twitter
    For Quick Alerts
    ALLOW NOTIFICATIONS  
    For Daily Alerts

    'ನೆಟ್ಟಗೆ ನಡೆಯಕ್ಕೆ ಬರಲ್ಲ ರಕ್ಷಿತಾಗೇಕೆ ರಾಜಕೀಯ?'

    By Prasad
    |

    ಎಂಟು ವರ್ಷಗಳ ಹಿಂದೆ 'ತಾಯಿಯ ಮಡಿಲು' ಚಿತ್ರದಲ್ಲಿ ನಟಿಸಿದ ನಂತರ ನಟನೆಯಿಂದ ದೂರ ಉಳಿದಿದ್ದರೂ 'ಸಮಾಜ ಸೇವೆ' ಮಾಡುವ ಆಶಯದಿಂದ ರಾಜಕೀಯಕ್ಕೆ ಧುಮುಕಿರುವ ನಟಿ ರಕ್ಷಿತಾ ಈಗ ಯಾವ ಪಕ್ಷದಲ್ಲಿದ್ದಾರೆ? "ನಾನು ಮಂಡ್ಯದ ಸೊಸೆ" ಎಂದು ಹೇಳಿಕೊಳ್ಳುತ್ತಿರುವ ಅವರ ಕುರಿತು ಮಂಡ್ಯದ ಜನತೆಗಿರಲಿ ಸ್ವತಃ ಅವರಿಗೇ ತಾವು ಯಾವ ಪಕ್ಷದ ಜೊತೆ ಒಡನಾಟ ಹೊಂದಿದ್ದೇನೆ ಎಂಬುದು ಗೊತ್ತಿರಲಿಕ್ಕಿಲ್ಲ.

    ಭಾರೀ ಮಹತ್ವಾಕಾಂಕ್ಷೆಯೊಂದಿಗೆ ಬಿಎಸ್ಆರ್ ಕಾಂಗ್ರೆಸ್ ಸೇರಿದ್ದ ರಕ್ಷಿತಾಗೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಕ್ಕಿರಲಿಲ್ಲ. 'ಫಂಡ್' ಸಿಗಲಿಲ್ಲ ಎಂಬ ಕಾರಣಕ್ಕೆ ಅಲ್ಲಿಂದ 'ಉರುಳಿ' ಬಿಜೆಪಿ ಸೇರಿ ಯಶವಂತಪುರ ಕ್ಷೇತ್ರದಲ್ಲಿ ಚುನಾವಣೆಗೆ ಧುಮುಕುತ್ತಾರೆ ಎಂಬ ಸುದ್ದಿಯೂ ಹಬ್ಬಿತ್ತು. ಅದೂ ಸಾಧ್ಯವಾಗಲಿಲ್ಲ. ಇಲ್ಲಿಯಾದರೂ ಒಂದು ಕೈ ನೋಡೇಬಿಡೋಣ ಎಂದು ಜೆಡಿಎಸ್ ಸೇರಿಕೊಂಡರೂ ಅವರಿಗೆ ಅಲ್ಲಿಯೂ 'ಠೇಂಗಾ'! [ಕೈ ತಪ್ಪಿತು ಮಂಡ್ಯ ಟಿಕೆಟ್]

    ಇಷ್ಟಾದರೂ ಮಂಡ್ಯ ಲೋಕಸಭೆ ಕ್ಷೇತ್ರದಿಂದ ನಿಂತೇ ನಿಲ್ಲುತ್ತೇನೆ ಎಂದು ಅವರು ಮತ್ತು ಅವರ ಗಂಡ ನಿರ್ದೇಶಕ ಪ್ರೇಮ್ ಘಂಟಾಘೋಷಿಸುತ್ತಿದ್ದಾರೆ. ರಮ್ಯಾ ವಿರುದ್ಧ ಸ್ಪರ್ಧಿಸುವ ಮಟೀರಿಯಲ್ಲೇ ಅಲ್ಲ ಎಂದರಿತಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿ ಇದರ ಬಗ್ಗೆ ಚಕಾರವೆತ್ತುತ್ತಿಲ್ಲ. ತ್ರಿಶಂಕು ಸ್ಥಿತಿಯಲ್ಲಿರುವ ಅವರಿಗೆ ಆಶ್ವಾಸನೆ ಬಂದಿದ್ದು ಎಲ್ಲಿಂದ ಗೊತ್ತಾ? ಅಸ್ತಿತ್ವದಲ್ಲಿರಲು ಒದ್ದಾಡುತ್ತಿರುವ ಕೆಜೆಪಿಯಿಂದ!

    ಈ ಆಫರನ್ನು ರಕ್ಷಿತಾ ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ಅವರಿಗೆ ಜೆಡಿಎಸ್ ಅಥವಾ ಮತ್ತಾವುದೋ ಪಕ್ಷದಿಂದ ಲೋಕಸಭೆಗೆ ಟಿಕೆಟ್ ಸಿಗುತ್ತೋ ಇಲ್ಲವೋ ತಿಳಿದಿಲ್ಲ. ಆದರೆ, ನಮ್ಮ ಓದುಗರು ಮಾತ್ರ, ಅವರು ಆಈ ಪಕ್ಷಗಳಿಂದ ಚುನಾವಣೆಗೆ ಸ್ಪರ್ಧಿಸುವುದಿರಲಿ, ರಾಜಕೀಯಕ್ಕೆ ಕಾಲಿಡುವುದೇ ಬೇಡ, ಅಡುಗೆಮನೆಯಲ್ಲಿ ಆರಾಮವಾಗಿ ಅಡುಗೆ ಮಾಡಿಕೊಂಡಿರಲಿ ಎಂದು ಎಂದು ಒಕ್ಕೊರಲಿನಿಂದ ಕೂಗಿದ್ದಾರೆ. [ರಕ್ಷಿತಾ ಬಿಎಸ್ಆರ್ ತೊರೆದಿದ್ದೇತಕ್ಕೆ?]

    "ರಕ್ಷಿತಾಗೆ ಯಾವ ಪಕ್ಷದಿಂದ ಟಿಕೆಟ್ ಸಿಗಲಿದೆ?" ಎಂದು ಕೇಳಿದ ಪ್ರಶ್ನೆಗೆ ಹೆಚ್ಚೂಕಡಿಮೆ ಬಿದ್ದಿರುವ 3 ಸಾವಿರ ಮತಗಳಲ್ಲಿ ಶೇ.71ರಷ್ಟು ಜನರು ಅವರು ರಾಜಕೀಯಕ್ಕೇ ಬರುವುದು ಬೇಡ ಎಂಬ ಬಟನ್ ಒತ್ತಿದ್ದಾರೆ. ಇಂದು ಅಕ್ಷರಶಃ 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದ ಪೋಸ್ಟರ್ ನಲ್ಲಿದ್ದ ಭೂಮಿಯಂತೆ ದುಂಡಗಾಗಿರುವ ರಕ್ಷಿತಾ ಬಗ್ಗೆ ಜನರೇನನ್ನುತ್ತಾರೆ ಇಲ್ಲಿ ಓದಿರಿ. ರಕ್ಷಿತಾ ಮುಂದೆ ಏನು ಮಾಡಲಿದ್ದಾರೆ ನೀವು ಹೇಳಿರಿ.

    ಪಕ್ಷದಿಂದ ಪಕ್ಷಕ್ಕೆ ಜಿಗಿಯುವವರನ್ನು ನಂಬಬಾರದು

    ಪಕ್ಷದಿಂದ ಪಕ್ಷಕ್ಕೆ ಜಿಗಿಯುವವರನ್ನು ನಂಬಬಾರದು

    ಪಕ್ಷದಿಂದ ಪಕ್ಷಕ್ಕೆ ಜಿಗಿಯುವವರನ್ನು ನಂಬಬಾರದು ಅದಕ್ಕೆ ಇವರು ರಾಜಕೀಯಕ್ಕೆ ಬರುವುದು ಬೇಡ..
    ಖುಷಿ

    ಸಾಕು ಮೂವಿ ಮಾಡ್ಕೊಂಡು ಇದ್ದು ಬಿಡಮ್ಮ ರಕ್ಷಿತಾ

    ಸಾಕು ಮೂವಿ ಮಾಡ್ಕೊಂಡು ಇದ್ದು ಬಿಡಮ್ಮ ರಕ್ಷಿತಾ

    ಸಾಕು ಮೂವಿ ಮಾಡ್ಕೊಂಡು ಇದ್ದು ಬಿಡಮ್ಮ ರಕ್ಷಿತಾ... ರಾಜಕೀಯದಲ್ಲಿ ಕಡಿದು ಗುಡ್ಡೆ ಹಾಕೋದು ಅಷ್ಟರಲ್ಲೇ ಇದೆ.
    ಋಷಿಕೇಶ

    ಇನ್ನಷ್ಟು ಮಕ್ಕಳನ್ನು ಹೆರಬಹುದು ರಾಜಕೀಯಕ್ಕೆ ಬೇಡಾ

    ಇನ್ನಷ್ಟು ಮಕ್ಕಳನ್ನು ಹೆರಬಹುದು ರಾಜಕೀಯಕ್ಕೆ ಬೇಡಾ

    ಇವಳು ಪ್ರೇಮ್ ಜೊತೆಗಿದ್ದು ಅವರಿಗಾಗಿ ಇನ್ನಷ್ಟು ಮಕ್ಕಳನ್ನು ಹೆರಬಹುದು.... ರಾಜಕೀಯಕ್ಕೆ ಬೇಡಾ....
    ಸುಭಾಶ್

    ಹೊಲಸು ರಾಜಕೀಯ ನಿಮಗೆ ಬೇಕಾ ರಕ್ಷಿತಾ?

    ಹೊಲಸು ರಾಜಕೀಯ ನಿಮಗೆ ಬೇಕಾ ರಕ್ಷಿತಾ?

    ರಾಜಕೀಯಕ್ಕೆ ತಲೇನೇ ಹಾಕಬೇಡಿ. ಪ್ರೇಮ್ ರವರಿಗೆ ಇನ್ನಷ್ಟು ಹೊಸ ಐಡಿಯಾ ಕೊಡಿ, ಕನ್ನಡ ಚಲನಚಿತ್ರದಲ್ಲಿ ಉತ್ತುಂಗಕ್ಕೆ ಏರಲಿ. ದರಿದ್ರ ರಾಜಕೀಯ ನಿಮಗೆ ಯಾಕೆ? ಅಂಬಿ ಅಣ್ಣನಿಗೆ ಸಾಕಾಗಿದೆ ಈ ಕಿತ್ತೋಗಿರೋ ರಾಜಕೀಯ ಕಂಡು. ಈಗ ನಿಮಗಿರೋ ಗೌರವ ಕೂಡ ಹಾಳಾಗುತ್ತೆ ನೀವು ರಾಜಕೀಯಕ್ಕೆ ಬಂದರೆ ಹೊಲಸು ರಾಜಕೀಯ ನಿಮಗೆ ಬೇಕಾ?
    ಜಗದೀಶ್ ಸಿಕೆ

    ಮನೇಲಿ ಪ್ರೇಮ್ಗೆ ಅಡುಗೆ ಬೇಯಿಸಿ ಹಾಕಲಿ

    ಮನೇಲಿ ಪ್ರೇಮ್ಗೆ ಅಡುಗೆ ಬೇಯಿಸಿ ಹಾಕಲಿ

    ಸುಮ್ಮನೆ ಮನೇಲಿ ಕೂತ್ಕೊಂಡು ಪ್ರೇಮ್ಗೆ ಅಡುಗೆ ಬೇಯಿಸಿ ಹಾಕಲಿ. ಇವಳಿಗೆ ರಾಜಕೀಯ ಏನ್ ಗೊತ್ತು?
    ಅನಾಮಿಕ

    ನೀವೆಲ್ಲ ರಾಜಕೀಯಕ್ಕೆ ಬಂದು ಏನು ಮಾಡಕ್ಕಿದೆ?

    ನೀವೆಲ್ಲ ರಾಜಕೀಯಕ್ಕೆ ಬಂದು ಏನು ಮಾಡಕ್ಕಿದೆ?

    ನೆಟ್ಟಗೆ ನಡೆಯೋಕೆ ಬರಲ್ಲ... ನೀವೆಲ್ಲ ರಾಜಕೀಯಕ್ಕೆ ಬಂದು ಏನು ಮಾಡಕ್ಕಿದೆ?
    ಎನ್ಕೆ

    English summary
    What should actress Rakshita do now? Should she contest in Lok Sabha Election 2014 from some party and serve people? Or should she stay at home helping her husband Prem in his movie productions? Oneindia readers say Rakshita should not venture into politics at all.
    Monday, March 3, 2014, 15:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X