twitter
    For Quick Alerts
    ALLOW NOTIFICATIONS  
    For Daily Alerts

    ಪಾಠ ಕಲಿಸಿದ ಗುರುವಿಗೆ ಚಿತ್ರೋದ್ಯಮದ ನುಡಿನಮನ

    |

    ಇಂದು ಶಿಕ್ಷಕರ ದಿನಾಚಾರಣೆ ಅರ್ಥಾತ್ ಮಾಜಿ ರಾಷ್ಟ್ರಪತಿ ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ (ಸೆ 5). 1962-66ರ ಅವಧಿಯಲ್ಲಿ ದೇಶದ ರಾಷ್ರಪತಿಗಳಾಗಿದ್ದ ರಾಧಾಕೃಷ್ಣನ್ ಅವರಿಗೆ ಶಿಕ್ಷಕರ ಕಡೆಗೆ ಅಪಾರ ಗೌರವ, ಪ್ರೀತಿ.

    ಸ್ವತಃ ಶಿಕ್ಷಕರಾಗಿದ್ದ ರಾಧಾಕೃಷ್ಣನ್ ದೇಶ ಕಂಡ ಅಗ್ರಗಣ್ಯ ಶಿಕ್ಷಕರು ಕೂಡಾ. ರಾಷ್ಟ್ರಪತಿಗಳಾಗಿದ್ದ ಅವಧಿಯಲ್ಲಿ ಅವರ ಆಪ್ತರು ಸೆಪ್ಟಂಬರ್ ಐದರಂದು ತನ್ನ ಹುಟ್ಟಿದ ಹಬ್ಬವನ್ನು ಆಚರಿಸಲು ಕೇಳಿಕೊಂಡಾಗ ನನ್ನ ಹುಟ್ಟುಹಬ್ಬವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ಹೇಳಿದರು. ಅಂದಿನಿಂದ ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ.

    ಅಕ್ಷರ ಕಲಿತ ಪ್ರತಿಯೊಬ್ಬರ ಬದುಕಿನಲ್ಲೂ ಗುರುವಿನ ಪಾತ್ರ ಮಹತ್ತರ. ಬೈದು, ಬಡಿದು, ಬೆನ್ನುತಟ್ಟಿ ಪಾಠ ಕಲಿಸುವ ಗುರುವನ್ನು ಮರೆಯಲಾಗುವುದಿಲ್ಲ. ಆಟ, ಪಾಠ, ಬದುಕಿನ ಪಾಠ ಹೇಳಿಕೊಟ್ಟ ಗುರುವಿನ ಸ್ಥಾನದಲ್ಲಿರುವ ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭ ಹಾರೈಕೆಗಳು.

    ಕನ್ನಡ ಚಿತ್ರರಂಗದ ಕೆಲವು ಸೆಲೆಬ್ರಿಟಿಗಳನ್ನು 'ಶಿಕ್ಷಕರ ದಿನಾಚರಣೆ'ಯ ಸಂದರ್ಭದಲ್ಲಿ ಮಾತನಾಡಿಸಿದಾಗ "ಗುರುಗಳಿಗೆ" ಅವರು ಸಲ್ಲಿಸಿದ ನುಡಿನಮನ ಸ್ಲೈಡಿನಲ್ಲಿ...

    ನಿಧಿ ಸುಬ್ಬಯ್ಯ

    ನಿಧಿ ಸುಬ್ಬಯ್ಯ

    ಮೈಸೂರಿನ ಸೆಂಟ್ರಲ್ ಸ್ಕೂಲಿನಲ್ಲಿ ನಾನು ಓದಿದ್ದು, ನನಗೆ ಒಟ್ಟು ಅಲ್ಲಿನ ಏಳು ಟೀಚರ್ ಬಹಳ ಫೆವರೇಟ್. ಹತ್ತು ವರ್ಷ ಅಲ್ಲಿ ಓದಿದೆ, ಅವರೆಲ್ಲರೂ ನನ್ನ ಕುಟುಂಬದವರು ಹಾಗೆ. ನನ್ನನ್ನು ತಿದ್ದಿ ನನಗೆ ಪಾಠ ಕಲಿಸಿದ್ದಾರೆ. NCC ಟೀಚರ್ ಮತ್ತು ಇತರ ಶಿಕ್ಷಕರು ನನಗೆ ಸ್ಪೂರ್ಥಿ ನೀಡಿದರು.

    ನಿರ್ದೇಶಕ ಶಶಾಂಕ್

    ನಿರ್ದೇಶಕ ಶಶಾಂಕ್

    ಪ್ರೈಮರಿ ಸ್ಕೂಲಿನ ದಿ. ಸೋಮಶೇಖರ್ ನನ್ನ ಫೆವರೇಟ್ ಟೀಚರ್. ನಾನು ಪ್ರೈಮರಿ ತರಗತಿ ಓದಿದ್ದು ವಿಶ್ವೇಶ್ವರಯ್ಯ ಶಾಲೆ, ಭದ್ರಾವತಿಯಲ್ಲಿ. ಸೋಮಶೇಖರ್ ಸ್ಕೂಲಿನ ಹೆಡ್ ಮಾಸ್ಟರ್ ಆಗಿದ್ದರು. ನನ್ನನ್ನು ಸ್ವಂತ ಮಗನ ಹಾಗೇ ನೋಡಿಕೊಳ್ಳುತ್ತಿದ್ದರು. ಅವರನ್ನು ಎಂದೂ ನಾನು ಮರೆಯುವುದಿಲ್ಲ.

    ನಿರ್ದೇಶಕಿ ಸುಮನಾ ಕಿತ್ತೂರು

    ನಿರ್ದೇಶಕಿ ಸುಮನಾ ಕಿತ್ತೂರು

    ನಾನು ಹೆಸರಾಂತ ಶಾಲೆಯಲ್ಲಿ ಓದಿದವಳಲ್ಲ ಮತ್ತು ತುಂಬಾ ಓದಿದವಳೂ ಅಲ್ಲ. ಕನ್ನಡ ಮೀಡಿಯಂ ಓದಿದ ನಾನು ಎಂದಿಗೂ ನೆನಪಿಸಿ ಕೊಳ್ಳುವುದು ಶಂಕರಪ್ಪ ಎನ್ನುವ ಟೀಚರ್ ಮತ್ತು ಅಗ್ನಿ ಶ್ರೀಧರ್ ಅವರನ್ನು. ಇಬ್ಬರನ್ನು ಎಂದಿಗೂ ನಾನು ಮರೆಯುವುದಿಲ್ಲ. ಇಬ್ಬರಿಗೂ ಶಿಕ್ಷಕರ ದಿನದ ಶುಭ ಹಾರೈಕೆಗಳು.

    ರಮೇಶ್ ಅರವಿಂದ್

    ರಮೇಶ್ ಅರವಿಂದ್

    ಎಲ್ಲಾ ಸೆಲೆಬ್ರಿಟಿಗಳನ್ನು ಒಂದು ತಕ್ಕಡಿಯಲ್ಲಿ ಕೂರಿಸಿ, ಇನ್ನೊಂದು ತಕ್ಕಡಿಯಲ್ಲಿ ಪ್ರೈಮರಿ ಶಾಲೆಯ ಟೀಚರನ್ನು ಕೂರಿಸಿದರೆ ಟೀಚರ್ ಇರುವ ತಕ್ಕಡಿಗೆ ಹೆಚ್ಚಿನ ತೂಕ ಬರುತ್ತದೆ. ಶಿಕ್ಷಕರಿಗೆ ಬೆಲೆ ಕಟ್ಟಲಾಗುವುದಿಲ್ಲ. ನಮ್ಮ ಜೀವನಕ್ಕೆ ಹೊಸ ದಾರಿ ತೋರಿಸಿದ ಪುಣ್ಯಾತ್ಮರು ಅವರು. ನನಗೆ ಒಟ್ಟು ಮೂರು ಜನ ಫೆವರೇಟ್ ಶಿಕ್ಷಕರಿದ್ದಾರೆ. ಒಬ್ಬರು ನನಗೆ ನಟನೆ ಕಲಿಸಿದವರು, ಇನ್ನೊಬ್ಬರು ನನಗೆ ಸ್ಟೇಜ್ ಫಿಯರ್ ದೂರ ಮಾಡಿ ಮೈಕ್ ಮುಂದೆ ಮಾತನಾಡಲು ಕಲಿಸಿದವರು ಮತ್ತೊಬ್ಬರು ನನ್ನನ್ನು ಲೀಡರನ್ನಾಗಿ ಮಾಡಿ ಸಾಂಸ್ಕ್ರುತಿಕ ಚಟುವಟಿಕೆ ಕಲಿಸಿದವರು.

