twitter
    For Quick Alerts
    ALLOW NOTIFICATIONS  
    For Daily Alerts

    ಜವಾಬ್ದಾರಿ ಮೆರೆದ ಕನ್ನಡ ಸಿನಿಮಾ ತಾರೆಗಳು

    By Rajendra
    |

    ಗುರುವಾರ (ಏ.17) ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆತನಕ ರಾಜ್ಯದಾದ್ಯಂತ ಬಿರುಸಿನ ಮತದಾನ ನಡೆಯುತ್ತಿದೆ. ಇಂದು ಮಧ್ಯಾಹ್ನದ ಸಮಯಕ್ಕೆ ಕನ್ನಡದ ಬಹುತೇಕ ತಾರೆಗಳು ತಮ್ಮ ಅಮೂಲ್ಯ ಮತವನ್ನು ಚಲಾಯಿಸಿದ್ದಾರೆ.

    ನೆನಪಿರಲ್ಲಿ ಇಂದು ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ ಒಟ್ಟು 12 ರಾಜ್ಯಗಳಲ್ಲಿ ಮತದಾನ ನಡೆಯುತ್ತಿದೆ. ಒಟ್ಟು 16.61 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. 121 ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

    ಬಹುತೇಕ ಸಿನಿಮಾ ತಾರೆಗಳು ಇಂದು ಮತ ಚಲಾಯಿಸಿದರು. ರಮ್ಯಾ, ದರ್ಶನ್, ದುನಿಯಾ ವಿಜಯ್, ಹರ್ಷಿಕಾ ಪೂಣಚ್ಚ, ಹರಿಪ್ರಿಯಾ, ಕೃತಿ ಖರಬಂದ, ಚಿರಂಜೀವಿ ಸರ್ಜಾ ಮುಂತಾದ ತಾರೆಗಳು ಮತ ಚಲಾಯಿಸಿ ತಮ್ಮ ಅಭಿಮಾನಿಗಳಿಗೂ ಮತ ಹಾಕುವಂತೆ ವಿನಂತಿಸಿದ್ದಾರೆ. ಬನ್ನಿ ಯಾರು ಮತ ಚಲಾಯಿಸಿ ಏನು ಹೇಳಿದ್ದಾರೆ ಎಂಬುದನ್ನು ನೋಡೋಣ.

    ಕಾಟಾಚಾರಕ್ಕೆ ಮತ ಚಲಾಯಿಸಬೇಡಿ

    ಕಾಟಾಚಾರಕ್ಕೆ ಮತ ಚಲಾಯಿಸಬೇಡಿ

    ಕಾಟಚಾರಕ್ಕೆ ಮತ ಚಲಾಯಿಸಬೇಡಿ..... ಅರ್ಹತೆ ಇಲ್ಲದವರಿಗೆ ಕಾಟಚಾರವಾಗುವಂತೆ , ಮತ ಚಲಾಯಿಸಿ.. ಮತ,,,,, ದಾನವಲ್ಲ...*ಜವಾಬ್ದಾರಿ* ಎಂದಿದ್ದಾರೆ ಸಿಂಪಲ್ ಸುನಿ.

    ಮಿಸ್ ಮಾಡದೆ ಮತದಾನ ಮಾಡಿ - ದರ್ಶನ್

    ಮಿಸ್ ಮಾಡದೆ ಮತದಾನ ಮಾಡಿ - ದರ್ಶನ್

    ಮೈ ಡಿಯರ್ ಫ್ಯಾನ್ಸ್ ಇಂದು ಬಹಳ ಮುಖ್ಯವಾದ ದಿನ. ಒಳ್ಳೆಯ ಅಭ್ಯರ್ಥಿಯನ್ನು ನಾವೆಲ್ಲಾ ಆಯ್ಕೆ ಮಾಡಬೇಕಾಗಿದೆ. ಭಾರತೀಯರ ಬಗ್ಗೆ ಕಾಳಜಿ, ಒಳ್ಳೆಯ ಧೋರಣೆ ಇರುವ ವ್ಯಕ್ತಿಗಳನ್ನು ಆಯ್ಕೆ ಮಾಡಿ. ಮಿಸ್ ಮಾಡದಂತೆ ಪ್ರತಿಯೊಬ್ಬರೂ ಓಟ್ ಮಾಡಿ ನಿಮ್ಮ ಪ್ರೀತಿಯ ದಾಸ ದರ್ಶನ್ ಎಂದು ಸಂದೇಶ ರವಾನಿಸಿದ್ದಾರೆ.

