twitter
    For Quick Alerts
    ALLOW NOTIFICATIONS  
    For Daily Alerts

    ಈ ವಾರ ಬಾಸು ಮತ್ತೆ ಅದೇ ಹಳೇ ಕಥೆ ರಿಪೀಟ್

    By ರವಿಕಿಶೋರ್
    |

    ಈ ವರಮಹಾಲಕ್ಷ್ಮಿ ಹಬ್ಬಕ್ಕೆ (ಆ.8) ಯಾವ್ಯಾವ ಕನ್ನಡ ಚಿತ್ರಗಳು ತೆರೆಗೆ ಅಪ್ಪಳಿಸುತ್ತಿವೆ ಎಂದು ಒಮ್ಮೆ ಕಣ್ಣಾಡಿಸೋಣ ಬನ್ನಿ. ಕಳೆದ ಕೆಲ ವಾರಗಳಿಂದ ಒಂದೊಂದೇ ಚಿತ್ರ ಬಿಡುಗಡೆಯಾಗುತ್ತಿತ್ತು. ಆದರೆ ಈ ವಾರ ಬಾಸು ಮತ್ತೆ ಅದೇ ಹಳೇ ಕಥೆ ರಿಪೀಟ್ ಆಗುತ್ತಿದೆ.

    ಈ ಬಾರಿ ಎರಡು ವೈಟು ಮತ್ತು ಒಂದು ರೆಡ್ ಎಂಬ ಅಡಿಬರಹದ 'ಪಂಗನಾಮ' ಚಿತ್ರದ ಜೊತೆಗೆ ಇನ್ನೆರಡು ಚಿತ್ರಗಳು ಪ್ರೇಕ್ಷಕರನ್ನು ರಂಜಿಸಲು ಬರುತ್ತಿವೆ. ಮೂರೂ ಚಿತ್ರಗಳು ಒಂದಕ್ಕೊಂದು ಭಿನ್ನ ಎಂಬುದು ವಿಶೇಷ. ಎಲ್ಲವೂ ಹೊಸಬರ ಹೊಸ ಪ್ರಯೋಗಗಳೇ. ['ಪಂಗನಾಮ' ಎರಡು ವೈಟು ಒಂದು ರೆಡ್ಡು ವಿವಾದ]

    ಪಂಗನಾಮ, ಬಾಸು ಅದೇ ಹಳೇ ಕಥೆ ಹಾಗೂ ನೂರನಲವತ್ತಮೂರು 143 ಚಿತ್ರಗಳು ಈ ವಾರ ಪ್ರೇಕ್ಷಕರ ಮುಂದೆ ಬರುತ್ತಿವೆ. ವರಮಹಾಲಕ್ಷ್ಮಿ ಹಬ್ಬದ ದಿನ ಈ ಚಿತ್ರಗಳು ತೆರೆಕಾಣುತ್ತಿರುವ ಕಾರಣ ಲಕ್ಷ್ಮಿ ಕೈಹಿಡಿಯುತ್ತಾಳೋ ಅಥವಾ ಪ್ರೇಕ್ಷಕರ ಪ್ರಭುಗಳು 'ಪಂಗನಾಮ' ಹಾಕುತ್ತಾರೋ ಎಂಬುದನ್ನು ಕಾಲವೇ ನಿರ್ಧರಿಸಲಿದೆ.

    ಈ ವಾರ ತೆರೆಗೆ ಬರುತ್ತಿರುವ ಪಂಗನಾಮ

    ಈ ವಾರ ತೆರೆಗೆ ಬರುತ್ತಿರುವ ಪಂಗನಾಮ

    ಎಂಟರ್ ಟೈನ್ಮೆಂಟ್ ಗುರು ಲಾಂಛನದಲ್ಲಿ ಕಥೆ-ಚಿತ್ರಕಥೆ ಬರೆದು ನಿರ್ಮಾಣದೊಂದಿಗೆ ನಿರ್ದೇಶನ ನೀಡಿರುವ ಗುರು ಅವರ 'ಪಂಗನಾಮ' ಚಿತ್ರವು ಈ ವಾರ ಬಿಡುಗಡೆ. ಚಿತ್ರದ ಛಾಯಾಗ್ರಹಣ- ಕೆ.ಎಂ. ವಿಷ್ಣುವರ್ಧನ್, ಸಂಗೀತ-ಆದಿತ್ಯ ಪಂಡಿತ್-ಸಾಧುಕೋಕಿಲ, ಸಂಕಲನ-ನಾಗೇಂದ್ರ ಅರಸ್, ನೃತ್ಯ-ಸದಾ-ರಘು, ಸಾಹಸ-ವೆಂಕಟ್, ನಿರ್ವಹಣೆ-ಸೋಮಶೇಖರ್, ತಾರಾಗಣದಲ್ಲಿ- ಗುರು, ಸಂಜನಾ ಪ್ರಕಾಶ್, ಸಾಧುಕೋಕಿಲ, ದೊಡ್ಡಣ್ಣ, ಸುಂದರ್‍ರಾಜ್, ಕುರಿ ಪ್ರತಾಪ್, ಬಿರಾದರ್, ಉಮೇಶ್, ಪದ್ಮಜಾ ರಾವ್, ಲಿಟಿ ಆಚಾರ್ಯ, ಮುಂತಾದವರಿದ್ದಾರೆ.

    ಬಾಸು ಅದೇ ಹಳೇ ಕಥೆ ಈ ವಾರ ತೆರೆಗೆ

    ಬಾಸು ಅದೇ ಹಳೇ ಕಥೆ ಈ ವಾರ ತೆರೆಗೆ

    ಉತ್ಸಾಹಿ ಯುವಕ ಶಾನ್, ಹಿರಿಯ ನಿರ್ದೇಶಕ ಎ ಆರ್ ಬಾಬು ಪುತ್ರ ಅವರ ಚೊಚ್ಚಲ ನಿರ್ದೇಶನದ ಚಿತ್ರ `ಬಾಸು ಅದೇ ಹಳೆ ಕಥೆ' ಈ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಮಂಡಳಿ ಇಂದ 'ಯು-ಎ' ಅರ್ಹತಾ ಪತ್ರವನ್ನು ಪಡೆದು ಈ ಚಿತ್ರವು ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ಉತ್ಸಾಹದಲ್ಲಿದೆ.

    3 ನಿಮಿಷದಲ್ಲೆ ಚಿತ್ರದ ಕಥೆ ಹೇಳಿ ಮುಗಿಸಿರುತ್ತಾರೆ

    3 ನಿಮಿಷದಲ್ಲೆ ಚಿತ್ರದ ಕಥೆ ಹೇಳಿ ಮುಗಿಸಿರುತ್ತಾರೆ

    ಶ್ರೀಸಾಸ್ಥ ಮೂವಿ ಮೇಕರ್ ಅಡಿಯಲ್ಲಿ ಸುಧೀರ್ ಗೌಡ ಅವರು ತಯಾರಿಸಿರುವ ಮೊದಲ ಚಿತ್ರವಿದು. ಏಳು ನಿಮಿಷ ತೆರೆಯ ಮೇಲೆ ಯಾರು ಕಾಣಿಸಿಕೊಳ್ಳುವುದಿಲ್ಲ. 3 ನಿಮಿಷದಲ್ಲೆ ಚಿತ್ರದ ಕಥೆ ಹೇಳಿ ಮುಗಿಸಿರುತ್ತಾರೆ ನಿರ್ದೇಶಕ ಹಾಗೂ ಚಿತ್ರದ ನಟರು ಆಗಿರುವ ಶಾನ್. ಇದಾದ ಮೇಲೆ ಎರಡು ಗಂಟೆ ಕಥೆಯ ಓಟ ನೀವು ನೋಡಬಹುದು.

    ಭಿನ್ನ ಪಾತ್ರದಲ್ಲಿ ಶೋಭಿನಾ

    ಭಿನ್ನ ಪಾತ್ರದಲ್ಲಿ ಶೋಭಿನಾ

    ನಾಯಕಿ ಶೋಭಿನಾ ಅವರು ಈ ಹಿಂದೆ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿ ಆರ್ ಬಾಬ್ಬಿ ಅವರು ಎರಡು ಹಾಡುಗಳ ರಾಗ ಸಂಯೋಜನೆ ಮಾಡಿದ್ದಾರೆ. ಅದರಲ್ಲಿ ಒಂದು ಹಾಡನ್ನು ಕೆ ಜೆ ಯೇಸುದಾಸ್ ಅವರು ಹಾಡಿದ್ದಾರೆ. ಗಣೇಶ್ ಈ ಚಿತ್ರದ ಛಾಯಾಗ್ರಾಹಕರು.

    ಈ ವಾರ ತೆರೆಗೆ ಬರುತ್ತಿರುಬ ಭಿನ್ನ ಚಿತ್ರ '143'

    ಈ ವಾರ ತೆರೆಗೆ ಬರುತ್ತಿರುಬ ಭಿನ್ನ ಚಿತ್ರ '143'

    ಚಂದ್ರಕಾಂತ್ ಕಥೆ, ಚಿತ್ರಕಥೆ, ಸಂಭಾಷಣೆ, ಬರೆದು ಗೀತರಚನೆ ಮಾಡಿ ನಿರ್ದೇಶಿಸಿರುವ `143' ನೂರನಲವತ್ಮೂರು ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    ಡ್ರಮ್ಮರ್ ದೇವ ಅವರು ಹಿನ್ನಲ್ಲೆ ಸಂಗೀತ

    ಡ್ರಮ್ಮರ್ ದೇವ ಅವರು ಹಿನ್ನಲ್ಲೆ ಸಂಗೀತ

    ಚಿತ್ರದ ನಾಯಕರಾಗಿರುವ ಚಂದ್ರಕಾಂತ್ '143' ಸಿನಿಮಾದ ನಿರ್ಮಾಪಕರು ಕೂಡ. ಕವಿತಾ ಬಿಸ್ಟ್ ಈ ಚಿತ್ರದ ನಾಯಕಿ. ವಿನು ಮನಸು ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಡ್ರಮ್ಮರ್ ದೇವ ಅವರು ಹಿನ್ನಲ್ಲೆ ಸಂಗೀತ ನೀಡಿದ್ದಾರೆ. ರಾಜಶೇಖರ್(ತಿಮ್ಮಾಪುರ) ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ, ಚಾಮರಾಜ್, ಹೈಟ್ ಮಂಜು ಹಾಗೂ ರಂಜಿತ್ ನೃತ್ಯ ನಿರ್ದೇಶನ ಹಾಗೂ ಹೊನ್ನರಾಜ್ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.

    English summary
    Three Kannada movies are releasing on 8th August. Nooranalavatmuru by Chandrakanth, a Comedy based thriller Panganaama and Baasu Adhe Hale kathe by Shaan are releasing this Varamahalakshmi festival.
    Thursday, August 7, 2014, 18:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X