Englishবাংলাગુજરાતીहिन्दीമലയാളംதமிழ்తెలుగు

ಈ ವರ್ಷದ ಮೊದಲ ಹಿಟ್ ಚಿತ್ರ ಚಾರ್ ಮಿನಾರ್

Posted by:
Updated: Saturday, April 6, 2013, 11:08 [IST]
 

ಫೆಬ್ರವರಿ 8, 2013ರಂದು ಬಿಡುಗಡೆಯಾದ 'ಚಾರ್ ಮಿನಾರ್' ಚಿತ್ರ ಅರ್ಧ ಶತಕ ಪೂರೈಸಿ 75ನೇ ದಿನದತ್ತ ದಾಪುಗಾಲು ಹಾಕಿದೆ. ಈ ಮೂಲಕ ವರ್ಷದ ಕನ್ನಡದ ಮೊದಲ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ. ನಾಲ್ಕು ಕಂಬನಿಗಳ ಕಹಾನಿ ಎಲ್ಲರ ಮನಗೆದ್ದಿದೆ. (ಚಿತ್ರದ ವಿಮರ್ಶೆ ಓದಿ)

ಚಂದ್ರು ಚೊಚ್ಚಲ ನಿರ್ಮಾಣದಲ್ಲಿ ಮೂಡಿಬಂದ ಈ ಚಿತ್ರ ನೈಜ ಘಟನೆ ಆಧಾರಿತವಾಗಿದೆ. ಚಿತ್ರದ ಯಶಸ್ಸು ಚಂದ್ರು ಅವರಿಗೆ ಮತ್ತಷ್ಟು ಉತ್ಸಾಹ ತಂದಿದೆ. ಅದೇ ರೀತಿ ನಾಯಕ ನಟ ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಅವರ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲಾಗಿ ನಿಂತಿದೆ.

ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ 'ಚಾರ್ ಮಿನಾರ್' ಶತಕ ಬಾರಿಸುತ್ತಿತ್ತೋ ಏನೋ ಗೊತ್ತಿಲ್ಲ. ಈಗ ಅದೇ ಚಿತ್ರಮಂದಿರಕ್ಕೆ ಶಿವಣ್ಣ ಅಭಿನಯದ ಅಂದರ್ ಬಾಹರ್ ಚಿತ್ರ ಅಂದರ್ ಆಗಿದೆ. ಚಾರ್ ಮಿನಾರ್ ಚಿತ್ರ ಬಾಹರ್ ಆಗಿದೆ.

ಕನ್ನಡ ಚಿತ್ರಗಳ ನಡುವೆಯೇ ಪೈಪೋಟಿ

ಮೈನಾ ಚಿತ್ರ ಬಿಡುಗಡೆಯಾದಾಗಲೂ ಸಾಗರ್ ಚಿತ್ರಮಂದಿರದಿಂದ ಚಾರ್ ಮಿನಾರ್ ಎತ್ತಂಗಡಿಯಾಗಿತ್ತು. ಒಟ್ಟಾರೆಯಾಗಿ ಕನ್ನಡ ಚಿತ್ರಗಳ ನಡುವೆಯೇ ಭಾರಿ ಪೈಪೋಟಿ ಎದುರಾಗಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ.

ತೆಲುಗಿಗೂ ಚಾರ್ ಮಿನಾರ್ ರೀಮೇಕ್

"ನಿಮ್ಮ ಹಳೆ ಲವ್ ಗಳು, ನಿಮ್ಮ ಹಳೇ ಡವ್ ಗಳು....ಫೆಬ್ರವರಿ 8ನೇ ತಾರೀಖು ಬಿಡುಗಡೆ ಆಗ್ತಾಯಿರೋ ನನ್ನ ಸಿನಿಮಾದಲ್ಲಿ ನೆನಪಾದ್ರೆ ಅದಕ್ಕೆ ನಾನು ಜವಾಬ್ದಾರನಲ್ಲ". ಇಂತಿ ನಿಮ್ಮ ಪ್ರೀತಿಯ ಆರ್ ಚಂದ್ರು ಎಂದು ನಿರ್ದೇಶಕರು ವಿಭಿನ್ನ ಶೈಲಿಯಲ್ಲಿ ಚಿತ್ರಕ್ಕೆ ಪ್ರಚಾರ ನೀಡಿದ್ದರು. ಈಗ ಅವರ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಚಾರ್ ಮಿನಾರ್ ಚಿತ್ರ ತೆಲುಗಿನಲ್ಲೂ ರೀಮೇಕ್ ಆಗುತ್ತಿದೆ.

ಹರಿ ಸಂಗೀತ ಗುರುಕಿರಣ್ ಹಿನ್ನೆಲೆ ಸಂಗೀತ

ಕೆ.ಎಸ್. ಚಂದ್ರಶೇಖರ್ ಅವರ ಛಾಯಾಗ್ರಹಣವಿರುವ ಚಿತ್ರಕ್ಕೆ ಹರಿ ಅವರ ಸಂಗೀತ ಹಾಗೂ ಗುರುಕಿರಣ್ ಹಿನ್ನೆಲೆ ಸಂಗೀತವಿದೆ. ತಾಜ್ ಮಹಲ್', 'ಪ್ರೇಮ್ ಕಹಾನಿ', 'ಮೈಲಾರಿ', 'ಕೋಕೋ' ಚಿತ್ರಗಳ ನಂತರ ಆರ್.ಚಂದ್ರು 'ಚಾರ್ ಮಿನಾರ್' ಚಿತ್ರವನ್ನು ನಿರ್ದೇಶಿಸಿದ್ದಾರೆ.

ಚಿತ್ರಕಥೆ, ಕಥೆ, ಸಂಭಾಷಣೆ ಆರ್ ಚಂದ್ರು

ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಆರ್.ಚಂದ್ರು, ಈ ಚಿತ್ರದ ನಿರ್ಮಾಪಕರು ಹೌದು. ಚಿತ್ರದ ನಾಯಕರಾಗಿ ಲವ್ಲಿಸ್ಟಾರ್ ಪ್ರೇಮ್ ಅಭಿನಯಿಸಿದ್ದಾರೆ. ಮೇಘನಾ ಗಾಂವ್ಕರ್, ಕುಮುದ ನಾಯಕಿಯರಾಗಿರುವ ಈ ಚಿತ್ರದ ತಾರಾಬಳಗದಲ್ಲಿ ರಂಗಾಯಣ ರಘು, ಸಾಧುಕೋಕಿಲಾ, ಬುಲೆಟ್ ಪ್ರಕಾಶ್, ವಿದ್ಯಾಮೂರ್ತಿ, ಹೊನ್ನವಳ್ಳಿ ಕೃಷ್ಣ ಮುಂತಾದವರಿದ್ದಾರೆ. ಇಮ್ರಾನ್, ಹರ್ಷ ನೃತ್ಯ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಚಿತ್ರಕ್ಕಿದೆ.

ಬಾಕ್ಸ್ ಆಫೀಸಲ್ಲೂ ಭಾರಿ ಸದ್ದು

ಸರಿಸುಮಾರು ರು.3.25 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಚಿತ್ರ ಬಾಕ್ಸ್ ಆಫೀಸಲ್ಲಿ ರು.4 ಕೋಟಿ ಬಾಚಿದೆ. ಸ್ಯಾಟಲೈಟ್ ರೈಟ್ಸ್ ಮೂಲಕವೇ ರು.1.25 ಕೋಟಿ ಬಂದಿದೆ ಎನ್ನುತ್ತವೆ ಮೂಲಗಳು.

Story first published:  Friday, April 5, 2013, 18:09 [IST]
English summary
Successful director R Chandru maiden production 'Charminar' Racing towards 75-day landmark. It is the first superhit Kannada film of 2013. he film featuring Prem Kumar and Meghana Gaonkar in the lead roles.
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter