twitter
    For Quick Alerts
    ALLOW NOTIFICATIONS  
    For Daily Alerts

    ಬಾಕ್ಸಾಫೀಸ್ : ಮಾಣಿಕ್ಯ ಲಾಭದ ಲೆಕ್ಕಾಚಾರ ಶುರು

    By ಜೇಮ್ಸ್ ಮಾರ್ಟಿನ್
    |

    ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಎನಿಸಿದ್ದ 'ಮಾಣಿಕ್ಯ' ಅದ್ದೂರಿಯಾಗಿ ಬೆಳ್ಳಿ ತೆರೆಗೆ ಬಂದಿದ್ದಲ್ಲದೆ ಭರ್ಜರಿ ಓಪನಿಂಗ್ ಮೂಲಕ ಹೊಸ ಭರವಸೆ ಮೂಡಿಸಿದೆ. ಚಾಲೆಜಿಂಗ್ ಸ್ಟಾರ್ ದರ್ಶನ್ ಅವರ 'ಸಂಗೊಳ್ಳಿ ರಾಯಣ್ಣ' ಚಿತ್ರದ ನಂತರ ಭಾರಿ ಬಜೆಟ್ ನ ಚಿತ್ರವೊಂದು ಪ್ರೇಕ್ಷಕರ ಮನ ಗೆದ್ದು ನಿರ್ಮಾಪಕರ ಮೊಗದಲ್ಲಿ ನಗೆ ಉಕ್ಕಿಸಿದೆ.

    ಕಿಚ್ಚ ಸುದೀಪ್ ಹಾಡಿ ಹೊಗಳುವ ಟೈಟಲ್ ಟ್ರ್ಯಾಕ್ ನಲ್ಲಿ ಕುಣಿದಾಡಿದ್ದ ದ್ವಾರಕೀಶ್ ಹಾಗೂ ಅವರ ಮಗ ಯೋಗೇಶ್ ಅವರು ಈಗ ಇನ್ನೂ ಹೆಚ್ಚಿನ ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದಾರೆ. ಒಟ್ಟಾರೆ, ಭಾರಿ ಬಜೆಟ್ ಚಿತ್ರ ತೆಗೆದು ಗೆಲ್ಲಬಹುದು ಎಂಬ ಆತ್ಮವಿಶ್ವಾಸವನ್ನು ಚಿತ್ರ ನಿರ್ಮಾಪಕರಲ್ಲಿ ತುಂಬುವಲ್ಲಿ ನಿರ್ದೇಶಕ ಕಿಚ್ಚ ಸುದೀಪ್ ಯಶಸ್ವಿಯಾಗಿದ್ದಾರೆ. [ಮಾಣಿಕ್ಯಚಿತ್ರ ವಿಮರ್ಶೆ ಓದಿ]

    ತೆಲುಗಿನ ಮಿರ್ಚಿ ಚಿತ್ರದ ರಿಮೇಕ್ 'ಮಾಣಿಕ್ಯ' ಎಂಬುದು ಎಲ್ಲರಿಗೂ ಗೊತ್ತಿದ್ದ ಸಂಗತಿ. ಆದರೆ, ಸುದೀಪ್ ಅವರು ಈ ಚಿತ್ರದಲ್ಲಿ ತಮ್ಮತನ ಮೆರೆದು ಕನ್ನಡ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಮುಖ ಮಾಡುವಲ್ಲಿ ಸಫಲರಾಗಿದ್ದಾರೆ. ಹೀಗಾಗಿ, ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಮಾಣಿಕ್ಯ ಬಾಕ್ಸಾಫೀಸ್ ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಚಿತ್ರದ ಅಸಲು ಜೋಳಿಗೆ ತುಂಬಿದ್ದು ಲಾಭದ ಲೆಕ್ಕಾಚಾರ ಶುರುವಾಗಿದೆ.. ಮಾಣಿಕ್ಯ ಸಕ್ಸಸ್ ಗೆ ಕಾರಣವಾದ ಅಂಶಗಳೇನು ಮುಂದೆ ಓದಿ...

    ಕಿಚ್ಚ ಸುದೀಪ್ ಮಾಣಿಕ್ಯ ಗಳಿಕೆ ವಿವರ ಹೀಗಿದೆ

    ಕಿಚ್ಚ ಸುದೀಪ್ ಮಾಣಿಕ್ಯ ಗಳಿಕೆ ವಿವರ ಹೀಗಿದೆ

    ಮಾಣಿಕ್ಯ ಚಿತ್ರ ಮೇ.1 ರ ಕಾರ್ಮಿಕ ದಿನಾಚರಣೆ ದಿನ ಬಿಡುಗಡೆಯಾಗಿದ್ದು, ಮೊದಲ ದಿನವೇ 3 ಕೋಟಿ ರು ಗಳಿಸಿ ಹೊಸ ದಾಖಲೆ ಬರೆದಿದೆ. ಎಲ್ಲೆಡೆ ತುಂಬಿಕ ಗೃಹ ಪ್ರದರ್ಶನ ಕಾಣುತ್ತಾ 10 ಕೋಟಿ ರು ಗಳಿಕೆ ಕ್ಲಬ್ ಸೇರಿದೆ. ಮೊದಲ ವಾರದ ನಂತರ ಚಿತ್ರ ಬಂಡವಾಳದ ಮೊತ್ತ 16 ಕೋಟಿ ರು ಮೀರಿ ಮುನ್ನುಗ್ಗುತ್ತಿರುವ ಸುದ್ದಿ ಸಿಕ್ಕಿದೆ. ಇದನ್ನು ಸ್ವತಃ ಕಾರ್ಯಕಾರಿ ನಿರ್ಮಾಪಕರಲ್ಲಿ ಒಬ್ಬರಾದ ಯೋಗೇಶ್ ದ್ವಾರಕೀಶ್ ಅವರು ಖಚಿತಪಡಿಸಿದ್ದಾರೆ.

    ಮೊದಲ ದಿನವೇ ಯಶಸ್ಸಿನ ಬಾಗಿಲು ತೆರೆಯಿತು

    ಮೊದಲ ದಿನವೇ ಯಶಸ್ಸಿನ ಬಾಗಿಲು ತೆರೆಯಿತು

    ಮಲ್ಟಿಪೆಕ್ಸ್ ಚಿತ್ರಮಂದಿರಗಳ ಷೇರ್ ಗಳಲ್ಲದೆ, ವಿವಿಧ ಜಿಲ್ಲೆಗಳ ಚಿತ್ರಮಂದಿರಗಳಲ್ಲು ಮೊದಲ ದಿನ ಭರ್ಜರಿ ಗಳಿಕೆ ಕಂಡು ಬಂದಿದೆ. ಮೊದಲ ದಿನವೇ 8 ಲಕ್ಷ ಸಿನಿಮಾ ಟಿಕೆಟ್ ಮಾರಾಟವಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಎನ್ನಬಹುದು.

    ಕನ್ನಡ ಅತಿದೊಡ್ಡ ಬಜೆಟ್ ಚಿತ್ರ

    ಕನ್ನಡ ಅತಿದೊಡ್ಡ ಬಜೆಟ್ ಚಿತ್ರ

    ದರ್ಶನ್ ಹಾಗೂ ಆನಂದ್ ಅಪ್ಪುಗೊಳ್ ಕಾಂಬಿನೇಷನ್ ನಲ್ಲಿ ಬಂದ ಸಂಗೊಳ್ಳಿ ರಾಯಣ್ಣ ಯಶಸ್ವಿ ಚಿತ್ರದ ನಂತರ ಸುದೀಪ್ ಅವರ ಮಾಣಿಕ್ಯ ಚಿತ್ರ 18 ಕೋಟಿ ರು ಬಂಡವಾಳ ಹೂಡಿಕೆಯೊಂದಿಗೆ ಅತ್ಯಂತ ಶ್ರೀಮಂತವಾದ ಸೆಟ್ ಗಳಿಂದ ಪ್ರೇಕ್ಷಕರನ್ನು ರಂಜಿಸಿದೆ.

    10 ಕೋಟಿ ರು ಕ್ಲಬ್ ಸೇರಲು ಕಾರಣ

    10 ಕೋಟಿ ರು ಕ್ಲಬ್ ಸೇರಲು ಕಾರಣ

    10 ಕೋಟಿ ರು ಕ್ಲಬ್ ಸೇರಲು ಮುಖ್ಯ ಕಾರಣ ಸುದೀಪ್ ಹಾಗೂ ರವಿಚಂದ್ರನ್ ಕಾಂಬಿನೇಷನ್. ಮೊಟ್ಟ ಮೊದಲ ಬಾರಿಗೆ ಕನಸುಗಾರ ವೀರಸ್ವಾಮಿ ರವಿಚಂದ್ರನ್ ಅವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸುದೀಪ್ ಅವರು ರವಿ ಅವರಿಗೆ ನಿರ್ದೇಶನ ಮಾಡಿದ್ದು, ಅಪ್ಪ ಮಗನಾಗಿ ಈ ಜೋಡಿ ತೆರೆಯಲ್ಲಿ ಕಾಣಿಸಿಕೊಂಡ ರೀತಿ ಸಿನಿರಸಿಕರ ಹೃದಯ ತಟ್ಟಿದ್ದು, ಬಾಕ್ಸಾಫೀಸ್ ನಲ್ಲಿ ಹಣ ಸುರಿಯುವಂತೆ ಮಾಡಿದೆ.

    ಬೇರೆ ಚಿತ್ರಗಳ ಸ್ಪರ್ಧೆ ಇರಲಿಲ್ಲ

    ಬೇರೆ ಚಿತ್ರಗಳ ಸ್ಪರ್ಧೆ ಇರಲಿಲ್ಲ

    ಮೇ.1 ರ ಕಾರ್ಮಿಕ ದಿನಾಚರಣೆ ಜತೆ ವಾರಾಂತ್ಯದ ರಜೆ ಮಾಣಿಕ್ಯ ಚಿತ್ರದ ಕೈ ಹಿಡಿಯಿತು. ಬೇರೆ ಕನ್ನಡ ಚಿತ್ರಗಳಾಗಲಿ, ಪರ ಭಾಷೆ ಚಿತ್ರಗಳಾಗಲಿ ಸ್ಪರ್ಧೆ ಒಡ್ಡಲಿಲ್ಲ. ಹೀಗಾಗಿ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಕಿಚ್ಚ ಸುದೀಪ್ ಚಿತ್ರ ಯಶಸ್ವಿ ಪ್ರದರ್ಶನ ಕಾಣಲು ಸಾಧ್ಯವಾಯಿತು.

    ಇದರ ಜತೆಗೆ ಚಿತ್ರದ ಬಗ್ಗೆ ಬಂದ ಜನಾಭಿಪ್ರಾಯ ಹಾಗೂ ವಿಮರ್ಶಕರ ಹಿತನುಡಿಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸಿತು.

    English summary
    There seems to be no stopping for Box Office King Kiccha Sudeep as his recent offering Maanikya has got a grand opening across the state. The film, which is the remake of Telugu hit Mirchi was released on Thursday (May 1) and it is looting the Box Office.
    Thursday, May 8, 2014, 15:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X