Englishবাংলাગુજરાતીहिन्दीമലയാളംதமிழ்తెలుగు

ಕನ್ನಡ ಚಿತ್ರೋದ್ಯಮದ ಹುಬ್ಬೇರಿಸಿದೆ 'ಉಗ್ರಂ' ಕಲೆಕ್ಷನ್

Posted by:
Updated: Thursday, March 6, 2014, 17:45 [IST]
 

ಶ್ರೀಮುರಳಿ ಅಭಿನಯದ ಉಗ್ರಂ ಚಿತ್ರದ ಕಲೆಕ್ಷನ್ ಕನ್ನಡ ಚಿತ್ರೋದ್ಯಮದ ಹುಬ್ಬೇರಿಸಿದೆ. ಮೊದಲ ಒಂಬತ್ತು ದಿನಗಳ ಕಲೆಕ್ಷನ್ ನೋಡಿದರೆ ಪರಭಾಷಾ ಚಿತ್ರಗಳೂ ಮೂಗಿನ ಮೇಲೆ ಬೆರಳಿಡುವಂತಿದೆ. ಚಿತ್ರ ಮೊದಲ ವಾರದಲ್ಲೇ ₹ 5.50 ಕೋಟಿ ಕಲೆಕ್ಷನ್ ಮಾಡಿದೆ.

ಈ ಚಿತ್ರಕ್ಕೆ ಎಲ್ಲೆಡೆಯಿಂದಲೂ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಬಗ್ಗೆ ನಟ ಶ್ರೀಮುರಳಿ ಅವರ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ. ಇತ್ತೀಚೆಗೆ ನಡೆದ ಸಕ್ಸಸ್ ಮೀಟ್ ನಲ್ಲಿ ಚಿತ್ರದ ವಿತರಕ ತೂಗುದೀಪ ಡಿಸ್ಟ್ರಿಬ್ಯೂಷನ್ಸ್ ನ ಮಲ್ಲಿಕಾರ್ಜುನ್ ಅವರು ಈ ವಿಷಯನ್ನು ಬಹಿರಂಗಪಡಿಸಿದರು. [ಉಗ್ರಂ ಚಿತ್ರವಿಮರ್ಶೆ]


ತೂಗುದೀಪ ಡಿಸ್ಟ್ರಿಬ್ಯೂಷನ್ಸ್ ವಿತರಣೆಯ ಮೊದಲ ಚಿತ್ರ ಇದಾಗಿದೆ. ಅವರ ವಿತರಣೆಯ ಮೊದಲ ಚಿತ್ರವೇ ಬಾಕ್ಸ್ ಆಫೀಸಲ್ಲಿ ಸಾಕಷ್ಟು ಸದ್ದು ಮಾಡಿರುವುದು ಖುಷಿಯ ಸಂಗತಿ. ರಿಲೀಸಾದ 142 ಥಿಯೇಟರ್ ಗಳಲ್ಲೂ ಭರ್ಜರಿ ಕಲೆಕ್ಷನ್ನೊಂದಿಗೆ ಮುಂದುವರೆದಿದೆ.

ಚಿತ್ರದ ಮೇಕಿಂಗ್, ಶ್ರೀಮುರಳಿ ಅಭಿನಯದ ಬಗ್ಗೆ ಎಲ್ಲೆಡೆಯಿಂದ ಬರುತ್ತಿರುವ ಮೆಚ್ಚುಗೆಗೆ ಶ್ರೀಮುರಳಿ ಬೆರಗಾಗಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಅವರು ಧನ್ಯವಾದಗಳನ್ನು ತಿಳಿಸಿದರು. ಸೈಲೆಂಟ್ ಸ್ಟಾರ್ ಶ್ರೀಮುರಳಿ ಅವರು 'ಉಗ್ರಂ' ಸಿನಿಮಾದಲ್ಲಿ ಉಗ್ರರೂಪಿಯಾಗ್ತಾರೆ.

ಚಿತ್ರದ ಕ್ಯಾಮೆರಾ ನಿಮಗೆ ಮೋಡಿ ಮಾಡದೇ ಇರೋದಿಲ್ಲ. ಪ್ರಶಾಂತ್ ನೀಲ್ ಅನ್ನೋ ನಿರ್ದೇಶಕ ನಿದ್ರೆ ಬಿಟ್ಟು ಕೆಲಸ ಮಾಡಿರೋದಕ್ಕೆ ಚಿತ್ರತಂಡ ಈಗ ಸಂಭ್ರಮದಲ್ಲಿದೆ. [ತೆಲುಗು, ತಮಿಳು ಸ್ಟಾರ್ ಗಳ ನಿದ್ದೆಗೆಡಿಸಿರುವ 'ಉಗ್ರಂ']

2004ರಲ್ಲಿ ಬಂದ 'ಕಂಠಿ' ಸಿನಿಮಾ ನಂತರ ಒಂದೂ ಅದ್ಭುತ ಅನ್ನಿಸೋ ಸಿನಿಮಾ ಕೊಡದ ಮುರಳಿ ಈಗ ಅಂದುಕೊಂಡಿದ್ದನ್ನ ಸಾಧಿಸಿದ್ದಾರೆ. ಒಳ್ಳೆಯ ಸಿನಿಮಾ ಈಗ ಯಶಸ್ವಿಯಾಗಿ ಮುನ್ನುಗ್ಗೋ ಜೊತೆಗೆ ಚಿತ್ರತಂಡಕ್ಕೆ ರಾಜ್ಯಾದ್ಯಂತ ಸುತ್ತಾಡಿ ಚಿತ್ರದ ಪ್ರಚಾರ ನಡೆಸುವ ಜೋಷ್ ತಂದುಕೊಟ್ಟಿದೆ. (ಏಜೆನ್ಸೀಸ್)

Story first published:  Thursday, March 6, 2014, 11:15 [IST]
English summary
Sri Murali starter Kannada action flick Ugramm box office report. The movie collected ₹ 5.5 crores in the first week of release. The movie directed by Prashanth Neel, stars Sri Murali and Haripriya as the lead pair.
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter