Englishবাংলাગુજરાતીहिन्दीമലയാളംதமிழ்తెలుగు

ಪೂಜಾಗಾಂಧಿ 'ತಿಪ್ಪಜ್ಜಿ' ಚಿತ್ರಕ್ಕೆ ಕೋರ್ಟ್ ತಡೆಯಾಜ್ಞೆ

Posted by:
Updated: Monday, October 21, 2013, 18:07 [IST]
 

ಆರಂಭದಿಂದಲೂ ನೈಜ ಕಥೆ ಆಧಾರಿತ ಚಿತ್ರ ಎಂದೇ ಬಿಂಬಿಸಲಾಗುತ್ತಿರುವ ಚಿತ್ರ 'ತಿಪ್ಪಜ್ಜಿ ಸರ್ಕಲ್'. ಈ ಚಿತ್ರದಲ್ಲಿ ಪೂಜಾಗಾಂಧಿ ಪ್ರಮುಖ ಪಾತ್ರ ಪೋಷಿಸುತ್ತಿದ್ದಾರೆ. ಈಗಾಗಲೆ ಚಿತ್ರಕ್ಕೆ ಸಂಬಂಧಿಸಿದ ಸ್ಟಿಲ್ಸ್ ಸಹ ಬಿಡುಗಡೆಯಾಗಿವೆ. ಅಷ್ಟರಲ್ಲಾಗಲೆ ಚಿತ್ರಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ.

ಚಿತ್ರದುರ್ಗದ ಬಸವೇಶ್ವರ ವೃತ್ತದಲ್ಲಿ ಅಂಗಡಿ ಇಟ್ಟುಕೊಂಡು ಬಾಳಿ ಬದುಕಿದ ತಿಪ್ಪಜ್ಜಿಯ ಕಾರಣ ಆ ವೃತ್ತಕ್ಕೆ ಅದೇ ಹೆಸರು ಬಂದಿದೆ. ಈಗ ತಿಪ್ಪಜ್ಜಿ ಸರ್ಕಲ್ ಹೆಸರಿನಲ್ಲಿ ಚಿತ್ರ ತೆಗೆಯುತ್ತಿರುವುದು, ತಮ್ಮ ಅಜ್ಜಿಯನ್ನು ಕೆಟ್ಟದಾಗಿ ಬಿಂಬಿಸಲು ಹೊರಟಿರುವುದು ಸರಿಯಲ್ಲ ಎಂದು ಅವರ ಮೊಮ್ಮಗ ನಾಗರಾಜ್ ದೂರಿದ್ದಾರೆ.

ತಿಪ್ಪಜ್ಜಿ ಸರ್ಕಲ್ ಚಿತ್ರಕ್ಕೆ ತಡೆ ನೀಡಬೇಕು ಎಂದು ಅವರು ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಕೋರ್ಟ್ ಚಿತ್ರಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಹಾಗೂ ಚಿತ್ರದ ನಿರ್ದೇಶಕ ಆದಿತ್ಯ ಚಿಕ್ಕಣ್ಣ ಮತ್ತು ಚಿತ್ರಕಥೆಗಾರರಿಗೆ ನೋಟೀಸ್ ಜಾರಿ ಮಾಡಲಾಗಿದೆ.

ದೇವದಾಸಿ ಪಾತ್ರದಲ್ಲಿ ಪೂಜಾಗಾಂಧಿ

ಈ ಚಿತ್ರದಲ್ಲಿ ದೇವದಾಸಿ ಪಾತ್ರದಲ್ಲಿ ಪೂಜಾಗಾಂಧಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಅಜ್ಜಿಯನ್ನು ಚಿತ್ರದಲ್ಲಿ ಅವಹೇನಕಾರಿಯಾಗಿ ತೋರಿಸಲಾಗುತ್ತಿದೆ ಎಂದು ನಾಗರಾಜ್ ಅವರು ಆರೋಪಿಸಿದ್ದು ಬಿ.ಕೆ.ರೆಹಮತ್ ಉಲ್ಲಾ ಎಂಬ ವಕೀಲರ ಮೂಲಕ ನೋಟೀಸ್ ಜಾರಿ ಮಾಡಿದ್ದಾರೆ. ಲೇಖಕ ಬಿ.ಎಲ್. ವೇಣು ಅವರ ಕಥೆ ಆಧರಿಸಿದ ಚಿತ್ರ ಇದು.

ಬಿ.ಎಲ್.ವೇಣು ಪ್ರತಿಕ್ರಿಯಿಸಲು ನಿರಾಕರಣೆ

ಈ ಬಗ್ಗೆ ಬಿ.ಎಲ್.ವೇಣು ಅವರು ಪ್ರತಿಕ್ರಿಯಿಸುವುದಕ್ಕೆ ನಿರಾಕರಿಸಿದ್ದಾರೆ. ಇದು ಸತ್ಯಕಥೆ ಆಧಾರಿತ ಚಿತ್ರವಾಗಿದ್ದು, ತಿಪ್ಪಜ್ಜಿ ಎನ್ನುವ ದೇವದಾಸಿಯ ಯೌವನ, ಮಧ್ಯ ವಯಸ್ಸು, ನಂತರದ ಮುಪ್ಪಿನ ಬದುಕು ಈ ಚಿತ್ರದ ಕಥಾವಸ್ತು. ಆಕೆಯ ಇಬ್ಬರು ಹೆಣ್ಣುಮಕ್ಕಳನ್ನು ಮದುವೆ ಮಾಡಲು ಎರಡು ಮನೆ ಮಾರಿ ಪೆಟ್ಟಿಗೆ ಅಂಗಡಿಯಲ್ಲಿ ಬದುಕು ನಡೆಸುತ್ತಾಳೆ.