    ನಿರ್ದೇಶಕ ಪ್ರಶಾಂತ್ ರಾಜ್

    ನಿರ್ದೇಶಕ ಪ್ರಶಾಂತ್ ರಾಜ್

    ನಾನು ಹಿಂದಿಯಲ್ಲಿ ಬಹಳ ವೀಕ್ ಆಗಿದ್ದೆ, ಹಾಗಾಗಿ ಹಿಂದಿ ಕ್ಲಾಸ್ ತಪ್ಪಿಸಿಕೊಳ್ಳುತ್ತಿದ್ದೆ. ಫಾತಿಮಾ ಮೇಡಂ ಹಿಂದಿ ಟೀಚರ್ ಆಗಿದ್ದರು, ಅವರು ನನಗೆ ವಿಶೇಷ ತರಗತಿ ನಡೆಸಿ ನನಗೆ ಆತ್ಮವಿಶ್ವಾಸ ತುಂಬಿದರು. ಅವರನ್ನು ಎಂದಿಗೂ ಮರೆಯಲಾಗದು.

    ಚೇತನ್ ಚಂದ್ರ

    ಚೇತನ್ ಚಂದ್ರ

    ನನಗೆ ಪಾಠ ಕಲಿಸಿದ ಕೆಲವರ ಜೊತೆ ಇಂದಿಗೂ ಸಂಪರ್ಕದಲ್ಲಿದ್ದೇನೆ. ಇಂದು ಮುಂಜಾನೆ ಎಲ್ಲರಿಗೂ ಕರೆ ಮಾಡಿ ಶುಭಾಷಯ ತಿಳಿಸಿದ್ದೇನೆ. ನನ್ನ ಜಿಮ್ ಕೋಚ್ ಪಾನಿ ಪುರಿ ಕಿಟ್ಟಿ ನನ್ನ ಫೆವರೇಟ್ ಟೀಚರ್, ಕೇಕ್ ಕಟ್ ಮಾಡಿ ಶಿಕ್ಷಕರ ದಿನ ಆಚರಿಸಿದ್ದೇನೆ.

    ನೆನಪಿರಲಿ ಪ್ರೇಮ್

    ನೆನಪಿರಲಿ ಪ್ರೇಮ್

    ನನ್ನ ಜೀವನವೇ ನನಗೆ ಮೊದಲ ಗುರು. ನನ್ನ ಎರಡನೇ ಗುರು ಅಂದರೆ ನನ್ನ ತಾಯಿ. ನಾನು ಇದುವರೆಗಿನ ಚಿತ್ರದ ನಿರ್ದೇಶಕರೂ ನನಗೆ ಗುರುಗಳು.

    ಮೈನಾ ಚೇತನ್

    ಮೈನಾ ಚೇತನ್

    ಯಾರ್ಲೆ ಯುನಿವರ್ಸಿಟಿಯ ಟೀಚರ್ ಬಾರ್ನೆ ಬೇಟ್ ನನ್ನ ಫೆವರೇಟ್ ಗುರುಗಳು.

    English summary
    Teachers day, Kannada celebrities remembers favorite gurus. 
    Thursday, September 5, 2013, 17:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X