    ಇದು ನನ್ನ ಮೊದಲ ಮತದಾನ - ಹರಿಪ್ರಿಯಾ

    ಇದು ನನ್ನ ಮೊದಲ ಮತದಾನ - ಹರಿಪ್ರಿಯಾ

    ಹರಿಪ್ರಿಯಾ ಅವರಿಗೆ ಇದು ಚೊಚ್ಚಲ ಮತದಾನ. ಹಾಗಾಗಿ ಅವರು ಸಹಜವಾಗಿಯೇ ಖುಷಿಯಾಗಿದ್ದಾರೆ. ನಮ್ಮ ದೇಶಕ್ಕೆ ಯಾರು ಅತ್ಯುತ್ತಮ ಸೇವೆ ಸಲ್ಲಿಸುತ್ತಾರೋ ಅಂತಹವರಿಗೆ ಮತ ಹಾಕಿ ಎಂಬುದು ಹರಿಪ್ರಿಯಾ ಅವರ ಟ್ವಿಟ್ಟರ್ ಸಂದೇಶ.

    ಎಲ್ಲರೂ ಮತದಾನ ಮಾಡಿ ಜೈ ಹಿಂದ್ - ಶ್ರೀಮುರಳಿ

    ಎಲ್ಲರೂ ಮತದಾನ ಮಾಡಿ ಜೈ ಹಿಂದ್ - ಶ್ರೀಮುರಳಿ

    ನಾನು ನಮ್ಮ ಕುಟುಂಬಿಕರೊಂದಿಗೆ ಮತದಾನ ಮಾಡಿದ್ದೇನೆ. ನೀವೂ ಅಷ್ಟೇ ಮತದಾನ ಮಾಡುತ್ತೀರಿ ಎಂದು ಭಾವಿಸಿದ್ದೇನೆ. ಜವಾಬ್ದಾರಿಯುತ ನಾಗರೀಕರಾಗಿ ನೀವು ಓಟ್ ಮಾಡುತ್ತೀರಾ...ಜೈ ಹಿಂದ್ ಎಂದಿದ್ದಾರೆ ನಟ ಶ್ರೀಮುರಳಿ.

    ನಾನು ನನ್ನ ಜವಾಬ್ದಾರಿ ಪೂರೈಸಿದ್ದೇನೆ - ಚಿರು

    ನಾನು ನನ್ನ ಜವಾಬ್ದಾರಿ ಪೂರೈಸಿದ್ದೇನೆ - ಚಿರು

    ನಾನು ನನ್ನ ಜವಾಬ್ದಾರಿಯನ್ನು ಪೂರೈಸಿದ್ದೇನೆ. ಓಟ್ ಮಾಡಿ ಆಯಿತು. ನೀವೂ ಓಟ್ ಮಾಡಿ ಎಂದು ತಮ್ಮ ಅಭಿಮಾನಿಗಳನ್ನು ವಿನಂತಿಸಿಕೊಂಡಿದ್ದಾರೆ ನಟ ಚಿರಂಜೀವಿ ಸರ್ಜಾ.

    ಓಟ್ ಹಾಕಿದ್ದೇನೆ - ಮಾಳವಿಕಾ ಅವಿನಾಶ್

    ಓಟ್ ಹಾಕಿದ್ದೇನೆ - ಮಾಳವಿಕಾ ಅವಿನಾಶ್

    ಮಾಳವಿಕಾ ಅವಿನಾಶ್ ಅವರು ತುಂಬ ಸರಳವಾಗಿ ಓಟ್ ಹಾಕಿದ್ದೇನೆ ಎಂದು ಹೇಳಿದ್ದಾರೆ. ಯಾಕೆಂದರೆ ಬಿಜೆಪಿಯ ವಕ್ತಾರೆ ಆಗಿರುವ ಅವರ ಓಟು ಯಾರಿಗೆ ಯಾವ ಪಕ್ಷಕ್ಕೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇನ್ನು ನೀವೂ ಓಟು ಹಾಕಿ ಎಂದು ಕೇಳಿದರೂ ತಪ್ಪಾಗುತ್ತದೆ.

    ನಾನು ಓಟ್ ಹಾಕಿದೆ - ಕೃತಿ ಖರಬಂದ

    ನಾನು ಓಟ್ ಹಾಕಿದೆ - ಕೃತಿ ಖರಬಂದ

    ನಾನು ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ನೀವೂ ಎಂದು ಕೇಳಿದ್ದಾರೆ ಕ್ಯೂಟ್ ಬೆಡಗಿ ಕೃತಿ ಖರಬಂದ. ಚಿರು, ಗೂಗ್ಲಿ, ಪ್ರೇಮ್ ಅಡ್ಡ, ಗಲಾಟೆ ಚಿತ್ರಗಳ ಮೂಲಕ ಪ್ರೇಕ್ಷಕರ ಹೃದಯ ಕದ್ದ ಚೆಲುವೆ ಕೃತಿ ಖರಬಂಧ.

    ನಾನು ಓಟ್ ಮಾಡಿ ಆಯ್ತು, ನೀವು?

    ನಾನು ಓಟ್ ಮಾಡಿ ಆಯ್ತು, ನೀವು?

    ಹಾಗಂತ ಸಿಂಪಲ್ ಆಗಿ ಕೇಳಿದ್ದಾರೆ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಶ್ವೇತಾ ಶ್ರೀವಾತ್ಸವ್.

    ಶುಭಾ ಪೂಂಜಾ ಅವರು ಓಟ್ ಮಾಡಿದ್ದಾರೆ

    ಶುಭಾ ಪೂಂಜಾ ಅವರು ಓಟ್ ಮಾಡಿದ್ದಾರೆ

    ಇಂದು ಬೆಳಗ್ಗೆ ಮಾಡಿದ ಮೊದಲ ಕೆಲಸ ಅಂದರೆ ಮತದಾನ. ನೀವೂ ಅಷ್ಟೇ ಮತದಾನ ಮಾಡಿರುತ್ತೀರಾ ಎಂದು ನಂಬಿದ್ದೇನೆ ಎಂದಿದ್ದಾರೆ ಶುಭಾ ಪೂಂಜಾ.

    ಹೆಬ್ಬೆರಳಿಗೆ ತಿಲಕವಿಟ್ಟರು - ವಿಜಯ್ ರಾಘವೇಂದ್ರ

    ಹೆಬ್ಬೆರಳಿಗೆ ತಿಲಕವಿಟ್ಟರು - ವಿಜಯ್ ರಾಘವೇಂದ್ರ

    ಹೆಬ್ಬೆರಳಿಗೆ ತಿಲವಿಟ್ಟು ...ದೇಶಸ ಪ್ರಗತಿಗೆ ಯಾರು ತಿಲಕ ಇಡ್ತಾರೆ ನೋಡೋಣ ಎಂದಿದ್ದಾರೆ 'ಚಿನ್ನಾರಿ ಮುತ್ತ' ವಿಜಯ್ ರಾಘವೇಂದ್ರ.