ತಿಪ್ಪಜ್ಜಿಗೆ ಹತ್ತಿರವಾಗುವ ಟಾಂಗಾ ಮಾಲಿಕ ಕರೀಂ ಸಾಬ್

ಮುಪ್ಪಿನಲ್ಲಿ ತಿಪ್ಪಜ್ಜಿಗೆ ಹತ್ತಿರವಾಗುವ ಟಾಂಗಾ ಮಾಲಿಕ ಕರೀಂ ಸಾಬ್ ಪಾತ್ರವೂ ಚಿತ್ರದಲ್ಲಿದೆ ಎನ್ನುತ್ತವೆ ಮೂಲಗಳೂ. ವಿ. ನಾಗೇಂದ್ರ ಪ್ರಸಾದ್ ಹಾಗೂ ಗೌಸ್ ಪೀರ್ ಸಾಹಿತ್ಯ ಚಿತ್ರಕ್ಕಿದ್ದು ಭರಣಿಶ್ರೀ ಸಂಗೀತ ನಿರ್ದೇಶಿಸಿದ್ದಾರೆ. ಇದೊಂದು ಕಲಾತ್ಮಕ ಚಿತ್ರವಾಗಲಿದೆ. ರಾಷ್ಟ್ರಪ್ರಶಸ್ತಿ ಬರುತ್ತೆ ಎಂಬ ನಿರೀಕ್ಷೆಯಲ್ಲಿ ಚಿಕ್ಕಣ್ಣ ಇದ್ದಾರೆ.

ಪೂಜಾಗಾಂಧಿ ಮಗಳ ಪಾತ್ರದಲ್ಲಿ ನಟಿ ನೇಹಾ

ಚಿತ್ರದಲ್ಲಿ ಪೂಜಾಗಾಂಧಿ ಮಗಳ ಪಾತ್ರದಲ್ಲಿ ನಟಿ ನೇಹಾ ಪಾಟೀಲ್ ಅಭಿನಯಿಸುತ್ತಿದ್ದಾರೆ. ಈ ಹಿಂದೆ ನೇಹಾ ಅವರು ಸಾಕಷ್ಟು ಕನ್ನಡ ಹಾಗೂ ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಶ್ರೀನಗರ ಕಿಟ್ಟಿ ಜೊತೆಗಿನ 'ಪಾರು ವೈಫ್ ಆಫ್ ದೇವದಾಸ್' ಚಿತ್ರವೂ ನಿರ್ಮಾಣ ಹಂತದಲ್ಲಿದೆ.

ಅಮ್ಮನ ದಾರಿಯಲ್ಲಿ ನಡೆಯೋಕೆ ನನಗೆ ಇಷ್ಟವಿರಲ್ಲ

'ತಿಪ್ಪಜ್ಜಿ ಸರ್ಕಲ್' ಚಿತ್ರದಲ್ಲಿ ನಾನು ಪೂಜಾಗಾಂಧಿಗೆ ಮಗಳಾಗಿ ಅಭಿನಯಿಸುತ್ತಿದ್ದೇನೆ. ದೇವದಾಸಿ ಮಗಳ ಪಾತ್ರ. ಅಮ್ಮನ ದಾರಿಯಲ್ಲಿ ನಡೆಯೋಕೆ ನನಗೆ ಇಷ್ಟವಿರಲ್ಲ. ಅವರ ವಿರುದ್ಧ ತಿರುಗಿ ನಿಲ್ಲುತ್ತೇನೆ. ಮೊದಲ ಬಾರಿಗೆ ಇಂತಹ ಬೋಲ್ಡ್ ಕ್ಯಾರೆಕ್ಟರ್ ಸಿಕ್ಕಿದೆ. ಅಭಿನಯಕ್ಕೆ ಸವಾಲೊಡ್ಡುವ ಪಾತ್ರ ಎಂದಿದ್ದಾರೆ ನೇಹಾ.

ಪೂಜಾ ಮಗಳಾಗಿ ಅಭಿನಯಿಸುತ್ತಿರುವುದಕ್ಕೆ ಖುಷಿ ಇದೆ

ಚಿತ್ರದಲ್ಲಿ ನಾನು ಉತ್ತರ ಕರ್ನಾಟಕದ ಹುಡುಗಿಯಾಗಿ ಕಾಣಿಸಿಕೊಳ್ಳುತ್ತೇನೆ. ಧಾರವಾಡ ಶೈಲಿ ಕನ್ನಡದಲ್ಲಿ ಮಾತನಾಡುತ್ತೇನೆ. ಪೂಜಾಗಾಂಧಿಗೆ ಮಗಳಾಗಿ ಅಭಿನಯಿಸುತ್ತಿರುವ ಬಗ್ಗೆ ಖುಷಿಯಾಗಿದೆ ಎನ್ನುತ್ತಾರೆ ನೇಹಾ.

Story first published:  Saturday, October 19, 2013, 17:06 [IST]
English summary
Actress Pooja Gandhi lead Kannada film Tippajji Circle lands in trouble. The court has given a stay on shooting of the film. The film based on a real life incident, which happened in Chitradurga district.
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter