twitter
    For Quick Alerts
    ALLOW NOTIFICATIONS  
    For Daily Alerts

    ಮೂವಿಲ್ಯಾಂಡ್ ಥಿಯೇಟರ್ ಬಳಿ ವಿತರಕನ ಕೊಲೆ

    By ಉದಯರವಿ
    |

    ಕನ್ನಡ ಚಿತ್ರೋದ್ಯಮದ ವಾಣಿಜ್ಯ ಕೇಂದ್ರ ಗಾಂಧಿನಗರ ಚಲನಚಿತ್ರ ವಿತರಕರೊಬ್ಬರ ಕೊಲೆಯೊಂದಕ್ಕೆ ಸಾಕ್ಷಿಯಾಗಿದೆ. ಮೂವಿಲ್ಯಾಂಡ್ ಚಿತ್ರಮಂದಿರದ ಮುಂಭಾಗದಲ್ಲೇ ಚಲನಚಿತ್ರ ವಿತರಕ ಹಾಗೂ ಪ್ರದರ್ಶಕ ಹನುಮಂತ ಕಟ್ಟಿಮನಿ (35) ಹೆಣವಾಗಿದ್ದಾರೆ.

    ಉತ್ತರ ಕರ್ನಾಟಕ ಮೂಲದವರಾದ ಕಟ್ಟಿಮನಿ ಅವರು ಕೆಲ ವರ್ಷಗಳ ಹಿಂದೆ ಗಾಂಧಿನಗರಕ್ಕೆ ಅಡಿಯಿಟ್ಟಿದ್ದರು. ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲಿಗರಾಗಿದ್ದ ಅವರು ಚಲನಚಿತ್ರ ಕಾರ್ಮಿಕರ ಪರ್ಯಾಯ ಒಕ್ಕೂಟಕ್ಕೆ ಹೋರಾಡಿದ್ದರು.

    Hanumantha Kattimani
    ಆದರೆ ಅವರ ಪರ್ಯಾಯ ಒಕ್ಕೂಟಕ್ಕೆ ಅಷ್ಟಾಗಿ ಬೆಂಬಲ ವ್ಯಕ್ತವಾಗಿರಲಿಲ್ಲ. ಕೊಲೆಗೆ ತತ್ ಕ್ಷಣದ ಕಾರಣ ಗೊತ್ತಿಲ್ಲದಿದ್ದರೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಾಂಧಿನಗರದ ಎ.ಆರ್. ಎಕ್ಸ್ ಟೆನ್ಷನ್ ನ ಕಟ್ಟಡವೊಂದರ ರೂಮಿನಲ್ಲಿ ವಾಸವಾಗಿದ್ದ ಅವರನ್ನು ದುಷ್ಕರ್ಮಿಗಳು ಕೊಲೆಗೈದಿದ್ದಾರೆ.

    ಅದೇ ಬಿಲ್ಡಿಂಗ್ ನ ಬಾಡಿಗೆದಾರ ಚಂದ್ರು ಎಂಬುವವರು ಕಟ್ಟಿಮನಿ ಅವರ ರೂಮಿನ ಬಾಗಿಲು ಓಪನ್ ಮಾಡಿದಾಗ ಅವರು ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಅವರ ಕುತ್ತಿಗೆಗೆ ವೈರ್ ನಿಂದ ಬಿಗಿದು ಕೊಲೆ ಮಾಡಲಾಗಿತ್ತು. ಶನಿವಾರ (ಏ.5) ಈ ಕೊಲೆ ಪ್ರಕರಣ ಬಯಲಿಗೆ ಬಂದಿದೆ.

    ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಾರಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಟ್ಟಿಮನಿ ವಾಸವಾಗಿದ್ದ ಅಕ್ಕಪಕ್ಕದ ರೂಮಿನವರು ರಾತ್ರಿ 7ಕ್ಕೆ ಕೆಲಸಕ್ಕೆ ಹೋದರೆ ಬರುವುದು ಬೆಳಗ್ಗೆ 11 ಗಂಟೆಗೆ. ಬಹುಶಃ ಕೊಲೆಗಾರರಿಗೆ ಈ ಮಾಹಿತಿಯೂ ಇತ್ತು ಎನ್ನಿಸುತ್ತದೆ. ಕನ್ನಡದ ಛತ್ರಪತಿ ಚಿತ್ರ ಸೇರಿದಂತೆ ಹಲವು ಚಿತ್ರಗಳಿಗೆ ಅವರು ವಿತರಕರಾಗಿ ಕೆಲಸ ಮಾಡಿದ್ದಾರೆ.

    English summary
    A a small-time exhibitor and distributor of films was found dead at his room opposite Movieland theatre in Gandhinagar on 5th April, Saturday. The police identified the dead man as Hanumantha Kattimani (35), who had founded the Karmika Paryaya Vedike, a cine workers’ forum, which is now defunct.
    Monday, April 7, 2014, 16:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X