    ಪ್ರಜಾಪ್ರಭುತ್ವಕ್ಕಾಗಿ ಓಟ್ ಮಾಡಿ - ಐಂದ್ರಿತಾ ರೇ

    ಪ್ರಜಾಪ್ರಭುತ್ವಕ್ಕಾಗಿ ಓಟ್ ಮಾಡಿ - ಐಂದ್ರಿತಾ ರೇ

    ಒಳ್ಳೆಯ ಜನ ಮತದಾನ ಮಾಡದೆ ಇರುವ ಕಾರಣ ಕೆಟ್ಟ ರಾಜಕಾರಣಿಗಳು ಸಂಸತ್ತಿಗೆ ಹೋಗುತ್ತಿದ್ದಾರೆ. ಉತ್ತಮ ಪ್ರಜಾಪ್ರಭುತ್ವಕ್ಕಾಗಿ ಓಟ್ ಮಾಡಿ. ನಾನು ಓಟ್ ಹಾಕಿದ್ದೇನೆ ನೀವು? ಎಂದು ಪ್ರಶ್ನಿಸಿದ್ದಾರೆ ಚಿಗರೆ ಕಂಗಳ ಬೆಡಗಿ ಐಂದ್ರಿತಾ ರೇ.

    ಕುಟುಂಬ ಸಮೇತ ಮತದಾನ ಮಾಡಿದ ಪ್ರಜ್ಜು

    ಕುಟುಂಬ ಸಮೇತ ಮತದಾನ ಮಾಡಿದ ಪ್ರಜ್ಜು

    ಮತದಾನ ನಿಮ್ಮ ಹಕ್ಕು ಹಾಗೂ ಸಾಮರ್ಥ್ಯ. ದಯವಿಟ್ಟು ಅದನ್ನು ಪೋಲು ಮಾಡಬೇಕು. ಜವಾಬ್ದಾರಿಯುತ ಪ್ರಜೆಗಳಾಗಿ ಉತ್ತಮ ನಾಯಕತ್ವ ಇರುವ ಅಭ್ಯರ್ಥಿಗೆ ನಿಮ್ಮ ಮತವನ್ನು ಹಾಕಿ. ಮತದಾನದ ಬಗ್ಗೆ ಅಸಡ್ಡೆ ಬೇಡ ಎಂದಿದ್ದಾರೆ ಡೈನಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್.

    ನಾನು ಓಟ್ ಹಾಕಿದ್ದೇನೆ ನೀವೂ?

    ನಾನು ಓಟ್ ಹಾಕಿದ್ದೇನೆ ನೀವೂ?

    ಈ ರೀತಿ ತಮ್ಮ ಅಭಿಮಾನಿಗಳನ್ನು ಪ್ರಶ್ನಿಸಿದ್ದಾರೆ ನಟಿ ಮೇಘನಾ ರಾಜ್.

    ನಮ್ಮ ಓಟು ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ

    ನಮ್ಮ ಓಟು ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ

    ಈ ರೀತಿ ಹೇಳಿರುವುದು ಬೇರಾರು ಅಲ್ಲ ಮಾಸ್ ಮಹಾರಾಜ ದುನಿಯಾ ವಿಜಯ್. ನಾನು ಓಟ್ ಮಾಡಿದ್ದೇನೆ, ನೀವು ನಿಮ್ಮ ಮತ ಚಲಾಯಿಸಿ ಎಂದಿದ್ದಾರೆ.

    ಹೋಗಿ ಈಗಲೇ ಓಟ್ ಮಾಡಿ - ಹರ್ಷಿಕಾ

    ಹೋಗಿ ಈಗಲೇ ಓಟ್ ಮಾಡಿ - ಹರ್ಷಿಕಾ

    ನಾನು ಓಟ್ ಮಾಡಿದ್ದೇನೆ... ತುಂಬಾ ಹೆಮ್ಮೆ ಅನ್ನಿಸುತ್ತಿದೆ. ನೀವೂ ಓಟ್ ಮಾಡಿ. ತಡಮಾಡಬೇಡಿ ಈಗಲೇ ಹೋಗಿ.

    English summary
    Sandalwood actresses like Ramya, Meghana Raj and Harshika Poonacha has casted their votes in Karnataka. The actresses has took their micro-blogging site Twitter to post their selfie.
    Thursday, April 17, 2014, 17:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X