೀದಿಸಿ ನೋಡಿ ಬನ್ನಿ.. ಚಿತ್ರ ಬೋರ್ ಹೊಡೆಸುವುದಿಲ್ಲವಾದರೂ ನಿಮಗೆ ಫುಲ್ ಮನರಂಜನೆ ನೀಡುವಲ್ಲಿ ಸಫಲವಾಗುವುದಿಲ್ಲ- ಅಪರ್ಣಾ ಮುಡಿ

    ಕೋಯಿಮೊಯಿ ವಿಮರ್ಶೆ 3/5

    ಕೋಯಿಮೊಯಿ ವಿಮರ್ಶೆ 3/5

    ಚೇತನ್ ಭಗತ್ ಪುಸ್ತಕದ ಅಭಿಮಾನಿಗಳಿಗೆ ನಿರಾಶೆ ಖಂಡಿತ. ಮಾಮೂಲಿ ಪ್ರೇಮಕಥೆ ಇಷ್ಟಪಡುವ ಸಿನಿರಸಿಕರಿಗೆ ಚಿತ್ರ ಆಪ್ತವಾಗಬಲ್ಲುದು. ಕಥಾ ನಿರೂಪಣೆಯಲ್ಲಿ ವಿಶೇಷತೆ ಇಲ್ಲ, ನಟನೆ ಪರ್ವಾಗಿಲ್ಲ, ಕಾಸಿಗೆ ತಕ್ಕ ಕಜ್ಜಾಯ ಎಂದು ಒಲ್ಲದ ಮನಸ್ಸಿನಲ್ಲಿ ಹೇಳಬಹುದು.- ಮೊಹರ್ ಬಸು

    English summary
    The movie 2 States directed by Abhishek Varman with some superb performances surely has a lot of freshness in the seemingly not so fresh story. Arjun Kapoor (Krish) and Alia Bhatt's (Ananya) chemistry with some wow going intimate scenes will surely make you fall in love with their love story.
    Friday, April 18, 2014, 18:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X